ನಾರಾಯಣ ರಾಣೆ 
ದೇಶ

ರಾಣೆ ಬೇರೆಯವರ ಮೇಲೆ ದಾಳಿ ಮಾಡಲು ಬಿಜೆಪಿ ನಿಯೋಜಿಸಿರುವ ನಾಯಿ: ನಾಲಿಗೆ ಹರಿಬಿಟ್ಟ ಶಿವಸೇನೆ ಶಾಸಕ

ಕೇಂದ್ರ ಸಚಿವ ನಾರಾಯಣ ರಾಣೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ನೀಡಿದ್ದ ಹೇಳಿಕೆಗೆ ಶಿವಸೇನೆ ಶಾಸಕರೊಬ್ಬರು ರಾಣೆ ವಿರುದ್ಧ ನಾಲಿಗೆ ಹರಿಯಬಿಟ್ಟಿದ್ದಾರೆ.

ಮುಂಬೈ: ಕೇಂದ್ರ ಸಚಿವ ನಾರಾಯಣ ರಾಣೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ನೀಡಿದ್ದ ಹೇಳಿಕೆಗೆ ಶಿವಸೇನೆ ಶಾಸಕರೊಬ್ಬರು ರಾಣೆ ವಿರುದ್ಧ ನಾಲಿಗೆ ಹರಿಯಬಿಟ್ಟಿದ್ದಾರೆ.

ನಾರಾಯಣ ರಾಣೆ ಬಿಜೆಪಿ ಅನ್ಯರ ಮೇಲೆ ದಾಳಿ ನಡೆಸಲು ನಿಯೋಜಿಸಿರುವ ನಾಯಿ, ಆದರೆ ಕೊನೆಗೆ ತಮ್ಮ ಪಕ್ಷವನ್ನೇ ಕಚ್ಚಲಿದ್ದಾರೆ ಎಂದು ಸಂತೋಷ್ ಬಂಗಾರ್ ಹೇಳಿದ್ದಾರೆ.

ಹಿಂಗೋಲಿ ಕಲಮ್ನುರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಸಂತೋಷ್ ಬಂಗಾರ್, ರಾಣೆ ವಿರುದ್ಧ ನಡೆದ ಪ್ರತಿಭಟನೆಯ ವೇಳೆ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ಇದೇ ವೇಳೆ ರಾಣೆ ಅವರನ್ನು ಸಂತೋಷ್ ಬಂಗಾರ್ "ಪಗ್ ಜಾತಿಯ ನಾಯಿ" ಎಂದೂ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

"ನಾರಾಯಣ ರಾಣೆ ಮನುಷ್ಯರಲ್ಲ. ಕೊಂಕಣ ಹಾಗೂ ಮುಂಬೈ ಜನತೆಯಿಂದ ತಿರಸ್ಕರಿಸಲ್ಪಟ್ಟವರಾಗಿದ್ದಾರೆ. ಇನ್ನು ಬಿಜೆಪಿಯನ್ನು ಬೇಮನ್ ಜನತಾ ಪಕ್ಷ (ಅಪ್ರಾಮಾಣಿಕ ಜನತಾ ಪಕ್ಷ) ಎಂದು ಹೇಳಿರುವ ಅವರು, ಬಿಜೆಪಿ ನಿಯೋಜಿಸಿರುವ ನಾಯಿ ಅದನ್ನೇ ಒಂದು ದಿನ ಕಚ್ಚಬಹುದೆಂದು ಎಚ್ಚರಿಸುತ್ತೇನೆ, ರಾಣೆ ಎಂದಿಗೂ ಯಾರಿಗೂ ನಿಷ್ಠರಾಗಿದ್ದವರಲ್ಲ. ನಿಮಗೆ ಹೇಗೆ ನಿಷ್ಠರಾಗಿರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ

ಉದ್ಧವ್ ಠಾಕ್ರೆ ಕಪಾಳಕ್ಕೆ ಬಾರಿಸುತ್ತಿದ್ದೆ ಎಂಬ ಹೇಳೆಕೆಗೆ ರಾಣೆಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಸೂರ್ಯನತ್ತ ಉಗುಳಿದರೆ ಅದು ಅಲ್ಲಿಗೆ ತಲುಪುವುದಿಲ್ಲ ಎಂದೂ ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT