ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ 
ದೇಶ

ಉತ್ತರ ಪ್ರದೇಶ ಚುನಾವಣೆ: ಸಿಎಂ ಯೋಗಿ ವಿರೋಧಿ ಶಿವಪ್ರತಾಪ್ ಶುಕ್ಲಾಗೆ ಬ್ರಾಹ್ಮಣರ ಜವಾಬ್ದಾರಿ

ಉತ್ತರ ಪ್ರದೇಶದ ಬಿಜೆಪಿಯ ಬ್ರಾಹ್ಮಣ ಮುಖಂಡರು ಸೋಮವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದು, ಸಮುದಾಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ.

ನವದೆಹಲಿ: ಉತ್ತರ ಪ್ರದೇಶದ ಬಿಜೆಪಿಯ ಬ್ರಾಹ್ಮಣ ಮುಖಂಡರು ಸೋಮವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿಯಾಗಿದ್ದು, ಸಮುದಾಯಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಗಿದೆ.

ಉತ್ತರ ಪ್ರದೇಶದಲ್ಲಿ ಬ್ರಾಹ್ಮಣರ ಮತ ಸೆಳೆಯುವ ಜವಾಬ್ದಾರಿಯನ್ನು ಬಿಜೆಪಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ‘ವಿರೋಧಿ’ ಶಿವಪ್ರತಾಪ್ ಶುಕ್ಲಾ ಅವರಿಗೆ ನೀಡಿದೆ.

ಯುಪಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದಲ್ಲಿನ ಬ್ರಾಹ್ಮಣರ ಅಸಮಾಧಾನವನ್ನು ಹೋಗಲಾಡಿಸಲು ಸಮಿತಿಯನ್ನು ರಚಿಸಿದ್ದು, ಇದಕ್ಕೆ ಅಧ್ಯಕ್ಷರಾಗಿ ಸಿಎಂ ಯೋಗಿ ಆದಿತ್ಯನಾಥ್ ವಿರೋಧಿ ಶಿವಪ್ರತಾಪ್ ಶುಕ್ಲಾ ಅವರನ್ನು ನೇಮಿಸಿದೆ

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ತನ್ನ ರಾಜಕೀಯ ಸಮೀಕರಣವನ್ನು ಸರಿಪಡಿಸಿಕೊಳ್ಳಲು ಆರಂಭಿಸಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇಲೆ ಠಾಕುರಿಸಂ ರಾಜಕೀಯದ ವಿರೋಧದ ಆರೋಪಗಳ ನಡುವೆ, ಬ್ರಾಹ್ಮಣ ಸಮುದಾಯದ ಅಸಮಾಧಾನವೂ ಇದೆ.

ರಾಜ್ಯದಲ್ಲಿ ಅಧಿಕಾರಕ್ಕೆ ಮತ್ತೆ ಮರಳಲು ಬ್ರಾಹ್ಮಣ ಸಮುದಾಯದ ಅಸಮಾಧಾನ ದೊಡ್ಡ ಅಡಚಣೆಯಾಗಬಾರದು ಎಂದು ಬಿಜೆಪಿ ಭಾವಿಸಿದೆ..ಹೀಗಾಗಿ ಇಂತಹ ಪರಿಸ್ಥಿತಿಯಲ್ಲಿ ಬ್ರಾಹ್ಮಣರ ಅಸಮಾಧಾನ ಹೋಗಲಾಡಿಸಲು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಮನೆಯಲ್ಲಿ ನಡೆದ ಸಭೆಯಲ್ಲಿ ಬ್ರಾಹ್ಮಣ ಸಮಿತಿ ಕುರಿತು ಮಹತ್ವದ ಚರ್ಚೆ ನಡೆಸಿದೆ. ಬ್ರಾಹ್ಮಣರ ಅಸಮಾಧಾನಕ್ಕೆ ಸಂಬಂಧಿಸಿದಂತೆ ಆಂತರಿಕ ವರದಿಯನ್ನು ಈ ಸಮಿತಿ ಪಕ್ಷಕ್ಕೆ ಸಲ್ಲಿಸಲಿದೆ.

