ದೇಶ

ದೇಶದ ನೂತನ ಐಟಿ ನಿಯಮಗಳನ್ನು ಪಾಲಿಸುವಲ್ಲಿ ಟ್ವಿಟರ್ ಸಂಸ್ಥೆ ವಿಫಲ: ದೆಹಲಿ ಹೈಕೋರ್ಟ್ ಗೆ ಕೇಂದ್ರ ಸರ್ಕಾರ ಮಾಹಿತಿ

Nagaraja AB

ನವದೆಹಲಿ: ದೇಶದ ನೂತನ ಐಟಿ ನಿಯಮಗಳನ್ನು ಅನುಸರಿಸುವಲ್ಲಿ  ಸೋಶಿಯಲ್ ಮೀಡಿಯಾ ದೈತ್ಯ ಕಂಪನಿ ಟ್ವಿಟರ್ ಸಂಸ್ಥೆ ವಿಫಲವಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಇಲ್ಲಿನ ಹೈಕೋರ್ಟ್ ಗೆ ಹೇಳಿದೆ. ನೂತನ ಐಟಿ ನಿಯಮಗಳು ನೆಲದ ಕಾನೂನಾಗಿದ್ದು, ಅವುಗಳನ್ನು ಕಡ್ಡಾಯವಾಗಿ ಪಾಲಿಸಬೇಕಾದ ಅಗತ್ಯವಿದೆ.

ಈ  ಸಂಬಂಧ ಹೈಕೋರ್ಟ್ ಗೆ ಅಫಿಡವಿಟ್ ವೊಂದನ್ನು  ಸಲ್ಲಿಸಿರುವ ಕೇಂದ್ರ ಸರ್ಕಾರ, ಯಾವುದೇ ನಿಯಮಗಳನ್ನು ಪಾಲಿಸದಿರುವುದು ಐಟಿ ನಿಯಮಗಳ ವಿನಾಯಿತಿಯಲ್ಲಿನ ಉಲ್ಲಂಘನೆಯಾಗಿದ್ದು, ಇದರಿಂದ ಐಟಿ ಕಾಯ್ದೆಯಡಿ ನೀಡಲಾಗುವ ಪ್ರತಿರಕ್ಷೆಯನ್ನು ಟ್ವಿಟರ್ ಕಳೆದುಕೊಳ್ಳಲು ಕಾರಣವಾಗಲಿದೆ ಎಂದು ಹೇಳಿದೆ.

ವಕೀಲ ಅಮಿತ್ ಆಚಾರ್ಯರ ಮನವಿಗೆ ಪ್ರತಿಕ್ರಿಯೆಯಾಗಿ ಅಫಿಡವಿಟ್ ಸಲ್ಲಿಸಲಾಗಿದೆ, ಇದರಲ್ಲಿ ಅವರು ಕೇಂದ್ರದ ಹೊಸ ಐಟಿ ನಿಯಮಗಳನ್ನು ವೇದಿಕೆಯಿಂದ ಪಾಲಿಸುವುದಿಲ್ಲ ಎಂದು ಹೇಳಿದ್ದಾರೆ.

SCROLL FOR NEXT