ದೇಶ

ನಂಬಿ ನಾರಾಯಣನ್ ಬಂಧನದಿಂದಾಗಿ ಭಾರತದಲ್ಲಿ ಕ್ರಯೋಜೆನಿಕ್ ತಂತ್ರಜ್ಞಾನ ಅಭಿವೃದ್ಧಿ ವಿಳಂಬ: ಕೇರಳ ಹೈಕೋರ್ಟ್ ಗೆ ಸಿಬಿಐ

Vishwanath S

ಕೊಚ್ಚಿ: 1994ರ ಬೇಹುಗಾರಿಕೆ ಪ್ರಕರಣವೊಂದರಲ್ಲಿ ಮಾಜಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಬಂಧನದಿಂದಾಗಿ ಭಾರತದ ಕ್ರಯೋಜೆನಿಕ್ ತಂತ್ರಜ್ಞಾನದ ಅಭಿವೃದ್ಧಿಯಲ್ಲಿ ವಿಳಂಬಕ್ಕೆ ಕಾರಣವಾಯಿತು ಎಂದು ಕೇರಳ ಹೈಕೋರ್ಟ್ ಗೆ ಸಿಬಿಐ ತಿಳಿಸಿದೆ. 

ಅಲ್ಲದೆ ಪ್ರಕರಣದಲ್ಲಿ ಭಾಗಿಯಾಗಿರುವ ಇಬ್ಬರು ಮಾಜಿ ಕೇರಳ ಪೊಲೀಸ್ ಅಧಿಕಾರಿಗಳಿಗೆ ಜಾಮೀನು ನೀಡದಂತೆ ಸಿಬಿಐ ಹೈಕೋರ್ಟ್‌ಗೆ ಮನವಿ ಮಾಡಿದೆ. ಇಬ್ಬರು ಆರೋಪಿಗಳ ವಿರುದ್ಧದ ಅಪರಾಧಗಳು ಸ್ವಭಾವತಃ ಗಂಭೀರವಾಗಿವೆ ಎಂದು ಸಿಬಿಐ ಹೇಳಿದೆ.

ನಂಬಿ ನಾರಾಯಣನ್ ಅವರನ್ನು ಸಿಕ್ಕಿಹಾಕಿಸುವಲ್ಲಿ ಇಬ್ಬರೂ ಸಕ್ರಿಯ ಪಾತ್ರವಹಿಸಿದ್ದಾರೆ. ಇತರ ಅಪರಿಚಿತ ವ್ಯಕ್ತಿಗಳೊಂದಿಗೆ ಸೇರಿ ಪಿತೂರಿಯ ಅನುಸಾರವಾಗಿ ಗೂಢಚರ್ಯೆ ಪ್ರಕರಣವನ್ನು ರೂಪಿಸಿದ್ದಾರೆ ಎಂದು ಸಿಬಿಐ ಎಫ್ಐಆರ್ ನಲ್ಲಿ ನಮೂದಿಸಿದೆ.

ಅರ್ಜಿದಾರರಾದ (ಎಸ್ ವಿಜಯನ್ ಮತ್ತು ಥಾಂಪಿ ಎಸ್ ದುರ್ಗಾ ದತ್) ನಂಬಿ ನಾರಾಯಣನ್ ವಿರುದ್ಧ ಸುಳ್ಳು ಆರೋಪ ಮತ್ತು ಅದಕ್ಕೆ ಸಂಬಂಧಿಸಿದ ಸುದ್ದಿಗಳಿಂದಾಗಿ ಭಾರತದಲ್ಲಿ ಕ್ರಯೋಜೆನಿಕ್ ತಂತ್ರಜ್ಞಾನದ ತಾಂತ್ರಿಕ ಅಭಿವೃದ್ಧಿಯ ಮೇಲೆ ದೊಡ್ಡ ಪರಿಣಾಮವನ್ನು ಬೀರಿದೆ ಎಂದು ಹೇಳಿದೆ. 

ವಿಜ್ಞಾನಿ ನಂಬಿ ನಾರಾಯಣನ್ ಅವರನ್ನು ಬಂಧಿಸಿದ ವಿಶೇಷ ತನಿಖಾ ತಂಡ(ಎಸ್‌ಐಟಿ)ದ ಭಾಗವಾಗಿದ್ದ ನಿವೃತ್ತ ಕೇರಳ ಪೊಲೀಸ್ ಅಧಿಕಾರಿಗಳಾದ ಎಸ್ ವಿಜಯನ್ ಮತ್ತು ಥಾಂಪಿ ಎಸ್ ದುರ್ಗಾ ದತ್ ಜಂಟಿಯಾಗಿ ಸಲ್ಲಿಸಿದ ಜಾಮೀನು ಅರ್ಜಿಯನ್ನು ವಿರೋಧಿಸಿ ಸಹಾಯಕ ಸಾಲಿಸಿಟರ್ ಜನರಲ್ ಪಿ ವಿಜಯಕುಮಾರ್ ಮೂಲಕ ಸಿಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ನಿರೀಕ್ಷಿತ ಜಾಮೀನು ಅರ್ಜಿಯನ್ನು ಗುರುವಾರ ಹೈಕೋರ್ಟ್ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ನಾರಾಯಣನ್ ಗೆ ಸಂಬಂಧಿಸಿದ ಗೂಢಚರ್ಯೆ ಪ್ರಕರಣದಲ್ಲಿ ತಪ್ಪಾದ ಪೊಲೀಸ್ ಅಧಿಕಾರಿಗಳ ಪಾತ್ರದ ಬಗ್ಗೆ ಉನ್ನತ ಮಟ್ಟದ ಸಮಿತಿಯ ವರದಿಯನ್ನು ಸಿಬಿಐಗೆ ನೀಡಬೇಕೆಂದು ಸುಪ್ರೀಂ ಕೋರ್ಟ್ ಏಪ್ರಿಲ್ 15ರಂದು ಆದೇಶಿಸಿತ್ತು. ಅಲ್ಲದೆ ಈ ಕುರಿತು ಹೆಚ್ಚಿನ ತನಿಖೆ ನಡೆಸುವಂತೆ ಏಜೆನ್ಸಿಗೆ ನಿರ್ದೇಶನ ನೀಡಿತು.

SCROLL FOR NEXT