ಹಿಮಂತ ಬಿಸ್ವಾ ಶರ್ಮಾ 
ದೇಶ

ಹಿಂದೂ ಹುಡುಗ ಹಿಂದೂ ಹುಡುಗಿಗೆ ಸುಳ್ಳು ಹೇಳುವುದೂ ಕೂಡ 'ಜಿಹಾದ್'..ಇದರ ವಿರುದ್ಧ ಕಾನೂನು ತರುತ್ತೇವೆ: ಅಸ್ಸಾಂ ಸಿಎಂ ಹಿಮಾಂತ ಬಿಸ್ವ ಶರ್ಮಾ

ಹಿಂದೂ ಹುಡುಗ ಹಿಂದೂ ಹುಡಿಗಿಗೆ ಸುಳ್ಳು ಹೇಳುವುದೂ ಕೂಡ ಒಂದು ರೀತಿ ಜಿಹಾದ್ ಎಂದು ಅಭಿಪ್ರಾಯಪಟ್ಟಿರುವ ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ ಅವರು ಅದರ ವಿರುದ್ಧ ಕಠಿಣ ಕಾನೂನು ತರುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.

ಗುವಾಹತಿ: ಹಿಂದೂ ಹುಡುಗ ಹಿಂದೂ ಹುಡಿಗಿಗೆ ಸುಳ್ಳು ಹೇಳುವುದೂ ಕೂಡ ಒಂದು ರೀತಿ ಜಿಹಾದ್ ಎಂದು ಅಭಿಪ್ರಾಯಪಟ್ಟಿರುವ ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ ಅವರು ಅದರ ವಿರುದ್ಧ ಕಠಿಣ ಕಾನೂನು ತರುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.

ಗುವಾಹತಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂಧುತ್ವ 5 ಸಾವಿರ ವರ್ಷಗಳಷ್ಟು ಹಳೆಯ ಜೀವನ ಪದ್ಧತಿಯಾಗಿದೆ. ಹೆಚ್ಚಿನ ಇತರೆ ಧರ್ಮಗಳ ಅನುಯಾಯಿಗಳು ಕೂಡ ಹಿಂದೂಗಳ ವಂಶಸ್ಥರೇ ಆಗಿದ್ದಾರೆ. ಹೀಗಾಗಿ ಇಂತಹ ಪುರಾತನ ಧರ್ಮದ ರಕ್ಷಣೆ ಮಾಡಬೇಕು. ಹಿಂದೂ ಹುಡುಗ ಹಿಂದೂ  ಹುಡಿಗಿಗೆ ಸುಳ್ಳು ಹೇಳುವುದೂ ಕೂಡ ಒಂದು ರೀತಿ ಜಿಹಾದ್. ಅದರ ವಿರುದ್ಧ ಕಠಿಣ ಕಾನೂನು ತರುತ್ತೇವೆ ಎಂದು ಹೇಳಿದ್ದಾರೆ.

ಸ್ಥಳೀಯ ಸಂಸ್ಕೃತಿ ರಕ್ಷಣೆಗೆ ಹೊಸ ಇಲಾಖೆ
ಇದೇ ವೇಳೆ ಬುಡಕಟ್ಟು ಮತ್ತು ಇತರ ಸ್ಥಳೀಯ ಸಮುದಾಯಗಳಿಗೆ ಸೇರಿದ ಜನರ ಸಂಸ್ಕೃತಿ ಮತ್ತು ಆಚರಣೆಗಳನ್ನು ರಕ್ಷಿಸಲು ಹೊಸ ಇಲಾಖೆಯನ್ನು ರಚಿಸಲು ಅಸ್ಸಾಂ ಸಚಿವ ಸಂಪುಟ ಶನಿವಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಮಾಹಿತಿ ನೀಡಿದರು. ಹೊಸ ಇಲಾಖೆ, ರಾಜ್ಯದ  ಸ್ಥಳೀಯ ಜನಸಂಖ್ಯೆಯು ಅವರ ನಂಬಿಕೆ ಮತ್ತು ಸಂಪ್ರದಾಯಗಳನ್ನು ಕಾಪಾಡಿಕೊಳ್ಳುವುದನ್ನು ಖಚಿತಪಡಿಸುತ್ತದೆ ಮತ್ತು ಅವರಿಗೆ ಅಗತ್ಯವಾದ ಬೆಂಬಲವನ್ನು ನೀಡುತ್ತದೆ ಎಂದು ಹೇಳಿದರು. 

