ದೇಶ

ಎಲ್ಗರ್ ಪರಿಷದ್ ಪ್ರಕರಣ ಆರೋಪಿಗಳು ದೇಶದ ವಿರುದ್ಧ ಯುದ್ಧ ಸಾರಲು ಬಯಸಿದ್ದರು: ಎನ್ ಐಎಯಿಂದ ಕರಡು ಆರೋಪ ಸಲ್ಲಿಕೆ

Sumana Upadhyaya

ಮುಂಬೈ: ಎಲ್ಗರ್ ಪರಿಷದ್-ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ಮುಂದೆ ಕರಡು ಆರೋಪಪಟ್ಟಿ ಸಲ್ಲಿಸಿದ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ ಐಎ), ಆರೋಪಿಗಳು ತಮ್ಮದೇ ಸ್ವಂತ ಸರ್ಕಾರ ರಚಿಸಿ ದೇಶದ ವಿರುದ್ಧ ಯುದ್ಧ ಸಾರಲು ನೋಡಿದ್ದರು ಎಂದು ಪ್ರತಿಪಾದಿಸಿದೆ.

ಎನ್ ಐಎ ಈ ತಿಂಗಳ ಆರಂಭದಲ್ಲಿ ವಿಶೇಷ ನ್ಯಾಯಾಲಯ ಮುಂದೆ ಕರಡು ಆರೋಪ ಪಟ್ಟಿಯ ಪ್ರತಿ ಲಭ್ಯವಾಗಿದೆ. 15 ಆರೋಪಿಗಳ ವಿರುದ್ಧ 17 ಆರೋಪಗಳನ್ನು ಪಟ್ಟಿ ಮಾಡಲಾಗಿದ್ದು ಅದರಲ್ಲಿ ಮಾನವ ಹಕ್ಕು ಹೋರಾಟ ಕಾರ್ಯಕರ್ತರು ಕೂಡ ಸೇರಿದ್ದಾರೆ. ಅವರನ್ನು ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (ಯುಎಪಿಎ) ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಯ ವಿವಿಧ ಸೆಕ್ಷನ್ ಗಳ ಅಡಿಯಲ್ಲಿ ಆರೋಪಿಸಲು ಕೋರಲಾಗಿದೆ.

ಆರೋಪಿಗಳು ನಿಷೇಧಿಸಿರುವ ಉಗ್ರರ ಗುಂಪು ಸಿಪಿಐ(ಮಾವೋವಾದಿಗಳು)ಯ ಸಕ್ರಿಯ ಸದಸ್ಯರಾಗಿದ್ದಾರೆ ಎಂದು ಎನ್ ಐಎ ಆರೋಪಿಸಿದೆ. ಪ್ರಕರಣದಲ್ಲಿ ಕಾರ್ಯಕರ್ತರಾದ ಸುಧಾ ಭಾರದ್ವಾಜ್, ವೆರ್ನಾನ್ ಗೊನ್ಸಾಲ್ವಿಸ್, ವರ್ಣಾರ್ ರಾವ್, ಹನ್ಯಾ ಬಾಬು, ಆನಂದ್ ತೇಲ್ತುಂಬ್ಡೆ, ಸೇನ್ ಶೋ, ಗೌತಮ್ ನವ್ಲಖ್ ಮತ್ತು ಲೇಖಕರು ಸೇರಿದ್ದಾರೆ.

ಕರಡು ಪಟ್ಟಿಯಲ್ಲಿ ದಾಖಲಿಸಿರುವ ಪ್ರಕಾರ, ಆರೋಪಿತ ವ್ಯಕ್ತಿಗಳ ಮುಖ್ಯ ಉದ್ದೇಶ ಜನತಾ ಸರ್ಕಾರ ವನ್ನು ರಚಿಸಿ ಕ್ರಾಂತಿಯನ್ನುಂಟುಮಾಡುವುದು. ಸರ್ಕಾರದಿಂದ ಅಧಿಕಾರ ಪಡೆದುಕೊಳ್ಳಲು ಸಶ್ತ್ರಾಸ್ತ್ರ ಹೋರಾಟ ನಡೆಸುವುದಾಗಿತ್ತು ಎಂದು ಹೇಳಲಾಗಿದೆ. ಭಾರತ ಮತ್ತು ಮಹಾರಾಷ್ಟ್ರ ಸರ್ಕಾರಗಳ ವಿರುದ್ಧ ಯುದ್ಧ ಮಾಡಲು ಆರೋಪಿಗಳು ಪ್ರಯತ್ನಿಸಿದ್ದರು. 

ಆರೋಪಿಗಳು ಭಯೋತ್ಪಾದಕ ಚಟುವಟಿಕೆಗಳಿಗಾಗಿ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್ ಸೇರಿದಂತೆ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು ನೇಮಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳಡಿಯಲ್ಲಿ ಆರೋಪ ದಾಖಲಿಸಲಾಗಿದೆ.

2017ರ ಡಿಸೆಂಬರ್ 31ರಂದು ಪುಣೆಯಲ್ಲಿ ನಡೆದ ಸಮ್ಮೇಳನದಲ್ಲಿ ಮಾಡಿದ ಪ್ರಚೋದಕ ಭಾಷಣಗಳಿಗೆ ಸಂಬಂಧಿಸಿದ ಕೇಸು ಇದಾಗಿದೆ. ಇದರಿಂದ ಮರುದಿನ ಪಶ್ಚಿಮ ಮಹಾರಾಷ್ಟ್ರ ನಗರದ ಹೊರವಲಯದಲ್ಲಿರುವ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರಕ್ಕೆ ಪ್ರಚೋದಿಸಿತು ಎಂದು ಪೊಲೀಸರು ಹೇಳಿದ್ದಾರೆ.

SCROLL FOR NEXT