ಮೋದಿ-ಮಮತಾ ಬ್ಯಾನರ್ಜಿ 
ದೇಶ

ಮುಖ್ಯಮಂತ್ರಿಗಳ ವರ್ಚ್ಯುಯಲ್ ಸಭೆಯಲ್ಲಿ ಎರಡು ಗಂಟೆ ಕಾದರೂ ಪ್ರಧಾನಿಯೊಂದಿಗೆ ಮಾತನಾಡಲು ಮಮತಾಗೆ ಸಿಗದ ಅವಕಾಶ

ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ವರ್ಚ್ಯುಯಲ್ ಸಭೆಯಲ್ಲಿ 2 ಗಂಟೆಗಳು ಕಾದರೂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಗೆ ಮಾತನಾಡುವ ಅವಕಾಶವೇ ಸಿಕ್ಕಿಲ್ಲ. 

ಕೋಲ್ಕತ್ತ: ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ವರ್ಚ್ಯುಯಲ್ ಸಭೆಯಲ್ಲಿ 2 ಗಂಟೆಗಳು ಕಾದರೂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿಗೆ ಮಾತನಾಡುವ ಅವಕಾಶವೇ ಸಿಕ್ಕಿಲ್ಲ. 

ರಾಜ್ಯದ ಸಚಿವಾಲಯದ ಉನ್ನತ ಮೂಲಗಳು ಈ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದು, ಡಿ.22 ರಂದು ರಾತ್ರಿ ನಡೆದ "ಆಜಾದಿ ಕಿ ಅಮೃತ್ ಮಹೋತ್ಸವ್" ಸಭೆಯಲ್ಲಿ ಬ್ಯಾನರ್ಜಿ ಭಾಗಿಯಾಗಿದ್ದರು. ಆದರೆ ಮಾತನಾಡುವವರ ಪಟ್ಟಿಯಲ್ಲಿ ಮಮತಾ ಬ್ಯಾನರ್ಜಿ ಅವರ ಹೆಸರು ಇಲ್ಲದ ಕಾರಣ ಅವರಿಗೆ ಮಾತನಾಡುವುದಕ್ಕೆ ಅವಕಾಶ ನೀಡಲಾಗಿಲ್ಲ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಈ ಘಟನೆ ಬಗ್ಗೆ ಸಿಎಂ ಮಮತಾ ಬ್ಯಾನರ್ಜಿ ತೀವ್ರ ಅಸಮಾಧಾನಗೊಂಡಿದ್ದು ಇಡೀ ರಾಜ್ಯದ ಆಡಳಿತ ವಿಭಾಗಕ್ಕೆ ನೋವುಂಟಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇತರ ರಾಜ್ಯಗಳ ಮುಖ್ಯಮಂತ್ರಿಗಳೂ ಭಾಗವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

US–Iran conflict| ಇರಾನ್ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ; 6ನೇ ದಿನಕ್ಕೆ ಕಾಲಿಟ್ಟ ಯುದ್ಧ –ಡೊನಾಲ್ಡ್ ಟ್ರಂಪ್ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಸೆನೆಟ್ ವಿಫಲ

'ಮಧ್ಯಪ್ರಾಚ್ಯ ಸಂಘರ್ಷ: ಇರಾನ್ ಯುದ್ಧಕ್ಕೆ ನಾನು 10ಕ್ಕೆ 15 ಅಂಕ ಕೊಡುತ್ತೇನೆ, ಅಮೆರಿಕಾ ಈಗ ಅತ್ಯಂತ ಬಲಿಷ್ಠ ಸ್ಥಿತಿಯಲ್ಲಿದೆ': Donald Trump

ರಾಜ್ಯ ಬಜೆಟ್ 2026-27: ಮದ್ಯ ತೆರಿಗೆಯಿಂದ ರಾಜ್ಯಕ್ಕೆ ಭಾರೀ ಆದಾಯ, ಆದಾಯ ಗುರಿ 45,000 ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ಚಿಂತನೆ..!

'ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್: ಇಂಧನ ಬೆಲೆ ಬೆಲೆ ಏರಿಕೆ ಭೀತಿ, ಪೆಟ್ರೋಲ್ ಬಂಕ್‌'ಗಳಿಗೆ ಮುಗಿಬಿದ್ದ ಜನ..!

ಸಿಎಂ ಕುರ್ಚಿ ಕದನ ಮಧ್ಯೆ ಡಿಕೆಶಿಯಿಂದ ಮಾ.10ಕ್ಕೆ ಡಿನ್ನರ್ ಪಾರ್ಟಿ: ಕೆಪಿಸಿಸಿ ಅಧ್ಯಕ್ಷ ಸ್ಥಾನ ತ್ಯಜಿಸುತ್ತಾರಾ ಡಿಸಿಎಂ?

SCROLL FOR NEXT