ಕಾಲ್ಪನಿಕ ಚಿತ್ರ 
ದೇಶ

ಪತ್ನಿ ವಿಯೋಗ ತಾಳಲಾರದೆ ಆಕೆಯ ಚಿತೆಗೆ ಹಾರಿ ಪತಿ ಆತ್ಮಹತ್ಯೆ

ಪತ್ನಿಯ ಶವ ಸಂಸ್ಕಾರ ವೇಳೆ ನೀಲಮಣಿ, ದುಃಖತಪ್ತರಾಗಿ ಹತ್ತಿರದಲ್ಲಿ ಕುಳಿತುಕೊಂಡಿದ್ದರು. ಚಿತೆಗೆ ಬೆಂಕಿ ಸ್ಪರ್ಶ ನೀಡಿದ ಕೊಂಚ ಸಮಯದ ನಂತರ ಕುಟುಂಬಸ್ಥರು ಸ್ನಾನ ಮಾಡಲೆಂದು ಪಕ್ಕದ ಹೊಳೆಗೆ ತೆರಳಿದ್ದರು.

ಭುವನೇಶ್ವರ: ಪತ್ನಿಯ ಶವ ಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ವೃದ್ಧ ವ್ಯಕ್ತಿಯೋರ್ವ ಉರಿಯುತ್ತಿದ್ದ ಚಿತೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಒಡಿಶಾದಲ್ಲಿ ನಡೆದಿದೆ.

ಸಿಯಾಲ್ಜೋಡಿ ಎಂಬ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದ್ದು ಮೃತ ವೃದ್ಧ ನೀಲಮಣಿಗೆ 65 ವರ್ಷ ವಯಸ್ಸಾಗಿತ್ತು ಎಂಡು ತಿಳಿದುಬಂದಿದೆ. 

ನೀಲಮಣಿ ಪತ್ನಿ ರಾಯ್ಬರಿ ಹೃದಯಾಘಾತದಿಂದ ಮಂಗಳವಾರ ಮೃತಪಟ್ಟಿದ್ದರು. ಅವರ ಶವ ಸಂಸ್ಕಾರ ವೇಳೆ ನೀಲಮಣಿ ಪತ್ನಿ ವಿಯೋಗ ತಾಳಲಾರದೆ ದುಃಖತಪ್ತರಾಗಿ ಹತ್ತಿರದಲ್ಲಿ ಕುಳಿತುಕೊಂಡಿದ್ದರು.

ಚಿತೆಗೆ ಬೆಂಕಿ ಸ್ಪರ್ಶ ನೀಡಿದ ಕೊಂಚ ಸಮಯದ ನಂತರ ಕುಟುಂಬಸ್ಥರು ಸ್ನಾನ ಮಾಡಲೆಂದು ಪಕ್ಕದ ಹೊಳೆಗೆ ತೆರಳಿದ್ದರು. ಈ ಸಂದರ್ಭ ನೀಲಮಣಿ ಚಿತೆಯೊಳಗೆ ಹಾರಿದ್ದಾಗಿ ತಿಳಿದುಬಂದಿದೆ. 

ಸದ್ದು ಕೇಳಿ ಕುಟುಂಬಸ್ಥರು ಓಡಿ ಬರುವ ವೇಳೆಗೆ ನೀಲಮಣಿ ದೇಹ ಸಂಪೂರ್ಣ ಬೆಂಕಿಗೆ ಆಹುತಿಯಾಗಿ ಸುಟ್ಟು ಕರಕಲಾಗಿತ್ತು.

ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಘಟನೆ ನಡೆದ ಸ್ಥಳಕ್ಕೆ ಅಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT