ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಪ್ರಮಾಣಪತ್ರ ಸ್ವೀಕರಿಸಿದ ರಾಧಿಕಾ 
ದೇಶ

ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸೇರಿದ ಚಲನಚಿತ್ರ ನೃತ್ಯ ಸಂಯೋಜಕಿ ರಾಧಿಕಾ

ಖ್ಯಾತ ಚಲನಚಿತ್ರ ನೃತ್ಯ ಸಂಯೋಜಕಿ ರಾಧಿಕಾ ಅವರು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ದಾಖಲೆಗೆ ಸೇರ್ಪಡೆಗೊಂಡಿದ್ದಾರೆ. ರಾಧಿಕಾ ಅವರು ಎ ಎಂ ಎಸ್ ಲಲಿತಕಲಾ ಸಂಘಟಕ ಡಾ.ಆರ್.ಜೆ.ರಾಮನಾರಾಯಣನ್ ನೃತ್ಯ ಕಲೆಗಳನ್ನು ಉತ್ತೇಜಿಸಲು,...

ಚೆನ್ನೈ: ಖ್ಯಾತ ಚಲನಚಿತ್ರ ನೃತ್ಯ ಸಂಯೋಜಕಿ ರಾಧಿಕಾ ಅವರು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ದಾಖಲೆಗೆ ಸೇರ್ಪಡೆಗೊಂಡಿದ್ದಾರೆ. ರಾಧಿಕಾ ಅವರು ಎ ಎಂ ಎಸ್ ಲಲಿತಕಲಾ ಸಂಘಟಕ ಡಾ.ಆರ್.ಜೆ.ರಾಮನಾರಾಯಣನ್ ನೃತ್ಯ ಕಲೆಗಳನ್ನು ಉತ್ತೇಜಿಸಲು, ಅವುಗಳ ಬಗ್ಗೆ ಜಾಗೃತಿ ಮೂಡಿಸಲು ಚೆನ್ನೈನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದಾರೆ.

ಚಲನಚಿತ್ರ ನೃತ್ಯ ಸಂಯೋಜಕಿ ರಾಧಿಕಾ ಅವರ ತಂಡ ಚೆನ್ನೈನ ವಿವಿಧ ಸ್ಥಳಗಳಲ್ಲಿ, ಅದೇ ರೀತಿ ಆನ್‌ ಲೈನ್‌ ನಲ್ಲಿ ನಿತ್ಯ ಒಂದು ಗಂಟೆ, 365 ದಿನಗಳು ನೃತ್ಯ ಪ್ರದರ್ಶನಗಳನ್ನು ನಡೆಸಿದ್ದರು.

ಇದರಲ್ಲಿ ಹಲವು ನೃತ್ಯಕಲಾವಿದರು ಭಾಗವಹಿಸಿದ್ದರು. ಕೊನೆಯ ದಿನ 600 ಕಲಾವಿದರೊಂದಿಗೆ ನಡೆಸಿದ ನೃತ್ಯ ಪ್ರದರ್ಶನ ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ನಲ್ಲಿ ದಾಖಲಾಗಿದೆ.ತೀರ್ಪುಗಾರರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮವನ್ನು ಗಿನ್ನಿಸ್ ವಿಶ್ವ ದಾಖಲೆ ನಿರ್ವಾಹಕರು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಾರೆ.

ಪಾಂಡಿಚೇರಿ ಮುಖ್ಯಮಂತ್ರಿ ರಂಗಸ್ವಾಮಿ ಅವರು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು, ನೃತ್ಯಕಲಾವಿದರನ್ನು ಅಭಿನಂದಿಸಿ, ನೃತ್ಯ ನಿರ್ದೇಶಕಿ ರಾಧಿಕಾ ಅವರಿಗೆ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ ಪ್ರಮಾಣಪತ್ರ ಪ್ರದಾನ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT