ಚಿರತೆಯ ಸಾಂದರ್ಭಿಕ ಚಿತ್ರ 
ದೇಶ

ಮಧ್ಯ ಪ್ರದೇಶ: ಬರ್ತ್ ಡೇ ಕೇಕ್ ಎಸೆದು ಚಿರತೆಯಿಂದ ಪಾರಾದ ಸಹೋದರರು!

ಮೋಟಾರು ಬೈಕ್ ನಲ್ಲಿ ಹೋಗುತ್ತಿದ್ದವರನ್ನು ಹಿಂಬಾಲಿಸುತ್ತಿದ್ದ ಚಿರತೆಯೊಂದರ ಮೇಲೆ ಬರ್ತ್ ಡೇ ಕೇಕ್ ಎಸೆದು ಸಹೋದರಿರಬ್ಬರು ಪಾರಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಮಧ್ಯಪ್ರದೇಶ: ಮೋಟಾರು ಬೈಕ್ ನಲ್ಲಿ ಹೋಗುತ್ತಿದ್ದವರನ್ನು ಹಿಂಬಾಲಿಸುತ್ತಿದ್ದ ಚಿರತೆಯೊಂದರ ಮೇಲೆ ಬರ್ತ್ ಡೇ ಕೇಕ್ ಎಸೆದು ಸಹೋದರಿರಬ್ಬರು ಪಾರಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಅಪಾಯದ ಸಂದರ್ಭದ್ಲಲಿ ಪ್ರಾಣ ರಕ್ಷಿಸಿಕೊಳ್ಳಲು ಏನಾದರೊಂದು ಮಾಡಬೇಕು, ಅದೇ ರೀತಿಯಲ್ಲಿ ಅವರು ಮಾಡಿರುವುದಾಗಿ ಅರಣ್ಯಾಧಿಕಾರಿಯೊಬ್ಬರು ಹೇಳಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ತನ್ನ ಮಗನ ಹುಟ್ಟುಹಬ್ಬ ಆಚರಣೆಗಾಗಿ ಫಿರೋಜ್ ಮತ್ತು  ಸಬೀರ್ ಮನ್ಸೂರಿ ಮುಸ್ಸಂಜೆಯಲ್ಲಿ ಬೈಕ್ ನಲ್ಲಿ ಹೋಗುತ್ತಿರುವಾಗ ಕಬ್ಬಿನ ಗದ್ದೆಯೊಂದರಲ್ಲಿ ಚಿರತೆ ಕಾಣಿಸಿಕೊಂಡಿದೆ. ಇದನ್ನು ನೋಡಿದ ಕೂಡಲೇ ಬೈಕ್ ವೇಗವನ್ನು ಹೆಚ್ಚಿಸಿದ್ದಾರೆ. ಆದರೆ, ದೊಡ್ಡ ಬೆಕ್ಕು ಮಣ್ಣಿನ ರಸ್ತೆಯಲ್ಲಿ ಅವರೊಂದಿಗೆ ಓಡಲು ಶುರು ಮಾಡಿದೆ. ಕೇಕ್ ಬಿಟ್ಟರೆ ಬೇರೆ ಆಯ್ಕೆ ಅವರ ಬಳಿ ಇರಲಿಲ್ಲ. ಅದನ್ನೇ ಆಯುಧವನ್ನಾಗಿ ಬಳಸಿದ ಸಹೋದರರು, ಚಿರತೆ ಮೇಲೆ ಎಸೆದಿದ್ದಾರೆ. ನಂತರ ಅದನ್ನು ಕಚ್ಚಿಕೊಂಡು ಹೊಲವೊಂದರ ಕಡೆಗೆ ಚಿರತೆ ವಾಪಸ್ಸಾಗಿದೆ. 

ಸುಮಾರು 500 ಮೀಟರ್ ವರೆಗೂ ಚಿರತೆ ನಮ್ಮನ್ನು ಹಿಂಬಾಲಿಸಿತು. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದೇವೆ ಎಂದು ಸಬೀರ್ ಹೇಳಿದ್ದಾರೆ. 2014ರಿಂದ 2018ರ ಅವಧಿಯಲ್ಲಿ ಶೇ 60 ರಷ್ಟು  ಅಂದರೆ 13 ಸಾವಿರ ಸಾವಿರದಷ್ಟು ಚಿರತೆ ಗಳು ದೇಶದಲ್ಲಿ ಹೆಚ್ಚಾಗಿವೆ.

ಮಧ್ಯಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆ ಚಿರತೆಗಳಿರುವುದಾಗಿ ಸರ್ಕಾರ ತಿಳಿಸಿದೆ. ಪಟ್ಟಣ ಹಾಗೂ ಹಳ್ಳಿಗಳಿಗೆ ಆಗಾಗ್ಗೆ ಲಗ್ಗೆ ಇಡುವ ಚಿರತೆಗಳು ಜನರಲ್ಲಿ ಭೀತಿಯನ್ನುಂಟು ಮಾಡುತ್ತಿವೆ. ವಯಸ್ಕರ ಮೇಲೆ ದಾಳಿ ಅಪರೂಪವಾದರೂ ಮಕ್ಕಳು ಹೆಚ್ಚಿನ ಅಪಾಯಕ್ಕೆ ತುತ್ತಾಗುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT