ಹರ್ನಾಜ್ ಕೌರ್ ಸಂಧು - ಶಶಿ ತರೂರ್ 
ದೇಶ

ಭುವನ ಸುಂದರಿ ಹರ್ನಾಜ್ ಸಂಧು ಭೇಟಿ ಮಾಡಿ, ಅಭಿನಂದಿಸಿದ ಶಶಿ ತರೂರ್

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ನೂತನವಾಗಿ 2021ರ ಭುವನ ಸುಂದರಿ ಕಿರೀಟ ಅಲಂಕರಿಸಿರುವ ಪಂಜಾಬ್ ಮೂಲದ ಹರ್ನಾಜ್ ಕೌರ್ ಸಂಧು ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ನವದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ನೂತನವಾಗಿ 2021ರ ಭುವನ ಸುಂದರಿ ಕಿರೀಟ ಅಲಂಕರಿಸಿರುವ ಪಂಜಾಬ್ ಮೂಲದ ಹರ್ನಾಜ್ ಕೌರ್ ಸಂಧು ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಡಿಸೆಂಬರ್ 13 ರಂದು ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಕೌರ್ ಸಂಧು ಅವರನ್ನು ವಿಜೇತ ಎಂದು ಘೋಷಿಸಲಾಯಿತು. 21 ವರ್ಷಗಳ ಬಳಿಕ ಭಾರತಕ್ಕೆ ಮತ್ತೊಮ್ಮೆ ಭುವನ ಸುಂದರಿ ಪಟ್ಟ ಒಲಿದಿದೆ.

ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಹರ್ನಾಜ್ ಸಂಧು ಅವರನ್ನು ಭೇಟಿ ಮಾಡಿ ಅಭಿನಂದಿಸಿದ ಫೋಟೋಗಳನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಮಿಸ್ ಯೂನಿವರ್ಸ್ ಹರ್ನಾಜ್ ಕೌರ್ ಸಂಧು ಅವರು ಭಾರತಕ್ಕೆ ವಿಜಯಶಾಲಿಯಾಗಿ ಹಿಂದಿರುಗಿದ್ದಕ್ಕಾಗಿ ಅವರನ್ನು ವೈಯಕ್ತಿಕವಾಗಿ ಅಭಿನಂದಿಸಲು ಸಂತೋಷವಾಗಿದೆ. ಸಹಜವಾಗಿ, ಅವರನ್ನು ಸ್ವಾಗತಿಸಲು ಹೆಮ್ಮೆಪಡುತ್ತೇನೆ. ಅವರು ವೇದಿಕೆಯಲ್ಲಿ ಕಾಣುವಂತೆಯೇ ವೈಯಕ್ತಿಕವಾಗಿಯೂ ಸಮಚಿತ್ತ ಮತ್ತು ಆಕರ್ಷಕರಾಗಿದ್ದಾರೆ ಎಂದು ತರೂರ್​​ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