ದೇಶ

ಸೇನೆಯಿಂದ ನಾಗರಿಕರ ಹತ್ಯೆ: ನಾಗಾಲ್ಯಾಂಡ್‌ಗೆ ಭೇಟಿ ನೀಡಲು ನಾಲ್ವರು ಸದಸ್ಯರ ನಿಯೋಗ ರಚಿಸಿದ ಕಾಂಗ್ರೆಸ್

Lingaraj Badiger

ನವದೆಹಲಿ: ನಾಗಾಲ್ಯಾಂಡ್‌ಗೆ ಭೇಟಿ ನೀಡಿ, ಮೋನ್ ಜಿಲ್ಲೆಯಲ್ಲಿ ನಡೆದ ನಾಗರಿಕ ಹತ್ಯೆಗಳ ಕುರಿತು ಒಂದು ವಾರದೊಳಗೆ ವರದಿ ಸಲ್ಲಿಸಲು ಕಾಂಗ್ರೆಸ್ ಸೋಮವಾರ ನಾಲ್ವರು ಸದಸ್ಯರನ್ನೊಳಗೊಂಡ ನಿಯೋಗ ರಚಿಸಿದೆ.

"ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಾಗಾಲ್ಯಾಂಡ್‌ಗೆ ಭೇಟಿ ನೀಡಲು ನಿಯೋಗವನ್ನು ರಚಿಸಿದ್ದಾರೆ. ಈ ನಿಯೋಗ ನಾಗಾಲ್ಯಾಂಡ್‌ನ ಮೋನ್ ಜಿಲ್ಲೆಯಲ್ಲಿ ಇತ್ತೀಚೆಗೆ ಸೇನೆ ನಡೆಸಿದ ಅಮಾಯಕ ನಾಗರಿಕರ ಹತ್ಯೆ ಮತ್ತು ನಂತರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ವರದಿ ಮಾಡಲಿದೆ" ಎಂದು ಪಕ್ಷದ ಅಧಿಕೃತ ಪ್ರಕಟಣೆ ತಿಳಿಸಿದೆ.

ನಿಯೋಗದಲ್ಲಿ ಪಕ್ಷದ ಹಿರಿಯ ನಾಯಕರಾದ ಜಿತೇಂದ್ರ ಸಿಂಗ್, ಅಜೋಯ್ ಕುಮಾರ್, ಗೌರವ್ ಗೊಗೊಯ್ ಮತ್ತು ಆಂಟೊ ಆಂಟೋನಿ ಇದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.

ಈ ನಿಯೋಗವು ಒಂದು ವಾರದೊಳಗೆ ಕಾಂಗ್ರೆಸ್ ಅಧ್ಯಕ್ಷರಿಗೆ ವರದಿ ಸಲ್ಲಿಸಲಿದೆ ಎಂದು ಪಕ್ಷ ತಿಳಿಸಿದೆ.

ಕಾಂಗ್ರೆಸ್ ನಾಗಾಲ್ಯಾಂಡ್ ಜನರೊಂದಿಗೆ ಇದೆ ಎಂದು ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಹೇಳಿದ್ದಾರೆ.

SCROLL FOR NEXT