ದೇಶ

ಪಂಜಾಬ್ ಚುನಾವಣೆ: ಮಾಜಿ ಕ್ರಿಕೆಟಿಗ ದಿನೇಶ್ ಮೊಂಗಿಯಾ ಬಿಜೆಪಿ ಸೇರ್ಪಡೆ

Lingaraj Badiger

ಚಂಡಿಗಢ: ಮಾಜಿ ಕ್ರಿಕೇಟ್ ಆಟಗಾರ ದಿನೇಶ್ ಮೊಂಗಿಯ ಅವರು ದೆಹಲಿಯಲ್ಲಿ ಅಧಿಕೃತವಾಗಿ ಜಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಪಂಜಾಬ್ ಮೂಲದವರಾದ ದಿನೇಶ್ ಮೋಂಗಿಯಾ ಭಾರತದ ಪರವಾಗಿ ಹಲವು ಕ್ರಿಕೇಟ್ ಪಂದ್ಯಗಳನ್ನ ಆಡಿದ್ದಾರೆ. ಇವರಿಗೆ 44 ವರ್ಷ ವಯಸ್ಸಾಗಿದ್ದೂ. ಇದೀಗ ದೆಹಲಿಯ ಬಿಜೆಪಿ ಕಾರ್ಯಾಲಯದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಅವರೊಂದಿಗೆ ಇನ್ನೂ ಮೂವರು ಪಂಜಾಬ್ ಶಾಸಕರು ಬಿಜೆಪಿ ಸೇರ್ಪಡೆಗೊಂಡಿರುವುದು ವಿಶೇಷವಾಗಿದೆ.

ಪಂಜಾಬ್ ನಲ್ಲಿ ಚುನಾವಣೆಗೂ ಮುನ್ನ ದಿನೇಶ್ ಮೊಂಗಿಯಾ ಬಿಜೆಪಿ ಸೇರ್ಪಡೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ ಚುನಾವಣೆಗೂ ಮುನ್ನ ಮಾಜಿ ಕ್ರಿಕೇಟ್ ಆಟಗಾರರು ರಾಜಕೀಯ ಪಕ್ಷಗಳ ಸೇರ್ಪಡೆ ಸಾಮಾನ್ಯವಾಗಿದೆ.

2019 ರಲ್ಲಿ ಚುನಾವಣೆಗೂ ಮುನ್ನ ಮಾಜಿ ಕ್ರಿಕೇಟ್ ಆಟಗಾರ ಗೌತಮ್ ಗಂಭೀರ್ ಬಿಜೆಪಿಗೆ ಸೇರ್ಪಡೆಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಅತಿಶಿ ವಿರುದ್ದ ಸುಮಾರು ಐದು ಲಕ್ಷ ಮತಗಳಿಂದ ಜಯಗಳಿಸಿದ್ದರು.

ಪಂಜಾಬ್ ನಲ್ಲಿ ಚುನಾವಣ ಕಣ ರಂಗೇರುವ ಲಕ್ಷಣಗಳು ಕಾಣುತ್ತಿದೆ. ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ನಿರ್ಗಮನದ ನಂತರ ಕಾಂಗ್ರೆಸ್ ರಾಜಕೀಯ ಹಿಡಿತದಿಂದ ಪಂಜಾಬ್ ಅನ್ನು ತಮ್ಮ  ವಶಕ್ಕೆ ಪಡೆಯಲು ಬಿಜೆಪಿ, ಆಮ್ ಆದ್ಮಿಯಂಥ ಘಟಾನಿಘಟಿ ಪಕ್ಷಗಳು ತೆರೆಮರೆಯ ಕಸರತ್ತನ್ನು ನಡೆಸುತ್ತಿವೆ.

SCROLL FOR NEXT