ದೇಶ

ಕೊರೋನಾದಿಂದ ಬಳಲಿರುವ ಶ್ರೀಲಂಕಾಗೆ 35 ಟನ್ ಆಮ್ಲಜನಕ ಪೂರೈಸಲಿರುವ ಭಾರತ

Harshavardhan M

ನವದೆಹಲಿ: ಕೊರೊನಾ ಹಾವಳಿಯಿಂದ ತತ್ತರಿಸಿರುವ ಶ್ರೀಲಂಕಾದ ಆಸ್ಪತ್ರೆಗಳು ಅಮ್ಲಜನಕ ಕೊರತೆಯನ್ನು ಎದುರಿಸುತ್ತಿದ್ದು, ಭಾರತ 35 ಟನ್ ಆಮ್ಲಜನಕವನ್ನು ಒದಗಿಸಲಿದೆ. ಶ್ರೀಲಂಕಾದಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಏಕಾಏಕಿ ಹೆಚ್ಚಳ ಕಂಡ ಪರಿಣಾಮ ಆಸ್ಪತ್ರೆಗಳಲ್ಲಿ ಆಮ್ಲಜನಕದ ಕೊರತೆ ತಲೆದೋರಿತ್ತು. 

ಭಾರತ ಎರಡು ಕಂಟೈನರ್ ಗಳಲ್ಲಿ ಆಮ್ಲಜನಕ ಪೂರೈಕೆ ಮಾಡಲಿದೆ. ಇಂದು ಸಂಜೆ ಈ ಕಂಟೈನರ್ ಗಳನ್ನು ಕೊಂಡೊಯ್ಯಲು ಶ್ರೀಲಂಕಾ ನೌಕಾದಳ ತನ್ನ ಹಡಗೊಂದನ್ನು ಚೆನ್ನೈಗೆ ಕಳುಹಿಸಿದೆ. ಎಸ್ ಎಲ್ ಎನ್ ಎಸ್ ಎನ್ನುವ ಹೆಸರಿನ ಶ್ರೀಲಂಕಾ ಹಡಗು ಬುಧವಾರ ಸಂಜೆ ಚೆನ್ನೈ ನಗರವನ್ನು ತಲುಪಿ, ಗುರುವಾರ ಮುಂಜಾನೆ ಆಮ್ಲಜನಕದ ಕಂಟೈನರ್ ಹೊತ್ತುಕೊಂಡು ತನ್ನ ದೇಶಕ್ಕೆ ಮರಳಲಿದೆ. 

ಮುಂದಿನ ದಿನಗಳಲ್ಲಿ ಶ್ರೀಲಂಕಾ 100 ಮೆಟ್ರಿಕ್ ಟನ್ ಪ್ರಮಾಣದ ಆಮ್ಲಜನಕವನ್ನು ಭಾರತದಿಂದ ಆಮದು ಮಾಡಿಕೊಳ್ಳುವ ಬಗ್ಗೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಬೇಡಿಕೆಗೆ ತಕ್ಕಂತೆ ಶ್ರೀಲಂಕಾ ಭಾರತದ ಬಳಿ ಆಮ್ಲಜನಕ ಖರೀದಿ ಮಾಡಲಿದೆ. 

ಶ್ರೀಲಂಕಾದಲ್ಲಿ ಕೊರೊನಾ ಹಾವಳಿ ಹೆಚ್ಚಳಕ್ಕೆ ಡೆಲ್ಟಾ ವೈರಾಣು ಕಾರಣ ಎಂದು ಅಲ್ಲಿನ ಅರೋಗ್ಯಾಧಿಕಾರಿಗಳು ಈ ಹಿಂದೆ ತಿಳಿಸಿದ್ದರು.

SCROLL FOR NEXT