ದೇಶ

ಗೋವಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಎಂಸಿ ಸಂಭಾವ್ಯ ಅಭ್ಯರ್ಥಿಗಳಿಗೆ ರೂ.10 ರಿಂದ 20 ಕೋಟಿ ಆಫರ್- ಕಾಂಗ್ರೆಸ್ 

Nagaraja AB

ಪಣಜಿ: ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಸಂಭಾವ್ಯ ಅಭ್ಯರ್ಥಿಗಳಿಗೆ ಸುಮಾರು 10 ರಿಂದ 20 ಕೋಟಿ ರೂ.ವರೆಗೂ ಆ ಪಕ್ಷದಿಂದ ಆಫರ್ ನೀಡಲಾಗುತ್ತಿದೆ ಎಂದು ಗೋವಾ ಎಐಸಿಸಿ ಉಸ್ತುವಾರಿ ದಿನೇಶ್ ಗುಂಡೂರಾವ್ ಶನಿವಾರ ಹೇಳಿದ್ದಾರೆ.  ಆಡಳಿತಾರೂಢ ಬಿಜೆಪಿ ನೆರವಿನೊಂದಿಗೆ ಕಾಂಗ್ರೆಸ್ ದುರ್ಬಲಗೊಳಿಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಪಣಜಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಕೋಟಿ, ಕೋಟಿ ರೂಪಾಯಿಗಳಲ್ಲಿ ಬರುತ್ತಿರುವ ಟಿಎಂಪಿ ಪಕ್ಷ ಗೋವಾಕ್ಕೆ ಏನು ಕೊಡುಗೆ ನೀಡಿದೆ. ಅಭ್ಯರ್ಥಿಯಾಗ ಬಯಸುವ ಜನರಿಗೆ 10 ರಿಂದ 20 ಕೋಟಿ ರೂ. ನೀಡುವುದಾಗಿ ಹೇಳುತ್ತಿದ್ದಾರೆ. ಅವರಿಂದ ಅಷ್ಟೊಂದು ಹಣ ಎಲ್ಲಿಂದ ಬರುತ್ತದೆ. ಯಾವ ಉದ್ದೇಶಕ್ಕಾಗಿ ಅವರು ಇದನ್ನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. 

ಟಿಎಂಸಿ ಅಜೆಂಡಾ ಸ್ಪಷ್ಟವಾಗಿದೆ. ಅವರು ಬಿಜೆಪಿಗೆ ನೆರವಾಗಲು ಬಯಸಿದ್ದಾರೆ. ಈಗ ಟಿಎಂಸಿ ಜೊತೆಗೆ ಮೈತ್ರಿಯ ಪ್ರಶ್ನೆಯೇ ಇಲ್ಲ, ಏಕೆಂದರೆ ಅವರು ಕಾಂಗ್ರೆಸ್ ನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯನ್ನಲ್ಲಾ, ಅದು ಅವರ ಅಜೆಂಡಾವಾಗಿರುವುದರಿಂದ ಅವರೊಂದಿಗೆ ಮೈತ್ರಿಯನ್ನು ನಾವು ಹೇಗೆ ಸ್ವೀಕರಿಸಲು ಸಾಧ್ಯ ಎಂದು ರಾವ್ ಹೇಳಿದರು. 

ಬ್ಯಾನರ್ಜಿ ಮತ್ತು ಅವರ ಪಕ್ಷ ಬಿಜೆಪಿ ವಿರೋಧಿ ಪಕ್ಷಗಳನ್ನು ಒಡೆಯಲು ಪ್ರಯತ್ನಿಸುತ್ತಿದೆ. ಅವರು ಮಹಾಘಟಬಂಧನ್ ನ್ನು ಹೊಡೆಯುತ್ತಿದ್ದಾರೆ.  . ಬಿಜೆಪಿ ವಿರುದ್ಧ ಹೋರಾಡುವ ಹೆಸರಿನಲ್ಲಿ ಅವರು ಕಾಂಗ್ರೆಸ್ ಅನ್ನು ದುರ್ಬಲಗೊಳಿಸಲು, ಕಾಂಗ್ರೆಸ್ ಅನ್ನು ನಾಶಮಾಡಲು ಬಯಸುತ್ತಿದ್ದಾರೆ. ಕಾಂಗ್ರೆಸ್ ಮುಖಂಡರು, ಬಿಜೆಪಿ ವಿರೋಧಿ ಮುಖಂಡರನ್ನು ಖರೀದಿಸುತ್ತಿರುವ ಮಮತಾ ಬ್ಯಾನರ್ಜಿ, ಬಿಜೆಪಿ ಮುಖಂಡರು ಏಕೆ ಖರೀದಿಸುತ್ತಿಲ್ಲ ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದರು. 

SCROLL FOR NEXT