ಮಹಿಳಾ ದ್ವೇಷಿ ವರ್ತನೆಯಲ್ಲಿ ಕಾಂಗ್ರೆಸ್, ಬಿಜೆಪಿ ಒಟ್ಟಾಗಿವೆ: ಪ್ರಣಬ್ ಪುತ್ರಿ
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅತ್ಯಾಚಾರ ಹೇಳಿಕೆ ಬಗ್ಗೆ ಕಾಂಗ್ರೆಸ್ ಮುಖಂಡೆ ಶರ್ಮಿಷ್ಠಾ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ. ರಮೇಶ್ ಕುಮಾರ್ ತಮಾಷೆ ಮಾಡಿದರೆ, ಬಿಜೆಪಿ ಸ್ಪೀಕರ್ ನಗುತ್ತಿದ್ದಾರೆ. ಇಬ್ಬರೂ ಮಹಿಳಾ ದ್ವೇಷಿ ವರ್ತನೆ ತೋರಿರುವುದು ನಾಚಿಕೆಗೇಡಿತನದ್ದು ಎಂದಿದ್ದಾರೆ.
ನವದೆಹಲಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅತ್ಯಾಚಾರ ಹೇಳಿಕೆ ಬಗ್ಗೆ ಕಾಂಗ್ರೆಸ್ ಮುಖಂಡೆ ಶರ್ಮಿಷ್ಠಾ ಮುಖರ್ಜಿ ಪ್ರತಿಕ್ರಿಯಿಸಿದ್ದಾರೆ. ರಮೇಶ್ ಕುಮಾರ್ ತಮಾಷೆ ಮಾಡಿದರೆ, ಬಿಜೆಪಿ ಸ್ಪೀಕರ್ ನಗುತ್ತಿದ್ದಾರೆ. ಇಬ್ಬರೂ ಮಹಿಳಾ ದ್ವೇಷಿ ವರ್ತನೆ ತೋರಿರುವುದು ನಾಚಿಕೆಗೇಡಿತನದ್ದು ಎಂದಿದ್ದಾರೆ.
ರಮೇಶ್ ಕುಮಾರ್ ಅತ್ಯಾಚಾರ ಹೇಳಿಕೆ ಕುರಿತು ಶುಕ್ರವಾರ ಕಾಂಗ್ರೆಸ್ ಪಕ್ಷವನ್ನು ಟೀಕಿಸಿರುವ ಬಿಜೆಪಿ, ಈ ವಿಚಾರದಲ್ಲಿ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಮೌನವನ್ನು ಪ್ರಶ್ನಿಸಿತ್ತು. ಮಹಿಳೆಯರ ಬಗ್ಗೆ ಇಂತಹ ಅಪಮಾನದ ಹೇಳಿಕೆ ನೀಡಿರುವ ಇತಿಹಾಸವನ್ನು ಕಾಂಗ್ರೆಸ್ ಪಕ್ಷದ ನಾಯಕರು ಹೊಂದಿದ್ದಾರೆ ಎಂದು ಆರೋಪಿಸಿದೆ.
ಆದಾಗ್ಯೂ, ರಮೇಶ್ ಕುಮಾರ್ ಅತ್ಯಾಚಾರ ಹೇಳಿಕೆಗೆ ಆಕ್ಷೇಪಿಸದೆ ನಗುತ್ತಿದ್ದ ಆಡಳಿತಾರೂಢ ಬಿಜೆಪಿ ಪಕ್ಷದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ತನ್ನದೇ ಪಕ್ಷದ ವಕ್ತಾರರಾದ ಅಪರಾಜಿತ ಸಾರಂಗಿ ಟೀಕಿಸಿದಾಗ ಬಿಜೆಪಿ ಕೂಡಾ ಮುಜುಗರ ಎದುರಿಸುವಂತಾಯಿತು. ಅಂತಹ ಆಕ್ಷೇಪಾರ್ಹ ಹೇಳಿಕೆ ನೀಡಿದರೂ ಏನನ್ನೂ ಹೇಳದ ಸ್ಪೀಕರ್ ನಡೆ ದುಃಖಕರದು ಎಂದು ಆಕೆ ಹೇಳಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.