ದೇಶ

ಪಿಎನ್ ಬಿ ವಂಚನೆ ಪ್ರಕರಣ: ಉದ್ಯಮಿ ಮೆಹುಲ್ ಚೋಕ್ಸಿಗೆ ಜಾಮೀನು, ಆ್ಯಂಟಿಗುವಾದಲ್ಲಿ ಚಿಕಿತ್ಸೆಗೆ ಕೋರ್ಟ್ ಅನುಮತಿ

Srinivasamurthy VN

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರೂ ಕೋಟಿ ರೂ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡೊಮೆನಿಕಾದಲ್ಲಿ ಬಂಧನದಲ್ಲಿರುವ ಉದ್ಯಮಿ ಮೆಹುಲ್ ಚೋಕ್ಸಿಗೆ ಕೊನೆಗೂ ಜಾಮೀನು ದೊರೆತಿದೆ.

ಡೊಮೆನಿಕಾ ನ್ಯಾಯಾಲಯ ಮೆಹುಲ್ ಚೋಕ್ಸಿಗೆ ಮಧ್ಯಂತರ ಜಾಮೀನು ನೀಡಿದ್ದು, ವೈದ್ಯಕೀಯ ಚಿಕಿತ್ಸೆ ನಿಮಿತ್ತ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ ಎಂದು ತಿಳಿದುಬಂದಿದೆ. 

ಷರತ್ತು ಬದ್ದ ಜಾಮೀನು
ಇನ್ನು ಜಾಮೀನು ನೀಡಿಕೆಗೆ ಕೋರ್ಟ್ ಹಲವು ಷರತ್ತುಗಳನ್ನು ವಿಧಿಸಲಾಗಿದ್ದು. ಪ್ರಮುಖವಾಗಿ ಈ ಜಾಮೀನು ಕೇವಲ ವೈದ್ಯಕೀಯ ತುರ್ತು ಪರಿಸ್ಥಿತಿ ಹಿನ್ನಲೆಯಲ್ಲಿ ಮಾತ್ರ ನೀಡಲಾಗಿದೆ ಎಂದು ಹೇಳಿದೆ. ಆ್ಯಂಟಿಗುವಾ ಮತ್ತು ಬಾರ್ಬುಡಾದಲ್ಲಿ ಚಿಕಿತ್ಸೆ ಪಡೆಯಲು ಮಾತ್ರ ಅವಕಾಶ ನೀಡಿದೆ. ಅಲ್ಲದೆ ವೈದ್ಯಕೀಯ  ನೆಲೆಗಟ್ಟಿನ ಮೇಲೆ ಚೋಕ್ಸಿಗೆ ಆ್ಯಂಟಿಗುವಾಗೆ ಪ್ರಯಾಣಿಸಲು ಅನುಮತಿ ನೀಡಿದ್ದು, ಚಿಕಿತ್ಸೆ ಪಡೆಯುವಂತೆ ಸೂಚಿಸಿದೆ. 

SCROLL FOR NEXT