ದೇಶ

ಕೊರೋನಾದಿಂದ ಚೇತರಿಸಿಕೊಂಡವರಿಗೆ ಕೋವ್ಯಾಕ್ಸಿನ್‌ ಒಂದೇ ಡೋಸ್ ಸಾಕು: ಅಧ್ಯಯನ

Lingaraj Badiger

ನವದೆಹಲಿ: ಕೊರೋನಾದಿಂದ ಚೇತರಿಸಿಕೊಂಡವರಿಗೆ ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್‌ನ ಒಂದು ಡೋಸ್ ಲಸಿಕೆ ಸಾಕಾಗಬಹದು ಎಂದು ಐಸಿಎಂಆರ್ ಅಧ್ಯಯನವೊಂದು ತಿಳಿಸಿದೆ.

ಈ ಹಿಂದೆ ಕೋವಿಡ್ -19 ಸೋಂಕಿತ ವ್ಯಕ್ತಿಗಳಲ್ಲಿ ಭಾರತ್ ಬಯೋಟೆಕ್‌ನ ಕೋವಾಕ್ಸಿನ್‌ನ ಒಂದು ಡೋಸ್ ಲಸಿಕೆಯು ಎರಡು ಡೋಸ್‌ಗಳಷ್ಟು ಪ್ರತಿಕಾಯ ಪ್ರತಿಕ್ರಿಯೆಯನ್ನು ಪಡೆಯುತ್ತದೆ. ಕೊರೋನಾ ಸೋಂಕಿನಿಂದ ಗುಣಮುಖರಾದವರಲ್ಲಿ ಪ್ರತಿರೋಧಕ ಶಕ್ತಿಯು ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತದೆ ಎಂದು ಐಸಿಎಂಆರ್ ಅಧ್ಯಯನ ತಿಳಿಸಿದ್ದು, ಈ ಅಧ್ಯಯನವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪತ್ರಿಕೆಯಲ್ಲಿ ಶನಿವಾರ ಪ್ರಕಟಿಸಲಾಗಿದೆ.

"ದೊಡ್ಡ ಜನಸಂಖ್ಯೆಯ ಅಧ್ಯಯನಗಳಲ್ಲಿ ನಮ್ಮ ಪ್ರಾಥಮಿಕ ಸಂಶೋಧನೆಗಳು ದೃಢಪಟ್ಟರೆ, ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ BBV152 ಲಸಿಕೆಯ ಒಂದು ಡೋಸ್ ಅನ್ನು ಶಿಫಾರಸು ಮಾಡಬಹುದು" ಎಂದು ಅಧ್ಯಯನ ಹೇಳಿದೆ.

ಭಾರತದ ಮೊದಲ ಸ್ಥಳೀಯ ಕೋವಿಡ್ -19 ಲಸಿಕೆ ಕೋವ್ಯಾಕ್ಸಿನ್, ಬಿಬಿವಿ 152 ಸಂಕೇತನಾಮವನ್ನು ಜನವರಿಯಲ್ಲಿ ಸರ್ಕಾರ ತುರ್ತು ಬಳಕೆಗಾಗಿ ಅನುಮೋದಿಸಿತು. ಪ್ರಸ್ತುತ ನಾಲ್ಕರಿಂದ ಆರು ವಾರಗಳ ಅಂತರದೊಂದಿಗೆ ಎರಡು ಡೋಸ್ ಲಸಿಕೆ ನೀಡಲಾಗುತ್ತಿದೆ.

SCROLL FOR NEXT