ದೇಶ

ಯುಐಪಿಎ ಅಡಿಯಲ್ಲಿನ ಎಲ್ಲಾ ಆರೋಪ ಮುಕ್ತಗೊಳಿಸಿದ ಎನ್ಐಎ ಕೋರ್ಟ್; ಅಖಿಲ್ ಗೊಗೊಯ್ ಜೈಲಿನಿಂದ ಬಿಡುಗಡೆ ಸಾಧ್ಯತೆ

Vishwanath S

ಗುವಾಹಟಿ: 2019ರ ಡಿಸೆಂಬರ್ ನಲ್ಲಿ ಅಸ್ಸಾಂನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ವ್ಯಾಪಕ ಪ್ರತಿಭಟನೆ ನಡೆದಿದ್ದು ನಂತರ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಈ ಸಂಬಂಧ ಗಲಬೆಗೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಬಂಧಿಸಲಾಗಿದ್ದ ಶಿವಸಾಗರ್ ಶಾಸಕ ಅಖಿಲ್ ಗೊಗೊಯ್ ರನ್ನು ಜೈಲಿನಿಂದ ಬಿಡುಗಡೆ ಮಾಡುವ ಸಾಧ್ಯತೆ ಇದೆ. 

ಗಲಭೆಗೆ ಕುಮ್ಮಕ್ಕು ನೀಡಿದ ಆರೋಪದ ಹಿನ್ನಲೆ ಅಖಿಲ್ ಗೊಗೊಯ್ ಮತ್ತು ಆತನ ಮೂವರು ಸಹಚರರ ವಿರುದ್ಧ ಕಾನೂನುಬಾಹಿರ ಚಟುವಟಿಕೆ(ತಡೆ) ಕಾಯ್ದೆ ಅಡಿಯಲ್ಲಿ ಎರಡು ಪ್ರಕರಣ ದಾಖಲಿಸಲಾಗಿತ್ತು. ಅಖಿಲ್ ಗೊಗೊಯ್ ಮತ್ತು ಆತನ ಸಹಚರರ ವಿರುದ್ಧದ ಮೊದಲ ಪ್ರಕರಣದ ಆರೋಪವನ್ನು ಎನ್ಐಎ ವಿಶೇಷ ನ್ಯಾಯಾಲಯ ಜೂನ್ 22ರಂದು ತೆರವುಗೊಳಿಸಿದ್ದರಿಂದ ಅಖಿಲ್ ಗೊಗೊಯ್ ಗುರುವಾರ ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದೆ. 

ಚಾವ್ಮರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಗೊಗೊಯ್ ಮತ್ತು ಅವರ ಮೂವರು ಸಹಚರರಾದ ಧೈರ್ಜ್ಯಾ ಕೊನ್ವರ್, ಮನಸ್ ಕೊನ್ವಾರ್ ಮತ್ತು ಬಿಟು ಸೋನೊವಾಲ್ ಮಾವೋವಾದಿ ಸಂಪರ್ಕ ಹೊಂದಿದ್ದಾರೆಂಬ ಕುರಿತು ಎನ್ಐಎ ವಿಶೇಷ ನ್ಯಾಯಾಧೀಶ ಪ್ರಂಜಲ್ ದಾಸ್ ಯಾವುದೇ ಆರೋಪಗಳನ್ನು ಮಾಡಲಿಲ್ಲ.

ಹಿಂಸಾತ್ಮಕ ಪ್ರತಿಭಟನೆಯಲ್ಲಿ ಗೊಗೊಯ್ ಮತ್ತು ಅವರ ಸಹಚರರ ಪಾತ್ರ ಸಂಬಂಧಿಸಿದ ಎರಡು ಪ್ರಕರಣಗಳನ್ನು ಎನ್ಐಎ ಆರಂಭದಲ್ಲಿ ಚಾಂದಮರಿ ಮತ್ತು ಚಾಬುವಾ ಪೊಲೀಸ್ ಠಾಣೆಗಳಲ್ಲಿ ದಾಖಲಿಸಲಾಗಿತ್ತು.

ನ್ಯಾಯಾಲಯವು ಬಿಡುಗಡೆ ಆದೇಶವನ್ನು ಜೈಲಿಗೆ ಕಳುಹಿಸಿದ ನಂತರ ಗೊಗೊಯ್ ಬಿಡುಗಡೆಯಾಗುವ ಸಾಧ್ಯತೆಯಿದೆ. ಇನ್ನು ಗೊಗೊಯ್ ರ ಮೂವರು ಸಹಚರರು ಈಗಾಗಲೇ ಜಾಮೀನಿನ ಮೇಲೆ ಹೊರಬಂದಿದ್ದಾರೆ.

SCROLL FOR NEXT