ದೇಶ

ಲಸಿಕೆ ಪಡೆದ ಭಾರತೀಯರ ಪ್ರಯಾಣಕ್ಕೆ ಯುರೋಪಿಯನ್ ರಾಷ್ಟ್ರಗಳು ಅವಕಾಶ ನೀಡುವ ಸಾಧ್ಯತೆ-ಎಂಇಎ

Nagaraja AB

ನವದೆಹಲಿ: ಕೋವಿನ್ ಲಸಿಕೆ ಪ್ರಮಾಣ ಪತ್ರವನ್ನು ಯುರೋಪಿಯನ್  ಒಕ್ಕೂಟ ಪ್ರಯಾಣಕ್ಕಾಗಿ ಮಾನ್ಯ ಮಾಡುವ ನಿರೀಕ್ಷೆಯಲ್ಲಿದ್ದು, ಈ ವಿಚಾರದ ಬಗ್ಗೆ ಸದಸ್ಯ ರಾಷ್ಟ್ರಗಳೊಂದಿಗೆ ಸಂಪರ್ಕದಲ್ಲಿರುವುದಾಗಿ ಭಾರತ ಶುಕ್ರವಾರ ಹೇಳಿದೆ.

ನಮ್ಮ ದೇಶದಲ್ಲಿನ ವ್ಯಾಕ್ಸಿನೇಷನ್ ಕಾರ್ಯಕ್ರಮದ ಮೂಲಕ ಲಸಿಕೆ ಪಡೆದ ಭಾರತೀಯರಿಗೆ ಇಯುನಲ್ಲಿ ಲಸಿಕೆ ಹಾಕಿದವರಿಗೆ ಸಮನಾಗಿ ಪರಿಗಣಿಸಲಾಗುತ್ತದೆ ಮತ್ತು ಕೋವಿನ್ ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಇಯು ಪರಸ್ಪರ ಸ್ವೀಕರತೆ ಆಧಾರದಲ್ಲಿ ಮಾನ್ಯ ಮಾಡಲಿದೆ ಎಂಬ ನಿರೀಕ್ಷೆಯಲ್ಲಿರುವುದಾಗಿ ವಿದೇಶಾಂಗ ವ್ಯವಹಾರಗಳ ವಕ್ತಾರ ಅರಿಂದಂ ಬಾಗ್ಚಿ ಆನ್ ಲೈನ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಅಂತಹ ಕೋವಿನ್ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಕೋವಿನ್ ವೆಬ್‌ಸೈಟ್‌ನಲ್ಲಿಯೇ ಅಳವಡಿಸಲಾಗಿದೆ. ಪರಸ್ಪರ ಸ್ವೀಕಾರತೆಗೆ ಸಂಬಂಧಿಸಿದಂತೆ ಯುರೋಪಿಯನ್ ಸದಸ್ಯ ರಾಷ್ಟ್ರಗಳೊಂದಿಗೆ ಸಂಪರ್ಕದಲ್ಲಿದ್ದೇವೆ. ಈ ನಿಟ್ಟಿನಲ್ಲಿ ಇಯು ರಾಷ್ಟ್ರಗಳು ಈಗಾಗಲೇ ಸಕಾರಾತ್ಮಕ ಹೆಜ್ಜೆಗಳನ್ನು ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

ಕೋವಿಶೀಲ್ಡ್ ಲಸಿಕೆ ತೆಗೆದುಕೊಂಡ ಪ್ರಯಾಣಿಕರು ತಮ್ಮ ದೇಶಗಳಿಗೆ ಪ್ರಯಾಣಿಸಲು ಒಂಬತ್ತು ಯುರೋಪಿಯನ್ ರಾಷ್ಟ್ರಗಳು ಸಮ್ಮತಿಸಿವೆ ಎಂಬ ಮೂಲಗಳ ಬೆನ್ನಲ್ಲೇ, ಅವರು ಈ ಹೇಳಿಕೆ ನೀಡಿದ್ದಾರೆ.

ಕೋವಿಶೀಲ್ಡ್ ಲಸಿಕೆಗಳನ್ನು ತೆಗೆದುಕೊಂಡ ಜನರ ಪ್ರಯಾಣಕ್ಕೆ ಅವಕಾಶ ನೀಡುವ ದೇಶಗಳಲ್ಲಿ ಆಸ್ಟ್ರಿಯಾ, ಜರ್ಮನಿ, ಸ್ಲೊವೇನಿಯಾ, ಗ್ರೀಸ್, ಐಸ್ಲ್ಯಾಂಡ್, ಐರ್ಲೆಂಡ್ ಮತ್ತು ಸ್ಪೇನ್ ಸೇರಿವೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT