ದೇಶ

ಆಂಧ್ರಪ್ರದೇಶ, ಚಂಡೀಗಢದಲ್ಲಿ ಮೊದಲ ಓಮಿಕ್ರಾನ್ ಪ್ರಕರಣ ಪತ್ತೆ: ದೇಶದಲ್ಲಿ 35ಕ್ಕೆ ಏರಿದ ಸೋಂಕಿತರ ಸಂಖ್ಯೆ

Manjula VN

ನವದೆಹಲಿ: ಕೊರೊನಾ ರೂಪಾಂತರ ಓಮಿಕ್ರಾನ್​ನ ಮೊದಲ ಕೇಸ್ ಆಂಧ್ರಪ್ರದೇಶ ಹಾಗೂ ಚಂಡೀಗಢದಲ್ಲಿ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಗೆ ಸೇರಿದ 34 ವರ್ಷದ ವ್ಯಕ್ತಿಯಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಈ ವ್ಯಕ್ತಿ ನವೆಂಬರ್ 27ರಂದು ಐರ್ಲೆಂಡ್​ನಿಂದ ಭಾರತಕ್ಕೆ ಬಂದಿದ್ದು, ಮುಂಬೈ ವಿಮಾನ ನಿಲ್ದಾಣದಲ್ಲಿ ಆತನಿಗೆ ಆರ್​ಟಿಪಿಸಿಆರ್ ಕೋವಿಡ್ ಟೆಸ್ಟ್ ಮಾಡಲಾಗಿತ್ತು. ಆತನಲ್ಲಿ ಕೊರೊನಾ ವೈರಸ್ ಕಂಡು ಬಂದ ಹಿನ್ನೆಲೆಯಲ್ಲಿ ಆತನ ಗಂಟಲು ದ್ರವ ಮಾದರಿಯನ್ನು ಜೀನೋಮಿಕ್ ಪರೀಕ್ಷೆಗೆ ಹೈದರಾಬಾದ್​ನ ಸಿಸಿಎಂಬಿಗೆ ಕಳುಹಿಸಲಾಗಿತ್ತು. ಇದೀಗ ಆತನಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿದೆ ಎಂದು ಆಂಧ್ರಪ್ರದೇಶ ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇದರಂತೆ ಇಟಲಿಯಿಂದ ಸಂಬಂಧಿಕರ ಭೇಟಿ ಮಾಡಲು ಚಂಡೀಗಢಕ್ಕೆ ಬಂದಿದ್ದ 20 ವರ್ಷದ ವ್ಯಕ್ತಿಯಲ್ಲಿಯೂ ಓಮಿಕ್ರಾನ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಇದರೊಂದಿಗೆ ದೇಶದಲ್ಲಿ ಓಮಿಕ್ರಾನ್​ ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ-17 ದೆಹಲಿ-02, ಗುಜರಾತ್​-03, ರಾಜಸ್ಥಾನ-09, ಕರ್ನಾಟಕ -02 ಪ್ರಕರಣಗಳು, ಚಂಡೀಗಢ-01, ಆಂಧ್ರಪ್ರದೇಶ-01 ದಾಖಲಾಗಿವೆ.

SCROLL FOR NEXT