ರೈತನಿಗೆ ಸಿಕ್ಕ ವಜ್ರ 
ದೇಶ

ಮಧ್ಯ ಪ್ರದೇಶ ರೈತನಿಗೆ ಖುಲಾಯಿಸಿದ ಅದೃಷ್ಟ; ಸರ್ಕಾರದಿಂದ ಲೀಸ್ ಗೆ ಪಡೆದಿದ್ದ ಭೂಮಿಯಲ್ಲಿ 'ವಜ್ರ' ಪತ್ತೆ!

ಸರ್ಕಾರದಿಂದ ಲೀಸ್ ಗೆ ಪಡೆದಿದ್ದ ಭೂಮಿಯಲ್ಲಿ ಗಣಿಗಾರಿಕೆ ನಡೆಸುವಾಗ ರೈತನೋರ್ವನಿಗೆ ಬರೊಬ್ಬರಿ 6.47 ಕ್ಯಾರಟ್ ಗಾತ್ರದ ವಜ್ರ ಪತ್ತೆಯಾಗಿದೆ.

ಪನ್ನಾ: ಸರ್ಕಾರದಿಂದ ಲೀಸ್ ಗೆ ಪಡೆದಿದ್ದ ಭೂಮಿಯಲ್ಲಿ ಗಣಿಗಾರಿಕೆ ನಡೆಸುವಾಗ ರೈತನೋರ್ವನಿಗೆ ಬರೊಬ್ಬರಿ 6.47 ಕ್ಯಾರಟ್ ಗಾತ್ರದ ವಜ್ರ ಪತ್ತೆಯಾಗಿದೆ.

ಹೌದು.. ಮಧ್ಯ ಪ್ರದೇಶದ ಪನ್ನಾ ಜಿಲ್ಲೆಯ ರೈತನಿಗೆ ಈ ಬೃಹತ್ ವಜ್ರ ದೊರೆತಿದ್ದು, ಇದೀಗ ಈ ವಜ್ರ ದೊರೆತಿರುವ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.  ರೈತ ಪ್ರಕಾಶ ಮಜುಂದಾರ್‌ ಅವರಿಗೆ ಜಿಲ್ಲೆಯ ಜಾರುಪುರ್‌ ಗ್ರಾಮದ ಗಣಿಯಲ್ಲಿ ಶುಕ್ರವಾರ ಈ ಅತ್ಯುತ್ತಮ ದರ್ಜೆಯ ವಜ್ರ ದೊರೆತಿದೆ ಎಂದು ಈ ಭಾಗದ ವಜ್ರ ಗಣಿಗಾರಿಕೆ ಉಸ್ತುವಾರಿ ಅಧಿಕಾರಿಯಾಗಿರುವ ನೂತನ್‌ ಜೈನ್ ತಿಳಿಸಿದ್ದಾರೆ.

ಅಲ್ಲದೆ ಮುಂಬರುವ ಹರಾಜಿನಲ್ಲಿ ಈ ವಜ್ರವನ್ನು ಮಾರಾಟಕ್ಕಿಡಲಾಗುವುದು. ಅಲ್ಲಿ ಸರ್ಕಾರದ ಮಾರ್ಗದರ್ಶಿ ಸೂತ್ರಗಳ ಅನ್ವಯ ಇದರ ಬೆಲೆ ನಿರ್ಧಾರವಾಗಲಿದೆ. ತೆರಿಗೆ ಮತ್ತು ಸರ್ಕಾರದ ರಾಜಧನ ಪ್ರಮಾಣವನ್ನು ಕಡಿತ ಮಾಡಿ ಬಾಕಿ ಹಣವನ್ನು ರೈತನಿಗೆ ನೀಡುತ್ತೇವೆ ಎಂದು ಹೇಳಿದ್ದಾರೆ. ಮೂಲಗಳ ಪ್ರಕಾರ ಖಾಸಗಿ ಮಾರುಕಟ್ಟೆ  ಲೆಕ್ಕಾಚಾರದ ಪ್ರಕಾರ 6.47 ಕ್ಯಾರಟ್‌ ವಜ್ರಕ್ಕೆ ಹರಾಜಿನಲ್ಲಿ ಸುಮಾರು 30, ಲಕ್ಷ  ರೂ ಸಿಗಬಹುದು ಎಂದು ಲೆಕ್ಕಾಚಾರ ಹಾಕಲಾಗಿದೆ.

ಎರಡು ವರ್ಷಗಳಲ್ಲಿ ಆರನೇ ಬಾರಿ ಸಿಕ್ಕ ವಜ್ರ
ಇನ್ನು ರೈತ ಮಜುಂದಾರ್ ವಜದ್ರ ಸಿಕ್ಕಿರುವುದು ಇದೇ ಮೊದಲೇನಲ್ಲ.. ಕಳೆದ 2 ವರ್ಷಗಳಲ್ಲಿ 6 ಬಾರಿ ವಜ್ರ ದೊರೆತಿದೆ. ಸರ್ಕಾರದಿಂದ ಲೀಸ್‌ ಮೇಲೆ ಪಡೆದ ಜಮೀನಿನಲ್ಲಿ ಗಣಿಗಾರಿಕೆ ವೇಳೆ ಉತ್ಕೃಷ್ಟ ದರ್ಜೆಯ 6.47 ಕ್ಯಾರಟ್‌ ತೂಗುವ ವಜ್ರ ದೊರೆತಿದೆ.

ಇನ್ನು ವಜ್ರ ದೊರೆತ ಕುರಿತು ಸಂತಸ ಹಂಚಿಕೊಂಡಿರುವ ರೈತ ಮಜುಂದಾರ್, 'ಹರಾಜಿನಿಂದ ಬರುವ ಹಣದ ಪಾಲನ್ನು, ಗಣಿಗಾರಿಕೆಯಲ್ಲಿ ತೊಡಗಿದ ಇತರ ನಾಲ್ಕು ಮಂದಿ ಪಾಲುದಾರರ ಜೊತೆ ಹಂಚಿಕೊಳ್ಳುತ್ತೇನೆ. ನಾವು ಐದು ಮಂದಿ ಪಾಲುದಾರರಿದ್ದೇವೆ. 6.47 ಕ್ಯಾರಟ್‌ ತೂಗುವ ಈ ವಜ್ರವನ್ನು ಸರ್ಕಾರದ ವಜ್ರ ಖಜಾನೆಯಲ್ಲಿ ಭದ್ರವಾಗಿಡಲಾಗಿದೆ.  ಕಳೆದ ವರ್ಷ ತಮಗೆ ಗಣಿಯಿಂದ 7.44 ಕ್ಯಾರಟ್‌ ವಜ್ರ ದೊರೆತಿತ್ತು. ಇದರ ಜೊತೆಗೆ 2 ರಿಂದ 2.5 ಕ್ಯಾರಟ್‌ ತೂಕದ ವಜ್ರಗಳೂ ದೊರೆತಿವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

SCROLL FOR NEXT