ದೇಶ

 ರಜನೀಕಾಂತ್ ಪ್ರತಿಷ್ಠಾನದಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ತರಬೇತಿ!

Nagaraja AB

ಚೆನ್ನೈ:  ಸೂಪರ್ ಸ್ಟಾರ್   ರಜನಿಕಾಂತ್  ಸ್ಥಾಪಿಸಿರುವ ರಜಿನೀಕಾಂತ್ ಫೌಂಡೇಶನ್'  ಸಮಾಜದ ಕೆಳಗಿನ ಸ್ತರದ ಯುವಕರಿಗೆ ಶಿಕ್ಷಣ, ಸಬಲೀಕರಣ ಮತ್ತು ಉದ್ಯೋಗ ನೀಡುವ ಗುರಿಯನ್ನು ಹೊಂದಿದೆ.

ವೆಬ್‌ಸೈಟ್ Rajinikanthfoundation.org ಪ್ರಕಾರ, ಇದು ಯುವಕರಿಗೆ ವೃತ್ತಿ ಮಾರ್ಗಗಳನ್ನು ಆಯ್ಕೆಮಾಡಲು ಸಲಹೆಯನ್ನು ನೀಡುತ್ತದೆ, ಅವರ ಗುರಿಗಳ ಕಡೆಗೆ ತರಬೇತಿಗಾಗಿ ಹಣಕಾಸಿನ ನೆರವು ಮತ್ತು ಅವರ ಪ್ರತಿಭೆ ಪೋಷಣೆಯ ವ್ಯವಸ್ಥೆಯನ್ನು ಒದಗಿಸುತ್ತದೆ.

 ಬಡವರು ಮತ್ತು ದೀನದಲಿತರ ಶಿಕ್ಷಣವನ್ನು ಒಂದು ಸಾಧನವಾಗಿ ಬಳಸಿಕೊಂಡು,ಸಹಾನುಭೂತಿಯ ಆಡಳಿತ, ಪ್ರಗತಿಶೀಲ ಚಿಂತನೆ, ನಾಯಕತ್ವ ಶ್ರೇಷ್ಠತೆ, ವೈಜ್ಞಾನಿಕ ಮನೋಭಾವ, ಪ್ರಜಾಸತ್ತಾತ್ಮಕ ಶಿಕ್ಷಣ ಮತ್ತು ಸುಸ್ಥಿರ ಆರ್ಥಿಕ ವ್ಯವಸ್ಥೆಯಲ್ಲಿ ಸಮಾಜವನ್ನು ನಿರ್ಮಿಸಲು  ರಜನಿಕಾಂತ್ ಫೌಂಡೇಶನ್  ಉದ್ದೇಶಿಸಿದೆ. 

ಡಿಸೆಂಬರ್ 26, ಭಾನುವಾರದಂದು ಪ್ರಾರಂಭವಾದ ಫೌಂಡೇಶನ್ TNPSC (ತಮಿಳುನಾಡು ಲೋಕಸೇವಾ ಆಯೋಗ) ಪರೀಕ್ಷಾ ಆಕಾಂಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಸಂದರ್ಶನ ಮತ್ತು ಆಯ್ಕೆ ಪ್ರಕ್ರಿಯೆಯ ಆಧಾರದ ಮೇಲೆ,  100 ಅಭ್ಯರ್ಥಿಗಳನ್ನು ತಜ್ಞರು ಆಯ್ಕೆ ಮಾಡುವ ಅಭ್ಯರ್ಥಿಗಳಿಗೆ ಫೆಬ್ರವರಿ 2022 ರಿಂದ ಚೆನ್ನೈನಲ್ಲಿ ಉಚಿತ ತರಬೇತಿ ನೀಡಲಾಗುತ್ತದೆ. 

ಮೊದಲ ತಲೆಮಾರಿನ ಪದವೀಧರರು, ಬಡತನ ರೇಖೆಗಿಂತ ಕೆಳಗಿರುವವರು ಮತ್ತು ಕಡಿಮೆ-ಆದಾಯದ ಗುಂಪು,  ಅನಾಥರು, ರೈತರ ಮಕ್ಕಳು ಮತ್ತು ಕೊಳೆಗೇರಿಯ ಮಕ್ಕಳ ಶಿಕ್ಷಣದ ಮೇಲೆ ಪ್ರತಿಷ್ಠಾನವು ನಿರ್ದಿಷ್ಟವಾಗಿ ಗಮನಹರಿಸುತ್ತದೆ ಎಂದು ತಮ್ಮ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. 

SCROLL FOR NEXT