ಸಂಗ್ರಹ ಚಿತ್ರ 
ದೇಶ

ಕೇರಳ: ಪೊಲೀಸ್ ಲಾಕಪ್‌ನಿಂದ ತಪ್ಪಿಸಿಕೊಂಡು ಠಾಣೆಯ ಪಕ್ಕದಲ್ಲಿದ್ದ ನದಿಗೆ ಹಾರಿದ್ದ ಆರೋಪಿ ಜಲಸಮಾಧಿ!

ತೊಡುಪುಳ ಠಾಣೆಯಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಲಾಕ್‌ಅಪ್‌ನಿಂದ ತಪ್ಪಿಸಿಕೊಂಡು ಪಕ್ಕದ ನದಿಗೆ ಹಾರಿದ್ದ ಆದರೆ ದುರಾದೃಷ್ಟವಶಾತ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ತೊಡುಪುಳ(ಇಡುಕ್ಕಿ): ತೊಡುಪುಳ ಠಾಣೆಯಲ್ಲಿ ಪೊಲೀಸರ ವಶದಲ್ಲಿದ್ದ ಆರೋಪಿಯೊಬ್ಬ ಲಾಕ್‌ಅಪ್‌ನಿಂದ ತಪ್ಪಿಸಿಕೊಂಡು ಪಕ್ಕದ ನದಿಗೆ ಹಾರಿದ್ದ ಆದರೆ ದುರಾದೃಷ್ಟವಶಾತ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

35 ವರ್ಷದ ಆರೋಪಿ ಶಫಿ ಮೃತ ದುರ್ದೈವಿ ಎಂದು ಪೊಲೀಸರು ತಿಳಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಮುಂದಾದಾಗ ಪರಾರಿಯಾಗಿದ್ದಾನೆ.

ಲಾಕ್‌ಅಪ್ ಅನ್ನು ಸರಿಯಾಗಿ ಲಾಕ್ ಮಾಡಿರಲಿಲ್ಲ. ಹೀಗಾಗಿ ಆರೋಪಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನದಿಗೆ ಹಾರಿದ್ದ ಶಫಿಯನ್ನು ಸ್ಥಳೀಯರೊಂದಿಗೆ ಸೇರಿ ಪೊಲೀಸರು ದಡದ ಮೂಲಕ ಅಟ್ಟಿಸಿಕೊಂಡು ಹೋಗಿದ್ದರು. ಈ ವೇಳೆ ಸುಮಾರು ಒಂದು ಕಿಲೋಮೀಟರ್ ಈಜಿದನು. ಅಷ್ಟರಲ್ಲಿ ಅಲ್ಲಿಗೆ ಅಗ್ನಿಶಾಮಕ ದಳವೂ ಬಂದಿತ್ತು. ನಾವೆಲ್ಲರೂ ಅವನನ್ನು ದಡಕ್ಕೆ ಬರುವಂತೆ ಮನವಿ ಮಾಡಿದ್ದೇವು. ಆದರೆ ಅವನು ನಿರಾಕರಿಸಿದನು. ಸ್ವಲ್ಪ ಸಮಯದ ನಂತ ನೀರಿನಲ್ಲಿ ಮುಳುಗಿದನು ಎಂದು ಪೊಲೀಸರು ಹೇಳಿದರು.

ಶಫಿ ವಿರುದ್ಧ ಸುಮಾರು 18 ಅಥವಾ 19 ಪ್ರಕರಣಗಳು ದಾಖಲಾಗಿದ್ದು, ಇಂದು ಬೆಳಗ್ಗೆ ಹಲ್ಲೆ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಠಾಣೆಯ ಪಕ್ಕದಲ್ಲಿ ತೊಡುಪುಳ ನದಿ ಹರಿಯುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?