ಧರ್ಮೇಂದ್ರ ಪ್ರಧಾನ್ ನಿವಾಸದಲ್ಲಿ ಭಾನುವಾರ ನಡೆದ ಸಭೆಯಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್ ಬಗ್ಗೆ ಯಾರ ಹೆಸರನ್ನೂ ಹೇಳದೆ ಎಲ್ಲ ಬ್ರಾಹ್ಮಣರು ಚರ್ಚಿಸಿ ಬಿಕ್ರುಕ್ಕಂಡ್‌ನಲ್ಲಿ ವಿಕಾಸ್ ದುಬೆಯ ಎನ್‌ಕೌಂಟರ್ ಅನ್ನು ಸಮರ್ಥಿಸಿಕೊಂಡಿದ್ದಾರೆ ಎನ್ನಲಾಗಿದೆ.

ಬಿಜೆಪಿಯ ಉನ್ನತ ನಾಯಕತ್ವದಿಂದ ಬ್ರಾಹ್ಮಣ ಸಮಿತಿಯ ನೇತೃತ್ವ ವಹಿಸಿಕೊಂಡಿರುವ ಶಿವಪ್ರತಾಪ್ ಶುಕ್ಲಾ, ಸಿಎಂ ಯೋಗಿ ಆದಿತ್ಯನಾಥರ ಮೂಲ ಗೋರಖ್‌ಪುರದವರೇ ಆಗಿದ್ದಾರೆಂಬುದಿಲ್ಲಿ ಗಮನಾರ್ಹ. ಇನ್ನು ಪ್ರಧಾನಿ ಮೋದಿಯವರ ಮೊದಲ ಅವಧಿಯಲ್ಲಿ ಕೇಂದ್ರ ಸಚಿವರಾಗಿದ್ದ ಶುಕ್ಲಾ ಪ್ರಸ್ತುತ ರಾಜ್ಯಸಭಾ ಸಂಸದರೂ ಆಗಿದ್ದಾರೆ. ಶಿವಪ್ರತಾಪ್ ಶುಕ್ಲಾ ಅವರನ್ನು ಗೋರಖ್‌ಪುರದಲ್ಲಿ ಮಾತ್ರವಲ್ಲದೆ ಪೂರ್ವಾಂಚಲ್‌ನಲ್ಲಿ ಬ್ರಾಹ್ಮಣ ರಾಜಕಾರಣದ ಸಮತೋಲನ ಅಂಶವೆಂದು ಪರಿಗಣಿಸಲಾಗಿದೆ.

ಯೋಗಿ ಆದಿತ್ಯನಾಥ್ ಒಮ್ಮೆ ಶಿವಪ್ರತಾಪ್ ಶುಕ್ಲಾ ವಿರುದ್ಧ ಗೋರಖ್‌ಪುರದಲ್ಲಿ ಗೆಲ್ಲುವ ಮೂಲಕ ಶುಕ್ಲಾ ಸಂಪೂರ್ಣ ರಾಜಕೀಯವನ್ನು ಕೊನೆಗೊಳಿಸಿದ್ದರು. ಶಿವಪ್ರತಾಪ್ ಸತತ ನಾಲ್ಕು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಗೆದ್ದು 1989, 1991, 1993 ಮತ್ತು 1996 ರಲ್ಲಿ ಯುಪಿಯಲ್ಲಿ ಶಾಸಕ ಮತ್ತು ಸಚಿವರಾಗಿದ್ದರು. ಬಳಿಕ ಯೋಗಿ ಆದಿತ್ಯನಾಥ್, ತಮ್ಮ ರಾಜಕೀಯ ಪ್ರಾಬಲ್ಯವನ್ನು ಸ್ಥಾಪಿಸಲು ಶಿವಪ್ರತಾಪ್ ವಿರುದ್ಧ ತಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಅವರನ್ನು ಸೋಲಿಸಿದ್ದರು.

