ದೇಶ

ಮಹಿಳೆಯರು 'ಎನ್ ಡಿಎ' ಪರೀಕ್ಷೆ ಬರೆಯಲು ಸುಪ್ರೀಂ ಕೋರ್ಟ್ ಅನುಮತಿ; ಸೇನೆಯಿಂದ ಲಿಂಗ ತಾರತಮ್ಯದ ಕ್ರಮ ಎಂದು ಕೋರ್ಟ್ ಛೀಮಾರಿ

Sumana Upadhyaya

ನವದೆಹಲಿ: ಸೆಪ್ಟೆಂಬರ್ 5ರಂದು ನಿಗದಿಯಾಗಿರುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿ(ಎನ್ ಡಿಎ) ಪರೀಕ್ಷೆಯನ್ನು ತೆಗೆದುಕೊಳ್ಳಲು ಮಹಿಳೆಯರಿಗೆ ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ನ್ಯಾಯಾಲಯದ ಅಂತಿಮ ಆದೇಶದ ಪ್ರಕಾರ ಪ್ರವೇಶಾತಿ ದೊರೆಯಲಿದೆ ಎಂದು ಉಚ್ಛ ನ್ಯಾಯಾಲಯ ಹೇಳಿದೆ.

ಇದೇ ಸಂದರ್ಭದಲ್ಲಿ ನ್ಯಾಯಾಲಯ, ಮಹಿಳೆಯರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡದಿರುವ ಸೇನೆಗೆ ಛೀಮಾರಿ ಹಾಕಿದೆ. ನೀತಿ ನಿರ್ಧಾರದ ಆಧಾರದ ಮೇಲೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಹೇಳುವ ಸೇನೆಯ ಕ್ರಮ ಲಿಂಗ ತಾರತಮ್ಯವನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ.

SCROLL FOR NEXT