ದೇಶ

ಶೇಕಡ 65ರಷ್ಟು ಆಸನ ಸಾಮರ್ಥ್ಯದೊಂದಿಗೆ ದೇಶೀಯ ವಿಮಾನಯಾನಕ್ಕೆ ಅವಕಾಶ: ಕೇಂದ್ರ

Vishwanath S

ನವದೆಹಲಿ: ವಿಮಾನಯಾನ ಸಂಸ್ಥೆಗಳು ದೇಶೀಯ ವಿಮಾನಯಾನವನ್ನು ಈ ಹಿಂದಿನ ಕೋವಿಡ್ ಮಾರ್ಗಸೂಚಿ ಶೇಕಡ 50ರಷ್ಟು ಬದಲಿಗೆ ಗರಿಷ್ಠ 65ರಷ್ಟರವರೆಗೆ ನಿರ್ವಹಿಸಬಹುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಸೋಮವಾರ ತಿಳಿಸಿದೆ.

ಸಚಿವಾಲಯದ ಮೇ 28ರ ಆದೇಶದ ಪ್ರಕಾರ ಜೂನ್ 1ರಿಂದ ವಿಮಾನಯಾನ ಸಂಸ್ಥೆಗಳು ತಮ್ಮ ಪೂರ್ವ-ಕೋವಿಡ್ ದೇಶೀಯ ವಿಮಾನಗಳಲ್ಲಿ ಕೇವಲ 50ರಷ್ಟು ಆಸನ ವ್ಯವಸ್ಥೆಯನ್ನು ಮಾತ್ರ ಬಳಸಬೇಕಿತ್ತು.

ದೇಶಾದ್ಯಂತ ಸಕ್ರೀಯ ಪ್ರಕರಣಗಳ ಸಂಖ್ಯೆ ದಿಢೀರ್ ಹೆಚ್ಚಾದ ಹಿನ್ನೆಲೆಯಲ್ಲಿ ಜೂನ್ 1ಕ್ಕೂ ಮುನ್ನ 80ರಷ್ಟಿದ್ದ ಆಸನ ವ್ಯವಸ್ಥೆಯನ್ನು ಮೇ 28ರಂದು ಶೇಕಡಾ 80ರಿಂದ 50ಕ್ಕೆ ಇಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು. 

ಇದು ಹೊಸ ಆದೇಶವನ್ನು ಹೊರಡಿಸಿದ್ದು, ಅದರಲ್ಲಿ ಮೇ 28 ರ ಆದೇಶವನ್ನು "50 ಶೇಕಡಾ ಸಾಮರ್ಥ್ಯವನ್ನು 65 ಶೇಕಡಾ ಸಾಮರ್ಥ್ಯ ಹೆಚ್ಚಿಸಲಾಗಿದೆ ಎಂದು ತಿಳಿಸಿದೆ. ಈ ಮಾರ್ಗಸೂಚಿ ಜುಲೈ 31ರವರೆಗೆ ಅನ್ವಯಿಸುತ್ತದೆ. 

ಎರಡು ತಿಂಗಳ ವಿರಾಮದ ನಂತರ ಸರ್ಕಾರವು ಕಳೆದ ವರ್ಷ ಮೇ 25ರಂದು ನಿಗದಿತ ದೇಶೀಯ ವಿಮಾನಯಾನವನ್ನು ಪುನರಾರಂಭಿಸುವುದಕ್ಕೆ ಅವಕಾಶ ನೀಡಿತ್ತು. 

SCROLL FOR NEXT