ದೇಶ

ರಮೇಶ್ ಕುಮಾರ್ ಹೇಳಿಕೆ ಅತ್ಯಂತ ದುಃಖಕರ, ದುರದೃಷ್ಟ, ಅಸಹ್ಯಕರ: ರಾಷ್ಟ್ರೀಯ ಮಹಿಳಾ ಆಯೋಗ ಖಂಡನೆ

Nagaraja AB

ನವದೆಹಲಿ: ಅತ್ಯಾಚಾರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು"ಅತ್ಯಂತ ದುಃಖಕರ, ದುರದೃಷ್ಟದ ಹೇಳಿಕೆಯಾಗಿದೆ. ದೇಶವು ಇನ್ನೂ ಸ್ತ್ರೀದ್ವೇಷ ಹೊಂದಿರುವ ಸಾರ್ವಜನಿಕ ಪ್ರತಿನಿಧಿಗಳನ್ನು ಹೊಂದಿದೆ ಎಂದಿದ್ದಾರೆ. 

ಅತ್ಯಾಚಾರ ತೆಡಯಲು ಸಾಧ್ಯವಾಗದಿದ್ದಾಗ ಮಲಗಿ ಆನಂದಿಸಿ ಎಂದು ಹಿರಿಯ ಕಾಂಗ್ರೆಸ್ ಮುಖಂಡ ರಮೇಶ್ ಕುಮಾರ್ ಗುರುವಾರ ಸದನದಲ್ಲಿ ನೀಡಿದ್ದ ಹೇಳಿಕೆ ರಾಷ್ಟ್ರದಾದ್ಯಂತ ತೀವ್ರ ವಿವಾದಕ್ಕೆ ಕಾರಣವಾಗಿದೆ.  ಇದು ಅತ್ಯಂತ ದು;ಖಕರ ಹಾಗೂ ದುರದೃಷ್ಟದ ಹೇಳಿಕೆಯಾಗಿದ್ದು, ಈಗಲೂ ನಾವು ಮಹಿಳಾ ದ್ವೇಷಿ ಹೊಂದಿರುವ ಸಾರ್ವಜನಿಕ ಪ್ರತಿನಿಧಿಗಳನ್ನು ಹೊಂದಿರುವುದಾಗಿ ರೇಖಾ ಶರ್ಮಾ ಟ್ವೀಟ್ ಮಾಡಿದ್ದಾರೆ.

ಇದು ನಿಜವಾಗಿಯೂ ಅಸಹ್ಯಕರವಾಗಿದೆ. ಸದನದಲ್ಲಿ ಕುಳಿತು ಈ ರೀತಿ ಹೇಳಿಕೆ ನೀಡುವುದಾದರೆ ಅವರೊಂದಿಗಿರುವ ಮಹಿಳೆಯರೊಂದಿಗೆ ಯಾವ ರೀತಿ ಅವರು ವರ್ತಿಸುತ್ತಾರೆ ಎಂದು ಮತ್ತೊಂದು ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ. 

ದೆಹಲಿಯಲ್ಲಿ ಒಂಬತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ದಿನದಂದೇ ಕಾಂಗ್ರೆಸ್ ಶಾಸಕರು ಇಂತಹ ಹೇಳಿಕೆ ನೀಡಿರುವುದು ನಾಚಿಕೆಯನ್ನುಂಟು ಮಾಡುತ್ತದೆ ಎಂದು ಪಿಎಆರ್ ಐ ಮುಖ್ಯಸ್ಥೆ ಯೋಗಿತಾ ಭಾಯನಾ ಟೀಕಿಸಿದ್ದಾರೆ. ರಮೇಶ್ ಕುಮಾರ್ ಅವರ ಹೇಳಿಕೆಯ ವಿಡಿಯೋವನ್ನು ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

SCROLL FOR NEXT