ದೇಶ

ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆ: ಸೇನೆಯ 6 ಯೋಧರಿಗೆ ಶೌರ್ಯ ಚಕ್ರ ಪದಕ

Srinivas Rao BV

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಯಲ್ಲಿ ಶೌರ್ಯ ಪ್ರದರ್ಶಿಸಿದ ಭಾರತೀಯ ಸೇನೆಯ 6 ಯೋಧರಿಗೆ ಈ ಬಾರಿಯ ಶೌರ್ಯ ಚಕ್ರವನ್ನು ನೀಡಿ ಗೌರವಿಸಲಾಗುತ್ತಿದೆ. 

ಕಳೆದ ವರ್ಷ ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕಾರ್ಯಾಚರಣೆಯಲ್ಲಿ ಹೋರಾಡಿ ಉಗ್ರರನ್ನು ಹತ್ಯೆ ಮಾಡುವಲ್ಲಿ ಯಶಸ್ವಿಯಾಗಿದ್ದ ತಂಡದ ಭಾಗವಾಗಿದ್ದರು ಈ ಯೋಧರು.

ಮೇಜರ್ ಅರುಣ್ ಕುಮಾರ್ ಪಾಂಡೆ, ಮೇಜರ್ ರವಿ ಕುಮಾರ್ ಚೌಧರಿ, ಕ್ಯಾಪ್ಟನ್ ಅಶುತೋಷ್ ಕುಮಾರ್ (ಮರಣೋತ್ತರ) ಕ್ಯಾಪ್ಟನ್ ವಿಕಾಸ್ ಖತ್ರಿ, ರೈಫಲ್ ಮ್ಯಾನ್ ಮುಖೇಶ್ ಕುಮಾರ್ ಹಾಗೂ ಸಿಪಾಯಿ ನೀರಜ್ ಅಹ್ಲಾವತ್ ಅವರಿಗೆ ಶೌರ್ಯ ಚಕ್ರ ನೀಡಿ ಗೌರವಿಸಲಾಗುತ್ತಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ. 

ನಾಲ್ವರು ಸೇನಾಸ್ ಇಬ್ಬಂದಿಗಳಿಗೆ ಸೇನೆಯ ಪದಕ ದೊರೆತಿದ್ದರೆ, 116 ಮಂದಿಗೆ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ದಿನ ಪದಕಗಳನ್ನು ಘೋಷಿಸಲಾಗಿದೆ. 2020 ರ ಜೂನ್ 09 ಹಾಗೂ 10 ರಂದು ಜಮ್ಮು-ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ನಿಗ್ರಹ ಕಾರ್ಯಾಚರಣೆಗೆ ರಾಷ್ಟ್ರೀಯ ರೈಫಲ್ಸ್ ನ 44 ನೇ ಬೆಟಾಲಿಯನ್ ನ ಮೇಜರ್ ಪಾಂಡೇ ಅವರು ನೇತೃತ್ವ ವಹಿಸಿ ಇಬ್ಬರು ಕಟ್ಟರ್ ಉಗ್ರರನ್ನು ಹತ್ಯೆ ಮಾಡಿದ್ದರು. 

SCROLL FOR NEXT