ಹೇಗೆ ಶುರುವಾಯಿತು ಶುಕ್ಲಾ-ಯೋಗಿ ವಿರೋಧ?
2002ರ ವಿಧಾನಸಭಾ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ್, ಗೋರಖ್‌ಪುರ ಸದರ್ ಕ್ಷೇತ್ರದಿಂದ ಶಿವ ಪ್ರತಾಪ್ ಶುಕ್ಲಾ ಅವರನ್ನು ವಿರೋಧಿಸಿ, ಹಿಂದೂ ಮಹಾಸಭಾ ಟಿಕೆಟ್‌ನಲ್ಲಿ ಅವರ ವಿರುದ್ಧ ರಾಧಾ ಮೋಹನ್‌ದಾಸ್ ಅಗರವಾಲ್ ಅವರನ್ನು ಗೆಲ್ಲಿಸಿದ್ದರು. ಇಲ್ಲಿಂದಲೇ ಶಿವಪ್ರತಾಪ್ ಶುಕ್ಲಾ ಮತ್ತು ಯೋಗಿ ನಡುವೆ ರಾಜಕೀಯ ವೈಷಮ್ಯ ಆರಂಭವಾಗಿತ್ತು. ಶಿವಪ್ರತಾಪ್ ಶುಕ್ಲಾ ಅವರನ್ನು ಬಿಜೆಪಿಯಲ್ಲಿ ದೂರವಿಟ್ಟರೂ ಶುಕ್ಲಾ ಪಕ್ಷದ ನಿಷ್ಠೆಯನ್ನು ಬಿಟ್ಟುಕೊಡಲಿಲ್ಲ. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗ 14 ವರ್ಷಗಳ ನಂತರ ಶಿವಪ್ರತಾಪ್ ಶುಕ್ಲಾ ಅವರ ರಾಜಕೀಯ ಪುನರುಜ್ಜೀವನವಾಯಿತು. ಅವರು ರಾಜ್ಯಸಭಾ ಸದಸ್ಯರಾದರು ಮತ್ತು ಮೋದಿ ಸಂಪುಟದಲ್ಲಿ ಸಚಿವರಾದರು.

ಬ್ರಾಹ್ಮಣರ ಅಸಮಾಧಾನವನ್ನು ಹೋಗಲಾಡಿಸುವ ಜವಾಬ್ದಾರಿ
ಈಗ, 2022 ರ ಯುಪಿ ಚುನಾವಣೆಗೆ ಮುನ್ನ, ಬ್ರಾಹ್ಮಣರ ಅಸಮಾಧಾನಕ್ಕೆ ಕಾರಣಗಳನ್ನು ಕಂಡುಹಿಡಿಯುವ ಕೆಲಸವನ್ನು ಶಿವಪ್ರತಾಪ್ ಶುಕ್ಲಾಗೆ ವಹಿಸಲಾಗಿದೆ. ಶಿವಪ್ರತಾಪ್ ಶುಕ್ಲಾ ಅವರನ್ನು ಮುನ್ನಡೆಸುವ ಬಿಜೆಪಿ ನಾಯಕತ್ವದ ಉದ್ದೇಶ ಬ್ರಾಹ್ಮಣರ ಆರಾಧನೆ ಮಾತ್ರವಲ್ಲ, ಒಂದು ಕಾಲದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರ ಎದುರಾಳಿಯಾಗಿದ್ದ ಶಿವಪ್ರತಾಪ್ ಶುಕ್ಲಾ ಅವರ ಮೇಲೆ ಪಕ್ಷಕ್ಕೆ ಸಂಪೂರ್ಣ ನಂಬಿಕೆ ಇದೆ ಎಂಬ ಸಂದೇಶವನ್ನು ರವಾನಿಸುವ ಪ್ರಯತ್ನವೂ ಆಗಿದೆ.

ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಪ್ರತಾಪ್ ಶುಕ್ಲಾ, ಅಭಿಜತ್ ಮಿಶ್ರಾ, ಸಂಸದ ಡಾ.ಮಹೇಶ್ ಶರ್ಮಾ, ಗುಜರಾತ್ ಸಂಸದ ರಾಮ್ ಭಾಯ್ ಮೊಕರಿಯಾ ಅವರನ್ನೂ ರಾಜ್ಯದಲ್ಲಿ ಬ್ರಾಹ್ಮಣರನ್ನು ಸೆಳೆಯಲು ರಚಿಸಲಾಗಿರುವ ಸಮಿತಿಯಲ್ಲಿ ಇರಿಸಲಾಗಿದೆ. ಆದರೆ, ಈ 4 ಸದಸ್ಯರ ಸಮಿತಿಯನ್ನು 7 ಸದಸ್ಯರಿಗೆ ಹೆಚ್ಚಿಸಬಹುದು ಎನ್ನಲಾಗಿದೆ, ಇಂತಹ ಪರಿಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಕೆಲವು ಹೆಸರುಗಳು ಇದಕ್ಕೆ ಸೇರ್ಪಡೆಯಾಗುವ ನಿರೀಕ್ಷೆ ಇದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

SCROLL FOR NEXT