ಸಾಂದರ್ಭಿಕ ಚಿತ್ರ 
ದೇಶ

ಭಾರತ ಪ್ರವೇಶಿಸಲಿಚ್ಛಿಸುವ ಆಫ್ಘನ್ನರಿಗೆ ಇನ್ಮುಂದೆ ಇ-ವೀಸಾ ಕಡ್ಡಾಯ

ಕೆಲ ಆಫ್ಘನ್ನರ ಪಾಸ್ ಪೋರ್ಟ್ ಗಳು ಕಾಣೆಯಾಗಿರುವ ಬಗ್ಗೆ ವರದಿಗಳು ಕೇಳಿಬಂದ ಹಿನ್ನೆಲೆಯಲ್ಲಿ ಭಾರತ ಈ ಹಿಂದೆ ಆಫ್ಘನ್ನರಿಗೆ ನೀಡಿದ್ದ ವೀಸಾಗಳಿಗೆ ನಿರ್ಬಂಧ ಹೇರಿದೆ. ಕೇವಲ ಇ- ವೀಸಾಗಳು ಮಾತ್ರವೆ ಮಾನ್ಯತೆ ನೀಡಲಾಗುವುದು.

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟಿನಿಂದಾಗಿ ಭದ್ರತಾ ದೃಷ್ಟಿಯಿಂದ ಭಾರತಕ್ಕೆ ಬರಲು ಇಚ್ಛ್ಹಿಸುವ ಆಫ್ಘನ್ನರು ಕಡ್ಡಾಯವಾಗಿ ಇ-ವೀಸಾ ಹೊಂದಿರಬೇಕು ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಸೂಚನೆ ಹೊರಡಿಸಿದೆ. ತುರ್ತಿನ ಸನ್ನಿವೇಶ ಎದುರಾಗಿರುವುದರಿಂದ ಭಾರತೀಯ ವೀಸಾ ಆಕಾಂಕ್ಷಿಗಳಿಗೆ ಕ್ಷಿಪ್ರ ಗತಿಯಲ್ಲಿ ವೀಸಾ ನೀಡಿಕೆ ಪ್ರಕ್ರಿಯೆಯನ್ನು ನದೆಸಲು ಸಹಾಯವಾಗುವಂತೆ ಭಾರತ ಇ-ವೀಸಾ ಕಾರ್ಯಕ್ರಮ ಜಾರಿಗೊಳಿಸಿತ್ತು. 

ಕೆಲ ಆಫ್ಘನ್ನರ ಪಾಸ್ ಪೋರ್ಟ್ ಗಳು ಕಾಣೆಯಾಗಿರುವ ಬಗ್ಗೆ ವರದಿಗಳು ಕೇಳಿಬಂದ ಹಿನ್ನೆಲೆಯಲ್ಲಿ ಭಾರತ ಈ ಹಿಂದೆ ಆಫ್ಘನ್ನರಿಗೆ ನೀಡಿದ್ದ ವೀಸಾಗಳಿಗೆ ನಿರ್ಬಂಧ ಹೇರಿದೆ. ಕೇವಲ ಇ- ವೀಸಾಗಳು ಮಾತ್ರವೆ ಮಾನ್ಯತೆ ನೀಡಲಾಗುವುದು.

ಆಫ್ಘನ್ ನಾಗರಿಕರು ಭಾರತದ ಇ-ವೀಸಾ ಪಡೆಯಲು ಅಧಿಕೃತ ಜಾಲತಾನದಲ್ಲಿ ಮೊದಲು ಅರ್ಜಿ ಸಲ್ಲಿಸಬೇಕು. ಎಲ್ಲಾ ಆಫ್ಗನ್ನರು ಜಾತಿಭೇದಗಳ ಹಂಗಿಲ್ಲದೆ ಯಾರು ಬೇಕಾದರೂ ಭಾರತದ ಇ-ವೀಸಾಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ನವದೆಹಲಿಯಲ್ಲಿ ಅರ್ಜಿಯ ಪರಿಶೀಲನೆ ನಡೆಸಲಾಗುವುದು. 

ಆಗಸ್ಟ್ 17ರಂದು ಭಾರತ ಆಫ್ಘನ್ನರಿಗೆ ಇ-ವೀಸಾ ಘೋಷಣೆ ಮಾಡಿತ್ತು. ಅಫ್ಘಾನಿಸ್ತಾನದಲ್ಲಿ ಭಾರತ ತನ್ನೆಲ್ಲಾ ರಾಜತಾಂತ್ರಿಕ ಕಚೇರಿಗಳನ್ನು ಮುಚ್ಚಿರುವುದರಿಂದ ಆನ್ ಲೈನ್ ಮುಖಾಂತರ ಮಾತ್ರವೇ ಆಫ್ಘನ್ನರು ಇ-ವೀಸಾಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT