ದೇಶ

ಬಿಹಾರ: ನಕಲಿ ದಾಖಲೆ ಸೃಷ್ಟಿಸಿ ರೈಲ್ವೆ ಇಂಜಿನ್ ಮಾರಿದ ಇಂಜಿನಿಯರ್

Nagaraja AB

ಪಾಟ್ನಾ: ರೈಲ್ವೆ ಇಂಜಿನಿಯರೊಬ್ಬರು ನಕಲಿ ದಾಖಲೆಗಳನ್ನು ಉಪಯೋಗಿಸಿ ರೈಲಿನ ಎಂಜಿನ್ ಅನ್ನು ಮಾರಾಟ ಮಾಡಿರುವ ಅಪರೂಪದ ಘಟನೆ ಬಿಹಾರದಲ್ಲಿ ನಡೆದಿದೆ.

ರಾಜೀವ್ ರಂಜನ್ ಝಾ ಎಂಬ ಸಮಸ್ತಿಪುರ್ ಲೋಕೋ ಡೀಸೆಲ್ ಶೆಡ್‍ನ ರೈಲ್ವೆ ಉದ್ಯೋಗಿ ಪುರ್ನಿಯಾ ಕೋರ್ಟ್ ಸ್ಟೇಷನ್‍ನಲ್ಲಿರುವ ಹಳೆಯ ಸ್ಟೀಮ್ ಇಂಜಿನ್ ಅನ್ನು ಮಾರಾಟ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಈ ದುಷ್ಕೃತ್ಯಕ್ಕೆ ಭದ್ರತಾ ಸಿಬ್ಬಂದಿ ಮತ್ತು ಇತರೆ ಠಾಣಾ ಅಧಿಕಾರಿಗಳು ಸಹಾಯ ಮಾಡಿದ್ದಾರೆ.

ಇಂಜಿನಿಯರ್ ಫ್ಯಾಬ್ರಿಕೇಟೆಡ್ ಡಿಎಂಐ ಪೇಪರ್ ವರ್ಕ್ ಇಟ್ಟುಕೊಂಡು ರೈಲ್ವೆ ಆಸ್ತಿಯನ್ನು ಮಾರಾಟ ಮಾಡಿದ್ದಾರೆ. ಡಿಸೆಂಬರ್ 14 ರಂದು ಅಕ್ರಮ ಮಾರಾಟ ನಡೆದಿದ್ದು, ಎರಡು ದಿನಗಳ ನಂತರ ಬೆಳಕಿಗೆ ಬಂದಿದೆ.

ಪುರ್ನಿಯಾ ಕೋರ್ಟ್ ಸ್ಟೇಷನ್ ಔಟ್‍ ಪೋಸ್ಟ್ ಇನ್‍ಚಾರ್ಜ್ ಎಂಎಂ ರೆಹಮಾನ್ ಅರ್ಜಿಯ ಆಧಾರದ ಮೇಲೆ ಬನ್ಮಂಖಿ ಆರ್‍ ಪಿ ಎಫ್ ಪೋಸ್ಟ್ ನಲ್ಲಿ ಡಿಸೆಂಬರ್ 19ರಂದು ಎಫ್‍ಐಆರ್ ದಾಖಲಿಸಲಾಗಿದೆ. ಈ ಸಂಬಂಧ ಎಂಜಿನಿಯರ್ ಮತ್ತು ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ ಏಳು ಜನರ ಹೆಸರನ್ನು ಎಫ್‍ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.

SCROLL FOR NEXT