ಸಂಗ್ರಹ ಚಿತ್ರ 
ದೇಶ

ಮತದಾನದ ಗುರುತಿನ ಚೀಟಿಗೆ ಆಧಾರ್ ಜೋಡಣೆ: ಕೇಂದ್ರ ಸಚಿವ ಸಂಪುಟ ಅನುಮೋದನೆ

ಮತದಾನದಲ್ಲಿ ಮೋಸ ನಕಲಿ ಮತದಾನವನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಇನ್ಮುಂದೆ ಓಟರ್ ಐಡಿ(ಮತದಾನದ ಗುರುತಿನ ಚೀಟಿ) ಜೊತೆಗೆ ಆಧಾರ್ ಕಾರ್ಡ್‌ ಅನ್ನು ಲಿಂಕ್ ಮಾಡುತ್ತಿದೆ.

ನವದೆಹಲಿ: ಮತದಾನದಲ್ಲಿ ಮೋಸ ನಕಲಿ ಮತದಾನವನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, ಇನ್ಮುಂದೆ ಓಟರ್ ಐಡಿ(ಮತದಾನದ ಗುರುತಿನ ಚೀಟಿ) ಜೊತೆಗೆ ಆಧಾರ್ ಕಾರ್ಡ್‌ ಅನ್ನು ಲಿಂಕ್ ಮಾಡುತ್ತಿದೆ.

ಚುನಾವಣಾ ಸುಧಾರಣೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಸಂಪುಟ ಮಹತ್ವದ ನಿರ್ಧಾರ ಕೈಗೊಂಡಿರುವುದರಿಂದ ಮಸೂದೆಗೆ ಬುಧವಾರ ಅನುಮೋದನೆ ನೀಡಲಾಗಿದೆ. ಆದ್ದರಿಂದ ಮತದಾರರ ಪಟ್ಟಿಯಲ್ಲಿ ನಕಲಿ ಮತದಾನ ಹಾಗೂ ನಕಲು ತಡೆಯಲು ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು, ಒಂದೇ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವುದು ಮುಂತಾದ ನಿರ್ಧಾರವನ್ನು ಸೇರಿಸಲಾಗಿದೆ.

ಕ್ಯಾಬಿನೆಟ್ ಅಂಗೀಕರಿಸಿದ ಮಸೂದೆಯಲ್ಲಿ, ಸೇವಾ ಮತದಾರರಿಗೆ ಚುನಾವಣಾ ಕಾನೂನನ್ನು ಸಹ ‘ಲಿಂಗ ತಟಸ್ಥ’ ಮಾಡಲಾಗುವುದು. ಈಗ ಯುವಕರು ಒಂದು ವರ್ಷದಲ್ಲಿ ನಾಲ್ಕು ವಿಭಿನ್ನ ದಿನಾಂಕಗಳಲ್ಲಿ ಮತದಾರರಾಗಿ ಸೇರ್ಪಡೆಗೊಳ್ಳಲು ಸಾಧ್ಯವಾಗುತ್ತದೆ ಎಂಬ ನಿಬಂಧನೆಯನ್ನು ಮಸೂದೆಯಲ್ಲಿ ಮಾಡಲಾಗಿದೆ.

ಸದ್ಯ ಜ.1ರಂದು ಕಟ್ ಆಫ್ ಡೇಟ್ ಆಗಿರುವುದರಿಂದ ಹಲವು ಯುವಕರು ಮತದಾರರ ಪಟ್ಟಿಯಿಂದ ವಂಚಿತರಾಗುವ ವ್ಯವಸ್ಥೆ ಇತ್ತು. ಉದಾಹರಣೆಗೆ, ಜನವರಿ 2 ರಂದು ಕಟ್-ಆಫ್ ದಿನಾಂಕದ ಕಾರಣ, 18 ವರ್ಷ ವಯಸ್ಸನ್ನು ತಲುಪಿದ ನಂತರವೂ ಯುವಕರು ನೋಂದಾಯಿಸಲು ಸಾಧ್ಯವಾಗಿರಲಿಲ್ಲ. ಇದರಿಂದ ಹೊಸದಾಗಿ ಮತದಾರರಾಗಲು ಬಹಳ ಸಮಯ ಕಾಯಬೇಕಾಗಿರುತ್ತಿತ್ತು. ಆದರೆ ಈಗ ಮಸೂದೆಯ ಸುಧಾರಣೆಯ ನಂತರ, ಈಗ ಅವರು ವರ್ಷದಲ್ಲಿ ನಾಲ್ಕು ಬಾರಿ ನಾಮನಿರ್ದೇಶನ ಮಾಡಲು ಅವಕಾಶವನ್ನು ನೀಡಲಾಗಿದೆ.

