ಡಿನೋ ಮೊರಿಯಾ, ಡಿಜೆ ಅಕೀಲ್ 
ದೇಶ

ಅಹ್ಮದ್ ಪಟೇಲ್ ರ ಅಳಿಯ, ಡಿನೋ ಮೊರಿಯಾ, ಡಿಜೆ ಅಕೀಲ್ ಆಸ್ತಿ ಇಡಿ ವಶಕ್ಕೆ

ಗುಜರಾತ್ ಮೂಲದ ಔಷಧ ಕಂಪನಿಯ ಸ್ಟರ್ಲಿನ್ ಬಯೋಟೆಕ್ ಸಮೂಹವನ್ನು ಒಳಗೊಂಡ ಹಣ ವರ್ಗಾವಣೆ ಪ್ರಕರಣದಲ್ಲಿ ದಿವಂಗತ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರ ಅಳಿಯ, ನಟರಾದ ಡಿನೋ ಮೊರಿಯಾ ಮತ್ತು ಸಂಜಯ್ ಖಾನ್ ಮತ್ತು ಡಿಜೆ ಅಕೀಲ್ ಅವರ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ.

ನವದೆಹಲಿ: ಗುಜರಾತ್ ಮೂಲದ ಔಷಧ ಕಂಪನಿಯ ಸ್ಟರ್ಲಿನ್ ಬಯೋಟೆಕ್ ಸಮೂಹವನ್ನು ಒಳಗೊಂಡ ಹಣ ವರ್ಗಾವಣೆ ಪ್ರಕರಣದಲ್ಲಿ ದಿವಂಗತ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಅವರ ಅಳಿಯ, ನಟರಾದ ಡಿನೋ ಮೊರಿಯಾ ಮತ್ತು ಸಂಜಯ್ ಖಾನ್ ಮತ್ತು ಡಿಜೆ ಅಕೀಲ್ ಅವರ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಾರಿ ನಿರ್ದೇಶನಾಲಯ ಶುಕ್ರವಾರ ಹೇಳಿದೆ.

ಹಣ ವರ್ಗಾವಣೆ ತಡೆ ಕಾಯ್ದೆಯಡಿ ನಾಲ್ಕು ಜನರಿಗೆ ಸೇರಿದ 8.79 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆಯಲು ತಾತ್ಕಾಲಿಕ ಆದೇಶ ಹೊರಡಿಸಲಾಗಿದೆ ಎಂದು ಇಡಿ ಹೇಳಿದೆ.

 ಪರಾರಿಯಾಗಿದ್ದ ಸ್ಟರ್ಲಿಂಗ್ ಬಯೋಟೆಕ್ ಗುಂಪಿನ ಪ್ರವರ್ತಕರಾದ ನಿತಿನ್ ಸಂದೇಸರ ಮತ್ತು ಚೇತನ್ ಸಂದೇಸರ, ಅಪರಾಧದ ಆದಾಯವನ್ನು ನಾಲ್ಕು ಜನರಿಗೆ ತಿರುಗಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತಿಳಿಸಿದೆ. ನಿತಿನ್ ಸಂದೇಸರ, ಚೇತನ್ ಸಂದೇಸರ, ಚೇತನ್ ಅವರ ಪತ್ನಿ ದೀಪ್ತಿ ಸಂದೇಸರ ಮತ್ತು ಹಿತೇಶ್ ಪಟೇಲ್ ಅವರನ್ನು ವಿಶೇಷ ನ್ಯಾಯಾಲಯ ಪರಾರಿಯಾದ ಆರ್ಥಿಕ ಅಪರಾಧಿಗಳೆಂದು ಘೋಷಿಸಿದೆ. 

ಮನಿ ಲಾಂಡರಿಂಗ್ ಪ್ರಕರಣವು ಸ್ಟರ್ಲಿಂಗ್ ಬಯೋಟೆಕ್ ಮತ್ತು ಅದರ ಮುಖ್ಯ ಪ್ರವರ್ತಕರು ಮತ್ತು ನಿರ್ದೇಶಕರು ಮಾಡಿದ 14,500 ಕೋಟಿ ರೂ.ಗಳ ಬ್ಯಾಂಕ್-ಸಾಲ ವಂಚನೆಗೆ ಸಂಬಂಧಿಸಿದೆ. ಸ್ಟರ್ಲಿಂಗ್ ಬಯೋಟೆಕ್ ಮತ್ತು ಅದರ ಮುಖ್ಯ ಪ್ರವರ್ತಕರು, ನಿರ್ದೇಶಕರಿಂದ 14,500 ರೂಪಾಯಿಗಳ ಬ್ಯಾಂಕ್ ಸಾಲ ವಂಚನೆಯ ಕೇಸ್ ಇದಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಹಾರ್ಮುಜ್ ಮತ್ತೆಂದೂ ಹಿಂದಿನ ಸ್ಥಿತಿಗೆ ಮರಳಲ್ಲ, ನೆತನ್ಯಾಹು ಮಾತು ಕೇಳಿದರೆ ಹೊತ್ತಿ ಉರಿಯುತ್ತೀರಿ; ಅಮೆರಿಕಾಗೆ ಇರಾನ್ ಖಡಕ್ ಎಚ್ಚರಿಕೆ

ಟ್ರಂಪ್ ವಾರ್ನಿಂಗ್ ಬೆನ್ನಲ್ಲೇ ವಸತಿ ಕಟ್ಟಡಕ್ಕೆ ವಾಯುದಾಳಿ: ಇರಾನ್ ನಲ್ಲಿ 13 ಮಂದಿ ಸಾವು!

IPL 2026: ಇಲ್ಲಿಯವರೆಗೂ ನೋಡಿರದ ಆರ್ ಸಿಬಿಯ 'funniest moment': ವಿಡಿಯೋ ವೈರಲ್

“Tuesday, 8:00 P.M. Eastern Time"!: ಇರಾನ್'ಗೆ ಮತ್ತೊಂದು ಎಚ್ಚರಿಕೆ ಕೊಟ್ಟ ಟ್ರಂಪ್, ಸರ್ವನಾಶದ ಸುಳಿವು..!

ಅಮೆರಿಕಾ–ಇರಾನ್ ನಡುವೆ 45 ದಿನಗಳ ಕದನ ವಿರಾಮಕ್ಕೆ ಯತ್ನ: ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್..?

SCROLL FOR NEXT