ದೇಶ

ಅಫ್ಘಾನಿಸ್ತಾನದಿಂದ ರಕ್ಷಣೆ: ಇಂದು 300 ಭಾರತೀಯರು ದೇಶಕ್ಕೆ ವಾಪಸ್

Srinivas Rao BV

ನವದೆಹಲಿ: ತಾಲೀಬಾನ್ ಆಕ್ರಮಿಸಿಕೊಂಡಿರುವ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ವಾಪಸ್ ಕರೆತರುವ ಕಾರ್ಯಾಚರಣೆ ಚಾಲ್ತಿಯಲ್ಲಿದ್ದು  ಭಾನುವಾರ ಒಂದೇ ದಿನ 300 ಭಾರತೀಯರು ದೇಶಕ್ಕೆ ವಾಪಸ್ಸಾಗಲಿದ್ದಾರೆ ಎಂದು ಈ ಬೆಳವಣಿಗೆಗಳ ಬಗ್ಗೆ ಮಾಹಿತಿ ಲಭ್ಯವಿರುವ ಮೂಲಗಳಿಂದ ತಿಳಿದುಬಂದಿದೆ.

ಇದಕ್ಕೂ ಮುನ್ನ ತಜಕಿಸ್ತಾನದ ರಾಜಧಾನಿ ದುಶಾಂಬೆಗೆ ಶನಿವಾರ (ಆ.21)ರಂದು 80 ಮಂದಿ ಭಾರತೀಯರನ್ನು ಐಎಎಫ್ ನ ಮಿಲಿಟರಿ ಸಾರಿಗೆ ವಿಮಾನದ ಮೂಲಕ ಕರೆತರಲಾಗಿದ್ದು ಭಾನುವಾರದಂದು ಅವರು ಏರ್ ಇಂಡಿಯಾ ವಿಮಾನದ ಮೂಲಕ ಭಾರತ ತಲುಪಲಿದ್ದಾರೆ.

ಇನ್ನು ಐಎಎಫ್ ನ ಹೆವಿ ಲಿಫ್ಟ್ ವಿಮಾನದ ಮೂಲಕ 100 ಮಂದಿ ಭಾರತೀಯರನ್ನು ವಾಪಸ್ ಕರೆತರಲಾಗುತ್ತದೆ. ಇನ್ನು ಪ್ರತ್ಯೇಕ ಪ್ರಕರಣಗಳಲ್ಲಿ ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದ ವಿದೇಶಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ 90 ಕ್ಕೂ ಹೆಚ್ಚು ಮಂದಿ ಯುಎಸ್ ಹಾಗೂ ನ್ಯಾಟೋ ವಿಮಾನಗಳ ಮೂಲಕ ದೋಹಾ ತಲುಪಿದ್ದೂ ಅವರನ್ನೂ ಭಾನುವಾರ ವಾಪಸ್ ಕರೆಸಿಕೊಳ್ಳಲಾಗುತ್ತಿದೆ.

ಈ ರೀತಿಯಾಗಿ ಒಂದೇ ದಿನ ಭಾನುವಾರ (ಆ.22) ರಂದು ಭಾರತಕ್ಕೆ ಒಟ್ಟು 300 ಭಾರತೀಯರು ಅಫ್ಘಾನಿಸ್ತಾನದಿಂದ ವಾಪಸ್ಸಾಗಲಿದ್ದಾರೆ.

ಭಾರತ ಕಾಬೂಲ್ ನಲ್ಲಿದ್ದ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ  ರಾಯಭಾರಿ ಕಚೇರಿ, ರಾಜತಾಂತ್ರಿಕ ಕಚೇರಿಗಳಿಂದ 200 ಮಂದಿಯನ್ನು ಐಎಎಫ್ ನ ಎರಡು ಸಿ-17 ಹೆವಿ ಲಿಫ್ಟ್ ಸಾರಿಗೆ ವಿಮಾನಗಳ ಮೂಲಕ ಸುರಕ್ಷಿತವಾಗಿ ತಾಯ್ನಾಡಿಗೆ ಕರೆದುಕೊಂಡುಬಂದಿದೆ.

ಮೊದಲ ರಕ್ಷಣಾ ಕಾರ್ಯಾಚರಣೆಯಲ್ಲಿ 40 ಕ್ಕೂ ಹೆಚ್ಚು ಮಂದಿಯನ್ನು, ಬಹುತೇಕ ಬಂದಿ ಭಾರತೀಯ ರಾಯಭಾರಿ ಕಚೇರಿಯವರು ಭಾರತಕ್ಕೆ ಸುರಕ್ಷಿತವಾಗಿ ತಲುಪಿಸಲಾಗಿತ್ತು.

ಮಂಗಳವಾರದಂದು 150 ಮಂದಿಯನ್ನು ಎರಡನೇ ಸಿ-17 ವಿಮಾನದ ಮೂಲಕ ರಕ್ಷಿಸಲಾಗಿತ್ತು. 200 ಮಂದಿಯನ್ನು ಅಮೆರಿಕದ ಸಹಕಾರದೊಂದಿಗೆ ರಕ್ಷಿಸಲು ಸಾಧ್ಯವಾಗಿತ್ತು. ಅಫ್ಘಾನಿಸ್ತಾನದಲ್ಲಿರುವ ವಿಶೇಷ ಸೆಲ್ ನಲ್ಲಿ ಸಂಬಂಧಪಟ್ಟ ಮಾಹಿತಿಯನ್ನು ಹಂಚಿಕೊಳ್ಳುವಂತೆ ಭಾರತೀಯರಿಗೆ ವಿದೇಶಾಂಗ ಸಚಿವಾಲಯ ಹೇಳಿದೆ.

ಅಮೆರಿಕ ಹಾಗೂ ಇನ್ನಿತರ ಮಿತ್ರ ರಾಷ್ಟ್ರಗಳ ಮೂಲಕ ಭಾರತ ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಅಂದಾಜು 400 ಮಂದಿಯನ್ನು ರಕ್ಷಿಸಲು ಶತಪ್ರಯತ್ನ ನಡೆಸುತ್ತಿದೆ.

SCROLL FOR NEXT