ದೇಶ

ಇನ್ನುಮುಂದೆ ವಾಟ್ಸಾಪ್ ನಿಂದಲೇ ಕೊರೊನಾ ಲಸಿಕೆ ಅಪಾಯಿಂಟ್ಮೆಂಟ್ ಬುಕ್ ಮಾಡಬಹುದು!

ಅಗಸ್ಟ್ 5 ರಂದು  ಮೈ ಗವ್ ಕೊರೊನಾ ಸಹಾಯವಾಣಿ ವಾಟ್ಸಾಪ್ ಗ್ರೂಪಿನ ಮುಖಾಂತರ ಬಳಕೆದಾರರು ತಮ್ಮ ಲಸಿಕೆ ಪ್ರಮಾಣಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವ ಸವಲತ್ತನ್ನು ಜಾರಿಗೆ ತಂದಿತ್ತು. ಇದುವರೆಗೂ ಒಟ್ಟು 32 ಲಕ್ಷ ಮಂದಿ ಈ ಸವಲತ್ತನ್ನು ಬಳಸಿಕೊಂಡು ವ್ಯಾಕ್ಸಿನ್ ಸರ್ಟಿಫಿಕೆಟ್ ಅನ್ನು ಡೌನ್ ಲೋಡ್ ಮಾಡಿಕೊಂಡಿದ್ದರು.

ನವದೆಹಲಿ: ಮೈ ಗವ್ ಕೊರೊನಾ ಸಹಾಯವಾಣಿ(MyGov Corona Helpdesk)ಯ ವಾಟ್ಸಾಪ್ ಗುಂಪಿನ ಸಹಾಯದಿಂದ ಇನ್ನುಮುಂದೆ ವಾಟ್ಸಾಪ್ ಬಳಕೆದಾರರು ತಮ್ಮ ಹತ್ತಿರದ ಲಸಿಕಾ ಕೇಂದ್ರಗಳ ಮಾಹಿತಿ ಪಡೆಯಬಹುದು ಮತ್ತುಆಅ ಕೇಂದ್ರದಲ್ಲಿ ಲಸಿಕೆಯನ್ನು ಬುಕ್ ಮಾಡಬಹುದು. 

ಅಗಸ್ಟ್ 5 ರಂದು  ಮೈ ಗವ್ ಕೊರೊನಾ ಸಹಾಯವಾಣಿ ವಾಟ್ಸಾಪ್ ಗ್ರೂಪಿನ ಮುಖಾಂತರ ಬಳಕೆದಾರರು ತಮ್ಮ ಲಸಿಕೆ ಪ್ರಮಾಣಪತ್ರವನ್ನು ಡೌನ್ ಲೋಡ್ ಮಾಡಿಕೊಳ್ಳುವ ಸವಲತ್ತನ್ನು ಜಾರಿಗೆ ತಂದಿತ್ತು. ಇದುವರೆಗೂ ಒಟ್ಟು 32 ಲಕ್ಷ ಮಂದಿ ಈ ಸವಲತ್ತನ್ನು ಬಳಸಿಕೊಂಡು ವ್ಯಾಕ್ಸಿನ್ ಸರ್ಟಿಫಿಕೆಟ್ ಅನ್ನು ಡೌನ್ ಲೋಡ್ ಮಾಡಿಕೊಂಡಿದ್ದರು. ಇದೀಗ ಮತ್ತೊಂದು ಹೊಸ ಸವಲತ್ತನ್ನು ವಾಟ್ಸಾಪ್ ಬಳಕೆದಾರರಿಗೆ ನೀಡಲು ಮೈ ಗವ್ ಕೊರೊನಾ ಸಹಾಯವಾಣಿ ಮುಂದಾಗಿದೆ. 
 
ನಾಗರಿಕರು ಕೊರೊನಾ ಸಂಬಂಧಿ ಮಾಹಿತಿಯನ್ನು ಪಡೆದುಕೊಳ್ಳಲು ಮೈ ಗವ್ ಕೊರೊನಾ ಸಹಾಯವಾಣಿ ಅಧಿಕೃತ ಮೂಲವಾಗಿದೆ. 

ಮೈ ಗವ್ ಕೊರೊನಾ ಸಹಾಯವಾಣಿ ಸೇವೆಯನ್ನು ಪಡೆದುಕೊಳ್ಳಲು ವಾಟ್ಸಾಪ್ ಬಳಕೆದಾರರು ಮಾಡಬೇಕಿರುವುದಿಷ್ಟೇ.
+91 9013151515 ಈ ವಾಟ್ಸಾಪ್ ನಂಬರನ್ನು ನಿಮ್ಮ ಮೊಬೈಲಿನಲ್ಲಿ ಸೇವ್ ಮಾಡಿಕೊಳ್ಳಿ. ಲಸಿಕೆ ಬುಕ್ ಮಾಡಲು ಈ ಸಂಖ್ಯೆಗೆ Book Slot ಎಂದು ಟೈಪ್ ಮಾಡಿ ಕಳಿಸಿ. ಆಗ ನಿಮ್ಮ ಮೊಬೈಲ್ ಸಂಖ್ಯೆಗೆ ಒಟಿಪಿ ಕಳಿಸಲ್ಪಡುತ್ತದೆ. ಅದನ್ನು ನಮೂದಿಸಿದರೆ ನಂತರ ನಿಮಗೆ ಬೇಕಾದ ದಿನಾಂಕ ಮತ್ತು ಸ್ಥಳವನ್ನು ಆಯ್ಕೆ ಮಾಡಿಕೊಳ್ಳಬಹುದು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

SCROLL FOR NEXT