ದೇಶ

ಸ್ವರ್ಣಮುಖಿ ನದಿಯಲ್ಲಿ ಈಜಲು ಹೋದ ಮೂವರು ವಿದ್ಯಾರ್ಥಿಗಳು ಜಲಸಮಾಧಿ, ಓರ್ವನ ರಕ್ಷಣೆ!

Vishwanath S

ಹೈದರಾಬಾದ್: ಸ್ವರ್ಣಮುಖಿ ನದಿಯಲ್ಲಿ ಈಜಲು ಹೋದ ವಿದ್ಯಾರ್ಥಿಗಳು ಕಣ್ಮರೆಯಾಗಿರುವ ಘಟನೆ ಶ್ರೀ ಕಾಳಹಸ್ತಿ ರೇಣುಗುಂಟ ತಾಲ್ಲೂಕಿನಲ್ಲಿ ನಡೆದಿದೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ನಾಲ್ಕು ವಿದ್ಯಾರ್ಥಿಗಳಲ್ಲಿ ಒಬ್ಬನನ್ನು ಸ್ಥಳಿಯರು ಕಾಪಾಡಿದ್ದಾರೆ, ಉಳಿದ ಮೂವರು ಕೊಚ್ಚಿಹೋಗಿದ್ದಾರೆ.

ರೇಣುಗುಂಟ ತಾಲ್ಲೂಕಿನ ಜಿ ಪಾಳ್ಯ ದಲಿತಕೇರಿಗೆ ಸೇರಿದ ಇವರು ಒಂಭತ್ತನೆ ತರಗತಿ ವಿದ್ಯಾರ್ಥಿಗಳು. ಇಂದು ಭಾನುವಾರವಾಗಿದ್ದರಿಂದ ಆಟ ಆಡುತ್ತ ಹತ್ತಿರದ್ದಲ್ಲೆ ಇದ್ದ ಸ್ವರ್ಣಮುಖಿ ನದಿಗೆ ಈಜಲು ಹೋಗಿದ್ದಾರೆ. ಇತ್ತೀಚೆಗೆ ಸುರಿದ ಬಾರಿ ಮಳೆಗೆ ನದಿ ತುಂಬಿ ಹರಿಯುತ್ತಿತ್ತು. ಈ ವೇಳೆ, ವಿದ್ಯಾರ್ಥಿಗಳು ನದಿಗೆ ಇಳಿದ ಪರಿಣಾಮ ನೀರಿನಲ್ಲಿ ಕೊಚ್ಚಿ ಕೊಂಡು ಹೋಗಿದ್ದಾರೆ.

ಇದನ್ನ ಗಮನಿಸಿದ ಗ್ರಾಮಸ್ಥರು ನೀಕ್ಷಿತ್ ಎಂಬುವರನ್ನು ರಕ್ಷಣೆ ಮಾಡುವಲ್ಲಿ ಸಫಲರಾದರು. ಆದರೆ ಉಳಿದ ಗಣೇಶ್, ಧೋನಿ, ಯುಗಂಧರ್ ಮೂವರು ನದಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದಾರೆ. ಇವರ ಪತ್ತೆಹಚ್ಚುವ ಕಾರ್ಯ ಮುಂದುವರೆದಿದೆ.

ಘಟನೆ ಬಗ್ಗೆ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳನ್ನ ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಶಾಸಕ ಬಿಯಪ್ಪು ಮಧುಸೂದನ್ ರೆಡ್ಡಿ ಪುತ್ರಿ ಸ್ಥಳಕ್ಕೆ ಭೇಟಿ ನೀಡಿದರು. ಈ ವೇಳೆ, ನುರಿತ ಈಜುಗಾರರನ್ನು ಕರೆಸಿ ಮಕ್ಕಳನ್ನ ಹುಡುಕುವ ಕಾರ್ಯದಲ್ಲಿ ತೊಡಗಿದ್ದಾರೆ. ಘಟನೆಯಿಂದಾಗಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

SCROLL FOR NEXT