ದೇಶ

ಸೂಪರ್ ಸಾನಿಕ್ ಕ್ಷಿಪಣಿ ಬೆಂಬಲಿತ ಟೋರ್ಪೆಡೋ ವ್ಯವಸ್ಥೆ ಪರೀಕ್ಷೆ ಯಶಸ್ವಿ: ಭಾರತದ ಜಲಾಂತರ್ಗಾಮಿ ಯುದ್ಧನೌಕೆ ಸಾಮರ್ಥ್ಯ ಹೆಚ್ಚಳ 

Srinivas Rao BV

ಒಡಿಶಾ: ಸೂಪರ್ ಸಾನಿಕ್ ಕ್ಷಿಪಣಿ ಬೆಂಬಲಿತ ಟಾರ್ಪಿಡೊ ವ್ಯವಸ್ಥೆ (ಸ್ಮಾರ್ಟ್) ನ್ನು ಭಾರತ ಒಡಿಶಾದ ಬಾಲಾಸೋರ್ ನಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಈಗ ದೇಶದ ಜಲಾಂತರ್ಗಾಮಿ ಯುದ್ಧ ನೌಕೆ  ಸಾಮರ್ಥ್ಯ ಹೆಚ್ಚಳವಾಗಿದೆ. 

ಡಿಆರ್ ಡಿಒ ಈ ವ್ಯವಸ್ಥೆಯನ್ನು ಅಭಿವೃದ್ಧಿಪಾಡಿಸಿದ್ದು, ಮುಂದಿನ ಪೀಳಿಗೆಯ ಕ್ಷಿಪಣಿ ಆಧಾರಿತ ಟಾರ್ಪಿಡೊ ವ್ಯವಸ್ಥೆ ಇದಾಗಿದೆ.

ಕ್ಷಿಪಣಿ ಟಾರ್ಪಿಡೋ ಹಾಗೂ ಪ್ಯಾರಾಚೂಟ್ ನ್ನು ಬಿಡುಗಡೆ ಮಾಡುವ ಸಾಮರ್ಥ್ಯ ಹೊಂದಿದ್ದು ನಿರೀಕ್ಷಿತ ಫಲಿತಾಂಶ ದೊರೆತಿದೆ. ಬಿಡುಗಡೆಯ  ಯಾಂತ್ರಿಕ ವ್ಯವಸ್ಥೆ ಹಾಗೂ ಕ್ಷಿಪಣಿಯ ಪೂರ್ಣ ಶ್ರೇಣಿಯ ಸಾಮರ್ಥ್ಯವನ್ನು ಪರೀಕ್ಷೆಯ ವೇಳೆ ಪ್ರದರ್ಶಿಸಲಾಗಿದ್ದು, ಇದು ಎರಡನೇ ಬಾರಿ ನಡೆದಿರುವ ಪರೀಕ್ಷೆಯಾಗಿದೆ. 

ಇಡೀ ಪರೀಕ್ಷೆಯನ್ನು ರೆಡಾರ್ ಗಳು ಹಾಗೂ ಎಲೆಕ್ಟ್ರೋ ಆಪ್ಟಿಕ್ ಟೆಲಿಮೆಟ್ರಿ ಸಿಸ್ಟಮ್ ಮೇಲ್ವಿಚಾರಣೆಯಲ್ಲಿ ನಡೆಸಲಾಗಿದೆ ಎಂದು ಡಿಆರ್ ಡಿಒ ತಿಳಿಸಿದೆ. 

ಭಾರತದ ಜಲಾಂತರ್ಗಾಮಿ ಯುದ್ಧನೌಕೆ ಸಾಮರ್ಥ್ಯ ಹೆಚ್ಚಳಗೊಳಿಸುವ ಸೂಪರ್ ಸಾನಿಕ್ ಕ್ಷಿಪಣಿ ಬೆಂಬಲಿತ ಟೋರ್ಪೆಡೋ ವ್ಯವಸ್ಥೆ ಪರೀಕ್ಷೆ ಯಶಸ್ವಿಯಾಗಿರುವುದಕ್ಕೆ ಶ್ರಮಿಸಿದ ತಂಡಗಳಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.

SCROLL FOR NEXT