ಹೆಂಡತಿ ಬದಲಿಗೆ 'ಸಂಗಾತಿ':
ಸೇವಾ ಮತದಾರರಿಗೆ ಸಂಬಂಧಿಸಿದ ಪ್ರಜಾಪ್ರತಿನಿಧಿ ಕಾಯ್ದೆಯ ನಿಬಂಧನೆಗಳಲ್ಲಿ ‘ಹೆಂಡತಿ’ ಪದವನ್ನು ‘ಸಂಗಾತಿ’ ಎಂದು ಬದಲಿಸಲು ಕಾನೂನು ಸಚಿವಾಲಯವನ್ನು ಕೇಳಲಾಯಿತು. ಅಲ್ಲದೆ, ಚುನಾವಣಾ ಆಯೋಗವು (ಇಸಿಐ) ನೋಂದಣಿಗೆ ಅವಕಾಶ ನೀಡಲು ಬಹು ಕಟ್-ಆಫ್ ದಿನಾಂಕಕ್ಕಾಗಿ ಕಾಯುತ್ತಿದೆ.

ಕಾನೂನು ಮತ್ತು ನ್ಯಾಯ ಸಚಿವಾಲಯವು ಇತ್ತೀಚೆಗೆ ಸಂಸತ್ತಿನ ಸಮಿತಿಗೆ ತಿಳಿಸಿದ್ದು, ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 14 ಬಿಗೆ ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಗಿದೆ. ಆದ್ದರಿಂದ ಪ್ರತಿ ವರ್ಷ ನೋಂದಣಿಗೆ ನಾಲ್ಕು ಕಟ್-ಆಫ್ ದಿನಾಂಕಗಳಿವೆ: ಜನವರಿ 1, ಏಪ್ರಿಲ್ 1, ಜುಲೈ ಮತ್ತು ಅಕ್ಟೋಬರ್‌ 1ರಂದು ಸೇರಿಸಬಹುದು.

ಸಾಮಾನ್ಯವಾಗಿ ಜನರು ತಮ್ಮ ಗ್ರಾಮದೊಂದಿಗೆ ಅವರು ಕೆಲಸ ಮಾಡುವ ನಗರ ಅಥವಾ ಮಹಾನಗರದಲ್ಲಿ ಮತ ಚಲಾಯಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಮತದಾರರ ಪಟ್ಟಿಯಲ್ಲಿ ಅನೇಕ ಸ್ಥಳಗಳಲ್ಲಿ ಹೆಸರು ಸೇರ್ಪಡೆಗೊಳ್ಳುತ್ತದೆ. ಆದರೆ ಆಧಾರ್‌ನೊಂದಿಗೆ ಲಿಂಕ್ ಮಾಡಿದ ನಂತರ, ಯಾವುದೇ ನಾಗರಿಕರು ಒಂದೇ ಸ್ಥಳದಲ್ಲಿ ಮಾತ್ರ ಮತ ಚಲಾಯಿಸಲು ಸಾಧ್ಯವಾಗುತ್ತದೆ. ಆದಾಗ್ಯೂ, ಸರ್ಕಾರವು ಮಾಡಿದ ಸುಧಾರಣೆಗಳ ಅಡಿಯಲ್ಲಿ, ಮತದಾರರ ಪಟ್ಟಿಯನ್ನು ಸ್ವಯಂಪ್ರೇರಿತ ಆಧಾರದ ಮೇಲೆ ಆಧಾರ್‌ನೊಂದಿಗೆ ಲಿಂಕ್ ಮಾಡಬಹುದು.

ಈ ಮಸೂದೆಯಲ್ಲಿ, ಮಿಲಿಟರಿ ಮತದಾರರ ಪ್ರಕರಣದಲ್ಲಿ ಚುನಾವಣೆ ಸಂಬಂಧಿತ ಕಾನೂನನ್ನು ಲಿಂಗ ತಟಸ್ಥಗೊಳಿಸಲು ಅವಕಾಶವಿದೆ. ಪ್ರಸ್ತುತ ಚುನಾವಣಾ ಕಾನೂನು ಇದರಲ್ಲಿ ತಾರತಮ್ಯವನ್ನು ಹೊಂದಿದೆ. ಉದಾಹರಣೆಗೆ ಈಗಿರುವ ಕಾನೂನಿನಲ್ಲಿ ಪುರುಷ ಯೋಧನ ಪತ್ನಿಗೆ ಸೇನಾ ಮತದಾರರಾಗಿ ನೋಂದಣಿ ಮಾಡಿಕೊಳ್ಳುವ ಸೌಲಭ್ಯವಿದ್ದರೂ ಮಹಿಳಾ ಸೈನಿಕರ ಪತಿಗೆ ಅಂತಹ ಸೌಲಭ್ಯವಿಲ್ಲ. ಚುನಾವಣಾ ಕಾನೂನಿನಲ್ಲಿ ‘ಹೆಂಡತಿ’ ಎಂಬ ಪದದ ಬದಲು ಸಂಗಾತಿ ಎಂದು ಬರೆಯಬೇಕು, ಆಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಚುನಾವಣಾ ಆಯೋಗ ಕಾನೂನು ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT