ದೇಶ

ದಾಖಲೆ: ದೇಶದಲ್ಲಿ ಒಂದೇ ದಿನ 1 ಕೋಟಿ ಮಂದಿಗೆ ಕೋವಿಡ್-19 ಲಸಿಕೆ ಡೋಸ್!

Srinivas Rao BV

ನವದೆಹಲಿ: ಭಾರತದಲ್ಲಿ ಆ.27 ರಂದು ಶುಕ್ರವಾರ ಒಂದೇ ದಿನ ದಾಖಲೆಯ ಪ್ರಮಾಣದಲ್ಲಿ ಲಸಿಕೆ ಡೋಸ್ ಗಳನ್ನು ನೀಡಲಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಈ ಬಗ್ಗೆ ಮಾಹಿತಿ ನೀಡಿದ್ದು, ಕೋವಿನ್ ಪೋರ್ಟಲ್ ಮೂಲಕ ದೇಶದಲ್ಲಿ ಕೊರೋನಾ ವಿರುದ್ಧ ಈ ವರೆಗೂ 62,17,06,882 ಡೋಸ್ ಗಳ ಲಸಿಕೆಯನ್ನು ನೀಡಲಾಗಿದ್ದು. ಈ ವರೆಗೂ ಪೂರ್ಣವಾಗಿ ಲಸಿಕೆ ಪಡೆದವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. 

ದಾಖಲೆಯ ಪ್ರಮಾಣದಲ್ಲಿ ಲಸಿಕೆ ಅಭಿಯಾನವನ್ನು ಯಶಸ್ವಿಗೊಳಿಸಿದವರನ್ನೂ, ಲಸಿಕೆ ಪಡೆದವರನ್ನೂ ಮೋದಿ ಹೊಗಳಿದ್ದಾರೆ. 

"ಲಸಿಕೆ ಅಭಿಯಾನದ ಮೂಲಕ ದಾಖಲೆಯ ಸಂಖ್ಯೆಯನ್ನು ಪ್ರಧಾನಿ ಮೋದಿ ಉಲ್ಲೇಖಿಸಿದ್ದು, ಲಸಿಕೆ ಪಡೆಯುತ್ತಿರುವವರಿಗೆ ಈ ಅಭಿಯಾನದ ಯಶಸ್ಸಿನ ಕೀರ್ತಿ ಸಲ್ಲಬೇಕು" ಎಂದು ಮೋದಿ ಹೇಳಿದ್ದಾರೆ.

ಆರೋಗ್ಯ ಸಚಿವ ಮನ್ ಸುಖ್ ಮಾಂಡವೀಯ ಈ ಬಗ್ಗೆ ಟ್ವೀಟ್ ಮಾಡಿದ್ದು, ಎಲ್ಲರ ಜೊತೆ, ಎಲ್ಲರ ಜೊತೆ, ಎಲ್ಲರ ವಿಶ್ವಾಸ ಗಳಿಸಿ, ಎಲ್ಲ ಪ್ರಯತ್ನದೊಂದಿಗೆ ಎಂಬ ಮೋದಿ ಅವರ ಮಂತ್ರವನ್ನು ಉಲ್ಲೇಖಿಸಿದ್ದಾರೆ. ನಿರೀಕ್ಷಿತ ಫಲಿತಾಂಶವನ್ನು ಎದುರು ನೋಡುತ್ತಿರುವವರಿಗೆ ಈ ಮಂತ್ರದ ಮೂಲಕವೇ ಸಕಾರಾತ್ಮಕ ಫಲಿತಾಂಶ ನೀಡುವುದಕ್ಕೆ ಸಾಧ್ಯವಾಯಿತು ಎಂದು ಮೋದಿ ಹೇಳಿದ್ದಾರೆ.

ಕೋವಿನ್ ಪೋರ್ಟಲ್ ನಲ್ಲಿರುವ ಮಾಹಿತಿಯ ಪ್ರಕಾರ ಗುರುವಾರ ಒಂದೇ ದಿನ 1,00,64,032 ಮಂದಿಗೆ ಲಸಿಕೆ ನೀಡಲಾಗಿದೆ. ಇದಕ್ಕೂ ಮುನ್ನ ಆ.17 ರಂದು 88 ಲಕ್ಷ ಡೋಸ್ ಗಳು ದಿನವೊಂದರಲ್ಲಿ ನೀಡಲಾಗಿದ್ದ ಅತಿ ಹೆಚ್ಚಿನ ಲಸಿಕೆಯ ಪ್ರಮಾಣವಾಗಿದೆ.

SCROLL FOR NEXT