'ಯೋಜನೆಗಳ ತ್ವರಿತ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಆರ್ಥಿಕ ಮತ್ತು ಆಡಳಿತಾತ್ಮಕ ಸುಧಾರಣೆಗಳು ಅಗತ್ಯವೆಂದು ಸಭೆಯಲ್ಲಿ ಕ್ಯಾಬಿನೆಟ್ ಒಪ್ಪಿಕೊಂಡಿದೆ. 2 ಕೋಟಿ ಮತ್ತು ಅದಕ್ಕಿಂತ ಕಡಿಮೆ ಮೌಲ್ಯದ ಯೋಜನೆಗಳಿಗೆ ಇಲಾಖಾ ಮುಖ್ಯಸ್ಥರಿಗೆ ಅನುಮತಿ ನೀಡಲು ಅರ್ಹತೆ ಇದೆ ಎಂದು ನಿರ್ಧರಿಸಿದೆ  ಮತ್ತು 2 ಕೋಟಿ ರೂ.ಗಳಿಂದ 5 ಕೋಟಿ ರೂ.ಗಳವರೆಗಿನ ಮೌಲ್ಯದ ಯೋಜನೆಗಳಿಗೆ ಅನುಮತಿ ನೀಡಲು ಮುಖ್ಯ ಕಾರ್ಯದರ್ಶಿ ನೇತೃತ್ವದ ಹಣಕಾಸು ಸಮಿತಿಗೆ ಅನುಮತಿ ನೀಡಲಾಗಿದೆ. ಹಣಕಾಸು ಸಚಿವರ ನೇತೃತ್ವದ ವಿಶೇಷ ಸ್ಥಾಯಿ ಸಮಿತಿಯು 5 ಕೋಟಿ ರೂ.ಗಳಿಂದ 100 ಕೋಟಿ ರೂ.ಗಳವರೆಗೆ ಮೌಲ್ಯದ  ಯೋಜನೆಗಳಿಗೆ ಅನುಮೋದನೆ ನೀಡಲಿದೆ, ಮತ್ತು 100 ಕೋಟಿ ರೂ.ಗಳಿಗಿಂತ ಹೆಚ್ಚಿನ ಹಣವನ್ನು ಒಳಗೊಂಡಿರುವ ಯೋಜನೆಗಳಿಗೆ ಕ್ಯಾಬಿನೆಟ್ ಮಾತ್ರ ಅನುಮೋದನೆಗೆ ಮುಂದಾಗಲಿದೆ ಎಂದು ಅವರು ಹೇಳಿದರು. 
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೈಟ್ ಶಿಫ್ಟ್ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಎದುರಾಯ್ತು ಸಾವು: ತಿರುಪತಿಯ ಫಾರ್ಮಾ ಘಟಕದಲ್ಲಿ ಸಿಡಿದ ಬಾಯ್ಲರ್, ಐವರು ಕಾರ್ಮಿಕರು ಸಾವು!

Asian Games 2026: ಇತಿಹಾಸ ಬರೆದ ಮೈಸೂರಿನ ಪ್ರಣವಿ ಅರಸ್; ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಗಾಲ್ಫರ್

ಏಷ್ಯನ್ ಗೇಮ್ಸ್ 2026 ಫೈನಲ್: ವೈಭವ್ ಸೂರ್ಯವಂಶಿ ಅಣಕಿಸಿದ ಪಾಕ್ ಸ್ಟಾರ್ ಆಟಗಾರ! ಏನು ಮಾಡಿದ್ರು ಗೊತ್ತಾ? Video

'ಅಭಿವೃದ್ಧಿಶೀಲ ರಾಷ್ಟ್ರಗಳ ಕೈಕಟ್ಟಬೇಡಿ, ಡಂಪಿಂಗ್ ವಿರುದ್ಧ ಸಾಕ್ಷ್ಯಾಧಾರಿತ ಕ್ರಮ ಕೈಗೊಳ್ಳಿ': G20 ಸಭೆಯಲ್ಲಿ ಭಾರತ ಕೆಂಡ

ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಅಪಾಯಕ್ಕೆ ಸಿಲುಕಿದ ಪ್ರಯಾಣಿಕ, ಕ್ಷಣಮಾತ್ರದಲ್ಲಿ ಎಚ್ಚೆತ್ತ RPF ಕಾನ್‌ಸ್ಟೆಬಲ್, ರಕ್ಷಣೆ-Video