ದೇಶ

ಕೋವಿಡ್-19 ಆರ್ಥಿಕ ಕುಸಿತದ ಪರಿಣಾಮ ಭಾರತದಲ್ಲಿ 1 ಲಕ್ಷ ಶಿಶುಗಳು ಸಾವು

Srinivas Rao BV

ನವದೆಹಲಿ: ಭಾರತದಲ್ಲಿ ಕೋವಿಡ್-19 ಆರ್ಥಿಕ ಕುಸಿತದ ಪರಿಣಾಮ 1 ಲಕ್ಷ ಶಿಶುಗಳ ಸಾವು ಸಂಭವಿಸಿರುವ ಸಾಧ್ಯತೆ ಇದೆ ಎಂದು ವಿಶ್ವ ಬ್ಯಾಂಕ್ ನ ಸಂಶೋಧಕರು ಅಂದಾಜಿಸಿದ್ದಾರೆ.

ಕಡಿಮೆ ಹಾಗೂ ಮಧ್ಯಮ ಆದಾಯವಿರುವ ರಾಷ್ಟ್ರಗಳಲ್ಲಿ ಕಳೆದ ವರ್ಷ 267,000 ಶಿಶುಗಳು ಸಾವನ್ನಪ್ಪಿದ್ದು, ಭಾರತದಲ್ಲಿನ ಮೂರನೇ ಒಂದರಷ್ಟು ಸಾವಿನ ಸಂಖ್ಯೆ ಇದಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

128 ರಾಷ್ಟ್ರಗಳಲ್ಲಿ 267,208 ಹೆಚ್ಚು ಮಕ್ಕಳ ಸಾವನ್ನು ಸಂಶೋಧಕರು ಅಂದಾಜಿಸಿದ್ದು, 2020 ರಲ್ಲಿ ಸಂಭವಿಸಿದ ಒಟ್ಟಾರೆ ಸಂಭವಿಸಿದ ಶಿಶುಗಳ ಸಾವಿನ ಪ್ರಮಾಣಕ್ಕಿಂತ ಶೇ.6.8 ರಷ್ಟು ಕೋವಿಡ್-19 ಆರ್ಥಿಕ ಕುಸಿತದಿಂದ ಸಂಭವಿಸಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ನೆಗೆಟೀವ್ ಆದಾಯದ ಪರಿಣಾಮ ಶಿಶುಗಳ ಮೇಲೆ ಉಂಟಾಗಲಿದೆ.

ಕೋವಿಡ್-19 ಚಿಕಿತ್ಸೆ ಹಾಗೂ ತಡೆಗಟ್ಟುವಿಕೆ ಆದ್ಯತೆಯ ವಿಷಯವಾಗಿದ್ದು, ಜಾಗತಿಕ ಸಮುದಾಯ ಸಾಮಾಜಿಕ ಭದ್ರತೆಯತ್ತಲೂ ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್-19 ಪ್ರಾರಂಭವಾದಗಲೇ ಸಂಶೋಧಕರು ಸಾಂಕ್ರಾಮಿಕದ ಮೊದಲ ಆರು ತಿಂಗಳಲ್ಲಿ 250000 ರಿಂದ 1.15 ಮಿಲಿಯನ್ ಮಕ್ಕಳ ಸಾವು ಸಂಭವಿಸಲಿದೆ ಎಂದು ಸಂಶೋಧಕರು ಅಂದಾಜಿಸಿದ್ದರು. ಬ್ರಿಟೀಷ್ ವೈದ್ಯಕೀಯ ಜರ್ನಲ್ ನಲ್ಲಿ ಸಂಶೋಧನೆಯ ವರದಿ ಪ್ರಕಟಗೊಂಡಿದ್ದು ಭಾರತದಲ್ಲಿ ಮೂರನೇ ಒಂದರಷ್ಟು ಹೆಚ್ಚು ಶಿಶುಗಳ ಮರಣ-99,642 ಅಂದಾಜಿಸಲಾಗಿದೆ ಎಂದು ಹೇಳಿದೆ.

SCROLL FOR NEXT