ದೇಶ

ಹಸಿವಿನ ಸೂಚ್ಯಂಕ, ರೈತರ ಆತ್ಮಹತ್ಯೆಯಲ್ಲಿ ಉತ್ತರ ಪ್ರದೇಶ ನಂಬರ್ 1: ಬಿಜೆಪಿ ವಿರುದ್ಧ ಅಖಿಲೇಶ್ ವಾಗ್ದಾಳಿ

Nagaraja AB

ರಾಯ್ ಬರೇಲಿ: ವಿವಿಧ ಕ್ಷೇತ್ರಗಳಲ್ಲಿ ಉತ್ತರ ಪ್ರದೇಶವನ್ನು ಅಗ್ರಸ್ಥಾನಕ್ಕೆ ಕೊಂಡೊಯ್ಯುವ ಬಿಜೆಪಿ ಹೇಳಿಕೆ ವಿರುದ್ಧ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಶುಕ್ರವಾರ ಇಂದಿಲ್ಲಿ ವಾಗ್ದಾಳಿ ನಡೆಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅಖಿಲೇಶ್ ಯಾದವ್, ಉತ್ತರ ಪ್ರದೇಶ ನಂಬರ್ 1 ಎಂದು ಹೇಳಿಕೊಳ್ಳುವವರು ವಾಸ್ತವವಾಗಿ ಕಸ್ಟಡಿ ಸಾವುಗಳು, ಹಸಿವಿನ ಸೂಚ್ಯಂಕ, ರೈತರ ಆತ್ಮಹತ್ಯೆಗಳು, ಸಾರ್ವಜನಿಕ ಉದ್ಯಮಗಳು ಮತ್ತು ಬ್ಯಾಂಕ್ ಗಳ ಮಾರಾಟ, ಹಸುಗಳನ್ನು ಜೀವಂತವಾಗಿ ಹೂಳುವ ವಿಚಾರಗಳಲ್ಲಿ ಅಗ್ರಸ್ಥಾನಕ್ಕೆ ಕೊಂಡೊಯ್ದಿದ್ದಾರೆ ಎಂದು ಕಿಡಿಕಾರಿದರು.

ಉತ್ತರ ಪ್ರದೇಶದಲ್ಲಿ ವ್ಯಾಪಾರ ಮಾಡುವುದು ಸುಲಭವಾಗಿಲ್ಲ ಆದರೆ, ಅಪರಾಧ ಮಾಡುವುದು ಸುಲಭವಾಗಿದೆ. ರಸ್ತೆಗಳ ಸ್ಥಿತಿ ನೋಡಿದರೆ ಯೋಜನೆಯ ಗುಣಮಟ್ಟ ತಿಳಿಯುತ್ತದೆ. ಬಿಜೆಪಿ ಹೊಸದಾಗಿ ನಿರ್ಮಿಸಿದ ರಸ್ತೆಯಲ್ಲಿ ತೆಂಗಿನಕಾಯಿ ಒಡೆದರೆ ರಸ್ತೆ ಒಡೆಯುತ್ತದೆ ಎಂದು ಟೀಕಿಸಿದರು.

ಉತ್ತರ ಪ್ರದೇಶದ ಬಿಜೆಪಿ ಸರ್ಕಾರ ಉತ್ತಮ ಕಾರ್ಯನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ. ಡಬಲ್ ಇಂಜಿನ್ ಸರ್ಕಾರವನ್ನು ಕಿತ್ತು ಎಸೆಯುವವರೆಗೂ ಜನರು ವಿರಮಿಸುವುದಿಲ್ಲ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ ಬಿಜೆಪಿ ನಿರ್ನಾಮವಾಗಲಿದೆ ಎಂದು ಅಖಿಲೇಶ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದರು.

SCROLL FOR NEXT