ದೇಶ

ಹೊಸ ಐಟಿ ನಿಯಮಗಳ ಮಾನ್ಯತೆ ಪ್ರಶ್ನಿಸಲಾದ ಹೈ ಕೋರ್ಟ್ ಅರ್ಜಿಗಳ ವರ್ಗಾವಣೆಗೆ ಸುಪ್ರೀಂಗೆ ಕೇಂದ್ರ ಸರ್ಕಾರ ಅರ್ಜಿ

Nagaraja AB

ನವದೆಹಲಿ: ನೂತನ ಐಟಿ ನಿಯಮಗಳ ಮಾನ್ಯತೆಯನ್ನು ಪ್ರಶ್ನಿಸಿ ದೇಶದ ವಿವಿಧ ಹೈಕೋರ್ಟ್ ಗಳಲ್ಲಿ ಬಾಕಿಯಿರುವ ಅರ್ಜಿಗಳ ವರ್ಗಾವಣೆ ಕೋರಿ ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದೆ.

ದೆಹಲಿ ಹೈಕೋರ್ಟ್ ಸೇರಿದಂತೆ ವಿವಿಧ ಹೈಕೋರ್ಟ್ ಗಳಲ್ಲಿ ನೂತನ ಐಟಿ ನಿಯಮಗಳು 2021 ಪ್ರಶ್ನಿಸಿ ಅನೇಕ ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದು ಹಿರಿಯ ಕಾನೂನು ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.

ಹೈಕೋರ್ಟ್‌ನಲ್ಲಿ ಬಾಕಿ ಇರುವ ಅರ್ಜಿಗಳು ಸಾಮಾಜಿಕ ಮಾಧ್ಯಮ ಸಂಸ್ಥೆಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ಒಟಿಟಿ ಪ್ಲೇಯರ್ಸ್ ನಿಯಂತ್ರಿಸುವ ಉದ್ದೇಶದ ಹೊಸ ಐಟಿ ನಿಯಮಗಳನ್ನು ಪ್ರಶ್ನಿಸಿವೆ.

ಆಡಳಿತ ಸಂಸ್ಥೆಗಳು ಮತ್ತು ನ್ಯಾಯಾಲಯಗಳಿಂದ ಬರುವ ಆನ್ ಲೈನ್ ವಿಷಯಗಳನ್ನು ಪರಿಹರಿಸಲು ದೇಶದಲ್ಲಿ  ನೆಲೆಸಿರುವ ಅಧಿಕಾರಿಯೊಂದಿಗೆ ದೂರು ಪರಿಹಾರ ವ್ಯವಸ್ಥೆಯನ್ನು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಜಾರಿಗೆ ತರಬೇಕಾಗುತ್ತದೆ.

ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ಸ್ಥಾನಿಕ ಕುಂದುಕೊರತೆ ಅಧಿಕಾರಿಯನ್ನು ಯಾವಾಗ ನೇಮಕ ಮಾಡಬೇಕೆಂದು ಜುಲೈ 8 ರೊಳಗೆ ತಿಳಿಸುವಂತೆ ದೆಹಲಿ ಹೈಕೋರ್ಟ್ ಟ್ವಿಟರ್‌ಗೆ ಇಂದು ಬೆಳಗ್ಗೆ ಸೂಚನೆ ನೀಡಿದೆ.

SCROLL FOR NEXT