ದೇಶ

ಸರ್ಕಾರಿ ಸೇವೆಗಳಿಗೆ ತಮಿಳು ಕಡ್ಡಾಯ, ಅರ್ಹತಾ ಮಾನದಂಡ: ತಮಿಳುನಾಡು ಸರ್ಕಾರ

Lingaraj Badiger

ಚೆನ್ನೈ: ರಾಜ್ಯ ಸರ್ಕಾರ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇನ್ನು ಮುಂದೆ ತಮಿಳು ಭಾಷೆ ಕಡ್ಡಾಯವಾಗಿದ್ದು, ಈ ವಿಷಯದಲ್ಲಿ ಉತ್ತೀರ್ಣರಾದರೆ ಮಾತ್ರ ತಮಿಳುನಾಡು ಸರ್ಕಾರಿ ಸೇವೆ ಮತ್ತು ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ವಲಯದ ಉದ್ಯಮಗಳಲ್ಲಿ ಕೆಲಸ ಪಡೆಯಬಹುದು ಎಂದು ತಮಿಳುನಾಡು ಸರ್ಕಾರ ಶುಕ್ರವಾರ ಪ್ರಕಟಿಸಿದೆ.

ಡಿಸೆಂಬರ್ 1, 2021ರ ಸರ್ಕಾರಿ ಆದೇಶದ ಪ್ರಕಾರ, ರಾಜ್ಯ ಸರ್ಕಾರ ನಡೆಸುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 10ನೇ ತರಗತಿಯ ಮಾನದಂಡಗಳಿಗೆ ಅನುಗುಣವಾಗಿ ತಮಿಳು ಭಾಷೆಯ ಪೇಪರ್ ಕಡ್ಡಾಯವಾಗಿದೆ ಮತ್ತು ಇದರಲ್ಲಿ ಕನಿಷ್ಠ ಶೇಕಡಾ 40 ರಷ್ಟು ಅಂಕ ಪಡೆಯಬೇಕು ಎಂದು ಹೇಳಿದೆ.

ಅರ್ಹತಾ ತಮಿಳು ಭಾಷೆಯ ಪತ್ರಿಕೆಯಲ್ಲಿ ಆಕಾಂಕ್ಷಿಗಳು ತೇರ್ಗಡೆಯಾಗದಿದ್ದರೆ, ಒಟ್ಟಾರೆ ಪರೀಕ್ಷೆಯ ಯೋಜನೆಯ ಭಾಗವಾಗಿರುವ ಇತರ ವಿಷಯಗಳ ಪತ್ರಿಕೆಗಳನ್ನು ಮೌಲ್ಯಮಾಪನಕ್ಕೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಮಿಳು ಭಾಷೆಯ ಪೇಪರ್ ಕಡ್ಡಾಯವಾಗಿದ್ದು, ಅದರಲ್ಲಿ ಉತ್ತೀರ್ಣರಾದರೆ ಮಾತ್ರ ಸರ್ಕಾರಿ ಮತ್ತು ಪಿಎಸ್‌ಯು ಸೇವೆಗಳಿಗೆ ಪ್ರವೇಶಕ್ಕೆ ಅರ್ಹತೆ ಪಡೆಯಲಿದ್ದಾರೆ. ಈ ನಿಯಮವು ತಮಿಳುನಾಡು ಪಬ್ಲಿಕ್ ಸರ್ವಿಸ್ ಕಮಿಷನ್ ಸೇರಿದಂತೆ ಎಲ್ಲಾ ರಾಜ್ಯ ಸರ್ಕಾರದ ನೇಮಕಾತಿ ಏಜೆನ್ಸಿಗಳಿಗೆ ಅನ್ವಯಿಸುತ್ತದೆ ಎಂದು ಸರ್ಕಾರ ತಿಳಿಸಿದೆ.

SCROLL FOR NEXT