ನಟಿ ನಾನಿ ಮತ್ತು ನಟಿ ರೋಜಾ 
ದೇಶ

ನಟ ನಾನಿಗೆ ಸಿನಿಮಾ ವೇಸ್ಟ್, ಕಿರಾಣಿ ವ್ಯಾಪಾರ ಬೆಸ್ಟ್: ರೋಜಾ ಕಿಡಿ

ಆಂಧ್ರ ಪ್ರದೇಶದಲ್ಲಿನ ಸಿನಿಮಾ ಟಿಕೆಟ್ ಸಮಸ್ಯೆ ಕುರಿತಂತೆ  ನ್ಯಾಚುರಲ್ ಸ್ಟಾರ್ ನಾಯಕ ನಾನಿ ಹೇಳಿಕೆಗೆ ರೋಜಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 

ಆಂಧ್ರ ಪ್ರದೇಶ: ಆಂಧ್ರ ಪ್ರದೇಶದಲ್ಲಿನ ಸಿನಿಮಾ ಟಿಕೆಟ್ ಸಮಸ್ಯೆ ಕುರಿತಂತೆ  ನ್ಯಾಚುರಲ್ ಸ್ಟಾರ್ ನಾಯಕ ನಾನಿ ಹೇಳಿಕೆಗೆ ರೋಜಾ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 

ಸಿನಿಮಾ ಥಿಯೇಟರ್ ಗಳಿಗಿಂತ ದಿನಸಿ ವ್ಯಾಪಾರ ಚೆನ್ನಾಗಿದೆ ಎಂದು ಅಭಿಪ್ರಾಯಪಟ್ಟಾಗ, ನಾನಿ ಸಿನಿಮಾ ಮಾಡೋದು ವೇಸ್ಟ್, ದಿನಸಿ ವ್ಯಾಪಾರ ಮಾಡಬಹುದು ಎಂದು ಕಾಮೆಂಟ್ ಮಾಡಿದ್ದಾರೆ. 

ನಾಯಕ ನಾನಿ ಅವರ ಮಾತುಗಳು ಪ್ರಚೋದನಕಾರಿಯಾಗಿದೆ. ಇಂತಹ ಟೀಕೆಗಳಿಂದ ತೆಲುಗು ಚಿತ್ರರಂಗ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಬಹುದು ಎಂದು ರೋಜಾ ಅಭಿಪ್ರಾಯಪಟ್ಟಿದ್ದಾರೆ. ನಾನಿ ಅಸ್ತಿತ್ವಕ್ಕೆ ಹಾಗೂ ಇಂಥ ವಿವಾದಕ್ಕೆ ಕೆಲ ರಾಜಕೀಯ ನಾಯಕರೇ ಕಾರಣ ಎಂದು ರೋಜಾ ಹೇಳಿದ್ದಾರೆ.

ಮುಖ್ಯಮಂತ್ರಿ ಜಗನ್ ಏನೇ ಮಾಡಿದರೂ ಅದು ಬಡವರ ಒಳಿತಿಗಾಗಿ. ಸಿನಿಮಾ ಟಿಕೆಟ್ ವಿಚಾರದಲ್ಲಿ ಕೆಲವರು ದೊಡ್ಡ ಸಿನಿಮಾಗಳ ಬಗ್ಗೆಯೇ ಯೋಚಿಸುತ್ತಿದ್ದಾರೆ. ಅಂಥವರು ಚಿಕ್ಕ ಸಿನಿಮಾಗಳ ಬಗ್ಗೆ ತಲೆಕೆಡಿಸಿಕೊಳ್ಳುವವರಲ್ಲ ಎಂದರು.

ಎಲ್ಲ ಚಿತ್ರಗಳಿಗೂ ಒಂದೇ ದರ ಎಂದರೆ ಸಣ್ಣ ಸಣ್ಣ ಸಿನಿಮಾಗಳು ಉಳಿಯಲು ಸಾಧ್ಯವಿಲ್ಲ. ಆಂಧ್ರ ಸರ್ಕಾರ ಈ ವಿಷಯದ ಬಗ್ಗೆ ಸಮಿತಿಯನ್ನು ರಚಿಸಿದೆ. ಸಮಿತಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಿದೆ. ಸರ್ಕಾರ ಮತ್ತು ಚಿತ್ರರಂಗದ ನಡುವೆ ಯಾವುದೇ ಅಂತರವಿಲ್ಲ ಎಂದು ಸ್ಪಷ್ಪಪಡಿಸಿದರು.

ಟಿಕೆಟ್ ದರದ ಬಗ್ಗೆ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ. ಬಡವರು ಮತ್ತು ಮಧ್ಯಮ ವರ್ಗದವರೇ ಹೆಚ್ಚಾಗಿ ಚಿತ್ರಮಂದಿರಗಳಿಗೆ ಬರುತ್ತಾರೆ. ಟಿಕೆಟ್ ದರ ನಿಗದಿಯಾದರೆ ಜನ ಸಾಮಾನ್ಯರು ಸಿನಿಮಾ ನೋಡುವ ಅವಕಾಶಗಳಿವೆ. ದೊಡ್ಡ ಸಿನಿಮಾ ನಿರ್ಮಾಪಕರೇ ಟಿಕೆಟ್ ದರಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ ಎಂದು ರೋಜಾ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT