ದೇಶ

ಸೋದರಿಗೆ ಸಂಪುಟದಲ್ಲಿ ಸಿಗದ ಸ್ಥಾನ; ಪಕ್ಷದಲ್ಲಿ ತಮ್ಮ ಬಗ್ಗೆ ನಿರ್ಲಕ್ಷ್ಯ: ಮೋದಿ- ನಡ್ಡಾ ಭೇಟಿ ಮಾಡಿದ ಪಂಕಜಾ ಮುಂಡೆ!

Shilpa D

ಮುಂಬಯಿ: ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ ತಮ್ಮ ಸಹೋದರಿಗೆ ಸ್ಥಾನ ನೀಡದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕಿ ಪಂಕಜಾ ಮುಂಡೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿದ್ದಾರೆ.

ಹಿಂದುಳಿದ ವರ್ಗಗಳ ಪ್ರಮುಖ ನಾಯಕರಾಗಿದ್ದ ಗೋಪಿನಾಥ ಮುಂಡೆ ಅವರ ಪುತ್ರಿ ಪಂಕಜಾ ಮುಂಡೆ ಅವರು ತಮ್ಮ ಸಹೋದರಿ ಸಂಸದೆ ಪ್ರೀತಮ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ದೊರೆಯಲಿದೆ ಎಂದು ನಿರೀಕ್ಷಿಸಿದ್ದರು, 

ಬಿಜೆಪಿ ಒಬಿಸಿ ಮತದಾರರನ್ನು ಓಲೈಸುತ್ತಿರುವ ಸಮಯದಲ್ಲಿ ಈ ಬೆಳವಣಿಗೆ ಕಂಡು ಬರುತ್ತದೆ. "ಮುಂಡೆ ಕುಟುಂಬಕ್ಕೆ ಏನನ್ನೂ ನೀಡಲು ಬಿಜೆಪಿ ಬಯಸುವುದಿಲ್ಲ ಎಂದಿದ್ದಾರೆ.

ಪಕ್ಷದ ನಿರ್ಧಾರಕ್ಕೆ ತಾನು ಬದ್ಧನಾಗಿರುವುದಾಗಿ ಪಂಕಜಾ ಹೇಳಿಕೊಂಡಿದ್ದರೂ, ಅವರ ನಿಷ್ಠೆಯಿಂದಾಗಿ ಹಲವಾರು ಬಿಜೆಪಿ ನಾಯಕರು ರಾಜೀನಾಮೆ ನೀಡಿದ್ದಾರೆ ಮತ್ತು ಇತರರು ಸಾಮೂಹಿಕ ರಾಜೀನಾಮೆ ನೀಡುವ ಬೆದರಿಕೆ ಹಾಕಿದ್ದಾರೆ. ಪಕ್ಷದಲ್ಲಿ ಇಬ್ಬರು ಸಹೋದರಿಯರ ಪ್ರಾಮುಖ್ಯತೆ ಮೊಟಕುಗೊಳಿಸುವ ಯೋಜನೆ ಇದಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಕಳೆದ ಚುನಾವಣೆಯಲ್ಲಿ ತಮ್ಮ ಸೋದರ ಸಂಬಂಧಿಗೆ ಬಿಜೆಪಿ ನಾಯಕರು ಸಹಾಯ ಮಾಡಿದ ಕಾರಣ ಪಂಕಜಾ ಸೋತಿದ್ದರು.  ಎಂಎಲ್‌ಸಿ ಹುದ್ದೆ ನೀಡಿ ಆಕೆಗೆ ಪುನರ್ವಸತಿ ಕಲ್ಪಿಸಬೇಕಿತ್ತು. ಆದರೆ ಅದನ್ನು ಕಡೆಗಣಿಸಲಾಗಿದೆ.

ಇತ್ತೀಚಿನ ಕ್ಯಾಬಿನೆಟ್ ವಿಸ್ತರಣೆಯಲ್ಲಿ ಪ್ರೀತಮ್ ಮುಂಡೆ ಅವರನ್ನು ಕಡೆಗಣಿಸಲಾಗಿದೆ, ಬಿಜೆಪಿ ಇಬ್ಬರು ಸಹೋದರಿಯರನ್ನು ಬಯಸುವುದಿಲ್ಲ ಎಂದು ತೋರಿಸುತ್ತದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

SCROLL FOR NEXT