ದೇಶ

ಜಾರ್ಖಂಡ್ ಸಿಎಂ ಸಹೋದರನ ಪತ್ನಿ, ಶಾಸಕಿಯಿಂದ ಸರ್ಕಾರದ ವಿರುದ್ಧ ಪ್ರತಿಭಟನೆ!

Srinivas Rao BV

ನವದೆಹಲಿ: ವಿಚಿತ್ರ ಬೆಳವಣಿಗೆಯಲ್ಲಿ ಶಾಸಕಿಯೂ ಆಗಿರುವ ತಮ್ಮ ಸಹೋದರನ ಪತ್ನಿಯಿಂದಲೇ ಜಾರ್ಖಂಡ್ ಸಿಎಂ ಪ್ರತಿಭಟನೆ ಎದುರಿಸುತ್ತಿದ್ದಾರೆ. 

ಜಾರ್ಖಂಡ್ ಮುಕ್ತಿ ಮೋರ್ಚದ ಮುಖ್ಯಸ್ಥ ಶಿಬು ಸೊರೇನ್ ನ ಸೊಸೆ ಸಿಎಂ ವಿರುದ್ಧ ವಿಧಾನಸಭೆ ಗೇಟ್ ಬಳಿ ಧರಣಿ ಪ್ರಾರಂಭಿಸಿದ್ದು ತಮ್ಮದೇ ಸರ್ಕಾರದ ನೀತಿಗಳನ್ನು ಪ್ರತಿಭಟಿಸುತ್ತಿದ್ದಾರೆ. ಇದು ಆಡಳಿತ ಪಕ್ಷಕ್ಕೆ ತೀವ್ರ ಮುಜುಗರ ಉಂಟುಮಾಡಿದೆ.

ರಾಜ್ಯ ಸರ್ಕಾರದಿಂದ ತಮ್ಮ ಪ್ರಶ್ನೆಗಳಿಗೆ ಸೂಕ್ತ, ಸಮರ್ಪಕ, ಸಮಾಧಾನಕರ ಉತ್ತರಗಳು ಸಿಕ್ಕಿಲ್ಲ. ನಾನು ಸದನಕ್ಕೆ ಜಲಸಂರಕ್ಷಣೆ, ಅರಣ್ಯ, ಭೂಮಿ ಸಂರಕ್ಷಣೆಯನ್ನು ಕೇಳಿ ಬಂದಿದ್ದೇನೆ. ಕೇಂದ್ರ ಗಣಿ ಫೀಲ್ಡ್ ಲಿಮಿಟೆಡ್ ನ ಆಮ್ರಪಾಲಿ ಯೋಜನೆಯಲ್ಲಿ ಅರಣ್ಯಭೂಮಿಯನ್ನು ಒತ್ತುವರಿ ಮಾಡಿಕೊಳ್ಳಲಾಗುತ್ತಿದೆ ಹಾಗೂ ಕಲ್ಲಿದ್ದಲನ್ನು ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದೆ. ಸರ್ಕಾರ ಇದನ್ನು ತಡೆಗಟ್ಟಲು ಏನನ್ನೂ ಮಾಡುತ್ತಿಲ್ಲ ಎಂದು ಶಾಸಕಿ ಆರೋಪಿಸಿದ್ದಾರೆ.

ಸರ್ಕಾರ ನಾನು ಕೇಳಿದ ಪ್ರಶ್ನೆಗಳಿಗೆ ತಪ್ಪು ಉತ್ತರ ನೀಡುತ್ತಿದೆ ಎಂದು ಆರೋಪಿಸಿರುವ ಅವರು ಸಿಸಿಎಲ್ ನಿಂದ ಅತಿಕ್ರಮಣಗೊಂಡ ಭೂಮಿಯನ್ನು ಮುಕ್ತಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

SCROLL FOR NEXT