ದೇಶ

ನೀವೀಗ ಮನೆಯಲ್ಲೇ ಕುಳಿತು ಆಧಾರ್ ಸಂಪರ್ಕಿತ ಮೊಬೈಲ್ ಸಂಖ್ಯೆ ನವೀಕರಿಸಬಹುದು.. ಹೇಗೆ ಗೊತ್ತಾ?

Srinivasamurthy VN

ಬೆಂಗಳೂರು: ಕರ್ನಾಟಕದ ನಾಗರೀಕರು ಶೀಘ್ರದಲ್ಲೇ ತಮ್ಮ ಆಧಾರ್-ಲಿಂಕ್ಡ್ ಮೊಬೈಲ್ ಸಂಖ್ಯೆಯನ್ನು ತಮ್ಮ ಮನೆಯಲ್ಲೇ ಕುಳಿತು ನವೀಕರಿಸಬಹುದು.

ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಇಂತಹುದೊಂದು ಬಹುಮುಖ್ಯ ಸೇವೆಗೆ ಭಾರತೀಯ ಅಂಚೇ ಕಚೇರಿ ಚಾಲನೆ ನೀಡಿದ್ದು, ಪೋಸ್ಟಲ್ ಡೆಲಿವರಿ ಮೂಲಕ ಈ ಸೇವೆಯನ್ನು ಮನೆ ಮನೆಗೆ ತಲುಪಿಸಲಾಗುತ್ತಿದೆ. ಈಗಾಗಲೇ ಇಂತಹುದೊಂದು ವಿನೂತನ ಸೇವೆಯನ್ನು ರಾಜ್ಯದ ಹಲವು ಜಿಲ್ಲೆಗಳಲ್ಲಿ ಪರೀಕ್ಷಾರ್ಥ ಪ್ರಯೋಗ ಮಾಡಲಾಗುತ್ತಿದ್ದು, ಅದು ಯಶಸ್ವೀ ಕೂಡ ಆಗಿದೆ. ಮುಂದಿನ ಹಂತದಲ್ಲಿ ಮನೆಯಿಂದಲೇ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ಕಾರ್ಡ್ ನೋಂದಣಿ ಸಹ ಪ್ರಾರಂಭಿಸಲಾಗುತ್ತದೆ. ದೇಶಾದ್ಯಂತ ಇಂಡಿಯಾ ಪೋಸ್ಟ್ ಪರಿಚಯಿಸಿದ ಈ ಸೇವೆಯನ್ನು ಮೊದಲು ಅಳವಡಿಸಿಕೊಂಡ ರಾಜ್ಯ  ಎಂಬ ಕೀರ್ತಿಗೆ ಕರ್ನಾಟಕ ಭಾಜನವಾಗಿದೆ.

ಈ ಕುರಿತಂತೆ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತನಾಡಿದ ಹಿರಿಯ ಅಂಚೆ ಅಧಿಕಾರಿಯೊಬ್ಬರು, ಯೂನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ), ಮಕ್ಕಳ ದಾಖಲಾತಿ ಲೈಟ್ ಕ್ಲೈಂಟ್ (ಸಿಇಎಲ್ಸಿ) ಅಭಿವೃದ್ಧಿಪಡಿಸಿದ ಅಪ್ಲಿಕೇಶನ್‌ನಿಂದ ಈ ಸೇವೆ ಲಭ್ಯ ಎಂದು ಹೇಳಿದ್ದಾರೆ.  ಅಂಚೆ ವಿತರಣಾ ವ್ಯಕ್ತಿಗೆ ಬಯೋಮೆಟ್ರಿಕ್ ಸ್ಕ್ಯಾನರ್ ಸಹ ಹೊಂದಿದ್ದು, ಆಧಾರ್ ಕಾರ್ಡುದಾರರ ಬೆರಳಚ್ಚುಗಳನ್ನು ಕ್ರಾಸ್ ಚೆಕಿಂಗ್ಗಾಗಿ ತೆಗೆದುಕೊಳ್ಳಬಹುದು. ಅದು ಸರಿ ಇದ್ದರೆ, ಅವರು ಯಾವುದೇ ಸಮಯದಲ್ಲಿ ಅಪ್ಲಿಕೇಶನ್ ಬಳಸಿ ಫೋನ್ ಸಂಖ್ಯೆಯನ್ನು ನವೀಕರಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಪ್ರಾಯೋಗಿಕ ಆಧಾರದ ಮೇಲೆ ಬಳಸುತ್ತಿರುವ ಸುಮಾರು 600 ಅಂಚೆ ಸಿಬ್ಬಂದಿಗಳ ಫೋನ್‌ಗಳಲ್ಲಿ ಅಪ್ಲಿಕೇಶನ್ ಅನ್ನು ಈಗಾಗಲೇ ಸಕ್ರಿಯಗೊಳಿಸಲಾಗಿದೆ. "ವಿಜಯಪುರ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಇಂತಹ ಹೆಚ್ಚಿನ ಪ್ರಯೋಗಗಳನ್ನು ಮಾಡಲಾಗಿದೆ ಮತ್ತು ಅವು ಯಶಸ್ವಿಯಾಗಿವೆ" ಎಂದು ಅವರು ಹೇಳಿದರು.

ನಗರ ಪ್ರದೇಶಗಳಲ್ಲಿರುವವರು ಮೊಬೈಲ್ ಸಂಖ್ಯೆಯನ್ನು ಸುಲಭವಾಗಿ ಬದಲಾಯಿಸುವುದಿಲ್ಲವಾದರೂ, ಟೆಲಿಕಾಂ ಕಂಪೆನಿಗಳು ಆಫರ್‌ಗಳನ್ನು ಘೋಷಿಸಿದಾಗಲೆಲ್ಲಾ ಇದನ್ನು ಗ್ರಾಮೀಣ ಪ್ರದೇಶಗಳಲ್ಲಿ ಆಗಾಗ್ಗೆ ಮಾಡಲಾಗುತ್ತದೆ. ಆದ್ದರಿಂದ, ಗ್ರಾಮೀಣ ಪ್ರದೇಶದವರಿಗೆ ಇದು ಹೆಚ್ಚು ಪ್ರಯೋಜನವನ್ನು ನೀಡುತ್ತದೆ" ಎಂದು ಅವರು ಹೇಳಿದರು. "ಮಕ್ಕಳ ಪೋಷಕರ ಆಧಾರ್ ಸಂಖ್ಯೆಗಳು ಈಗಾಗಲೇ ಲಭ್ಯವಿರುವುದರಿಂದ, ಸಿಬ್ಬಂದಿ ತಮ್ಮ ನೋಂದಣಿಯನ್ನು ಮನೆ ಬಾಗಿಲಲ್ಲಿ ಮಾಡಬಹುದು ಎಂದು ಅಧಿಕಾರಿ ಹೇಳಿದರು.

SCROLL FOR NEXT