ಮಮತಾ ಬ್ಯಾನರ್ಜಿ 
ದೇಶ

ಮಮತಾ ಬ್ಯಾನರ್ಜಿಗೆ 5 ಲಕ್ಷ ರೂ. ದಂಡ ವಿಧಿಸಿದ ಕಲ್ಕತ್ತಾ ಹೈಕೋರ್ಟ್

ಬಿಜೆಪಿಯ ಸುವೇಂದು ಅಧಿಕಾರಿ ಚುಣಾವಣಾ ಅರ್ಜಿ ಸಂಬಂಧ ವಿಚಾರಣೆಯಿಂದ ಹಿಂದೆ ಸರಿಯುವಂತೆ ನ್ಯಾಯಮೂರ್ತಿಗಳನ್ನು ಕೇಳಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಕಲ್ಕತ್ತಾ ಹೈಕೋರ್ಟ್ ಇಂದು 5 ಲಕ್ಷ ರೂ. ದಂಡ ವಿಧಿಸಿದೆ.

ಕೋಲ್ಕತ್ತಾ: ಬಿಜೆಪಿಯ ಸುವೇಂದು ಅಧಿಕಾರಿ ಚುಣಾವಣಾ ಅರ್ಜಿ ಸಂಬಂಧ ವಿಚಾರಣೆಯಿಂದ ಹಿಂದೆ ಸರಿಯುವಂತೆ ನ್ಯಾಯಮೂರ್ತಿಗಳನ್ನು ಕೇಳಿದ್ದ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಕಲ್ಕತ್ತಾ ಹೈಕೋರ್ಟ್ ಇಂದು 5 ಲಕ್ಷ ರೂ. ದಂಡ ವಿಧಿಸಿದೆ.

ನ್ಯಾಯಾಧೀಶ ಕೌಶಿಕ್ ಚಂದಾ ಅವರು ಮಮತಾ ಅವರಿಗೆ ದಂಡ ವಿಧಿಸಿದ್ದಾರೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ  "ಹಿತಾಸಕ್ತಿ ಸಂಘರ್ಷ"ದ ಪ್ರಕರಣ ವಿಚಾರಣೆ ನಡೆಸದಂತೆ ಕೇಳಿದ್ದರು.

ಪ್ರಕರಣದಿಂದ ನಿರ್ಗಮಿಸುವ ಮೊದಲು, ನ್ಯಾಯಾಧೀಶರು "ನ್ಯಾಯಾಧೀಶರನ್ನು ಕೆಣಕಲು ಪೂರ್ವಯೋಜಿತ ಕ್ರಮ" ದೊಂದಿಗೆ ಆಕೆ (ಮಮತಾ ಬ್ಯಾನರ್ಜಿ) ಸಾಂವಿಧಾನಿಕ ಕರ್ತವ್ಯವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದರು.

ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅರ್ಜಿಯನ್ನು ನ್ಯಾಯಮೂರ್ತಿ ಚಂದಾ ತಿರಸ್ಕರಿಸಿದ್ದಾರೆ. ಆದಾಗ್ಯೂ, ಅವರು ತಮ್ಮ ವೈಯಕ್ತಿಕ ವಿವೇಚನೆಯಿಂದ ಪ್ರಕರಣದಿಂದ ದೂರವಿರಲು ನಿರ್ಧರಿಸಿದರು ಮತ್ತು ಪ್ರಕರಣವನ್ನು ತಮ್ಮ ನ್ಯಾಯಪೀಠದಿಂದ ತೆರವುಗೊಳಿಸಿದರು.

ನ್ಯಾಯಾಂಗವನ್ನು "ಕೆಟ್ಟ ರೀತಿಯಲ್ಲಿ" ಚಿತ್ರಿಸಲು ಮಮತಾ ಬ್ಯಾನರ್ಜಿಯತ್ನಿಸಿದ ಕಾರಣ  5 ಲಕ್ಷ ದಂಡವನ್ನು ವಿಧಿಸಲಾಗಿದೆ ಎಂದು ನ್ಯಾಯಾಲಯದ ಆದೇಶದಲ್ಲಿ ತಿಳಿಸಲಾಗಿದೆ. ಪಶ್ಚಿಮ ಬಂಗಾಳ ಸಿಎಂ ದಂಡದಲ್ಲಿ ಪಾವತಿಸಿದ ಮೊತ್ತವನ್ನು ಕೋವಿಡ್ -19 ಪೀಡಿತ ವಕೀಲರ ಕುಟುಂಬಗಳಿಗೆ ಬಳಸಲಾಗುವುದು ಎಂದು ಕಲ್ಕತ್ತಾ ಹೈಕೋರ್ಟ್ ತಿಳಿಸಿದೆ. 

ಈ ಹಿಂದೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಲ್ಕತ್ತಾ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಿಗೆ ಪತ್ರವೊಂದನ್ನು ಕಳುಹಿಸಿ ನ್ಯಾಯಮೂರ್ತಿ ಚಂದಾ ಅವರನ್ನು "ಪಕ್ಷಪಾತದ ಸಾಧ್ಯತೆ"ಯ ಸಂಬಂಧ ಖಾಯಂ ನ್ಯಾಯಾಧೀಶರನ್ನಾಗಿ ನೇಮಕ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!