ದೇಶ

ಮುಸ್ಲಿಂ ಬಾಹುಳ್ಯವಿರುವ ದ್ವೀಪದಲ್ಲಿ ಪ್ರತಿ ಶುಕ್ರವಾರ ಶಾಲೆಗಳಿಗೆ ರಜೆ ಪದ್ಧತಿಗೆ ಅಂತ್ಯ ಹಾಡಿದ ಲಕ್ಷದ್ವೀಪ ಆಡಳಿತ

Srinivas Rao BV

ಕವರಟ್ಟಿ: ಮುಸ್ಲಿಂ ಬಾಹುಳ್ಯವಿರುವ ಲಕ್ಷದ್ವೀಪದಲ್ಲಿ ಇನ್ನು ಮುಂದಿನ ದಿನಗಳಲ್ಲಿ ಶುಕ್ರವಾರ ವಾರದ ರಜೆಯಾಗಿರುವುದಿಲ್ಲ. ದೇಶದ ಇತರೆಡೆಗಳಂತೆಯೇ ಶುಕ್ರವಾರದಂದು ಕಾರ್ಯನಿರ್ವಹಣೆಯ ದಿನವನ್ನಾಗಿ ಹಾಗೂ ಭಾನುವಾರಗಳನ್ನು ರಜೆಯ ದಿನವನ್ನಾಗಿ ಲಕ್ಷದ್ವೀಪ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಧಾರ್ಮಿಕ ನೆಲೆಗಟ್ಟಿನಲ್ಲಿ ಶುಕ್ರವಾರಗಳಂದು ವಿದ್ಯಾರ್ಥಿಗಳಿಗೆ ರಜೆ ನೀಡಲಾಗುತ್ತಿತ್ತು. 

ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ದ್ವೀಪದಲ್ಲಿ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ಪ್ರಾರಂಭಿಸಿದಾಗಿನಿಂದಲೂ ಶುಕ್ರವಾರದಂದು ರಜೆ ನೀಡಲಾಗುತ್ತಿತ್ತು ಹಾಗೂ ಶನಿವಾರದಂದು ಅರ್ಧ ದಿನ ಕಾರ್ಯನಿರ್ವಹಣೆ ಮಾಡಲಾಗುತ್ತಿತ್ತು. ಶಾಲೆಗಳ ಯಾವುದೇ ಆಡಳಿತ ವಿಭಾಗಗಳೊಂದಿಗೆ, ಜನಪ್ರತಿನಿಧಿಗಳೊಂದಿಗೆ ಚರ್ಚಿಸದೇ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೊಹಮ್ಮದ್ ಫೈಜಲ್ ಹೇಳಿದ್ದಾರೆ. 

ಇದು ಏಕಪಕ್ಷೀಯ ನಿರ್ಧಾರವಾಗಿದೆ, ಇದು ಜನತಾ ಆದೇಶದ ಪರಿಧಿಯಲ್ಲಿಲ್ಲ ಎಂದು ಫೈಜಲ್ ತಿಳಿಸಿದ್ದಾರೆ. ಸ್ಥಳೀಯ ವ್ಯವಸ್ಥೆಯಲ್ಲಿ ಯಾವುದೇ ಬದಲಾವಣೆ ಜಾರಿಗೆ ತಂದರೂ ಜನರೊಂದಿಗೆ ಅದನ್ನು ಚರ್ಚಿಸಬೇಕು ಎಂದು ಹೇಳಿದ್ದಾರೆ. 

ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ, ಸಂಪನ್ಮೂಲಗಳ ಅತ್ಯುತ್ತಮ ಬಳಕೆ, ಕಲಿಯುವವರ ಸರಿಯಾದ ತೊಡಗಿಸಿಕೊಳ್ಳುವಿಕೆ ಮತ್ತು ಬೋಧನಾ ಕಲಿಕಾ ಪ್ರಕ್ರಿಯೆಯ ಅಗತ್ಯ ಯೋಜನೆಗಾಗಿ ಆಡಳಿತ ಶಾಲೆಗಳ ಸಮಯವನ್ನು ಹಾಗೂ ನಿಯಮಿತ ಶಾಲಾ ಚಟುವಟಿಕೆಗಳಲ್ಲಿ ಮಾರ್ಪಡಿಸಲಾಗಿದೆ. ಲಕ್ಷದ್ವೀಪ ಜಿಲ್ಲಾ ಪಂಚಾಯತ್ ನ ಉಪಾಧ್ಯಕ್ಷ ಪಿಪಿ ಅಬ್ಬಾಸ್ ಈ ಆದೇಶವನ್ನು ಮರುಪರಿಶೀಲನೆ ಮಾಡಬೇಕೆಂದು ಮನವಿ ಮಾಡಿದ್ದಾರೆ.

SCROLL FOR NEXT