ಸಾಂದರ್ಭಿಕ ಚಿತ್ರ 
ದೇಶ

ಕೊರೋನಾ ಕಲಿಸಿದ ಪಾಠಗಳು: ಕೊನೆಗೂ ಆರೋಗ್ಯ ಕ್ಷೇತ್ರಕ್ಕೆ ಸಿಕ್ಕಿದೇ ಆದ್ಯತೆ!

ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಈ ದೇಶಕ್ಕೆ ಪ್ರಚೋದನೆ ಅಗತ್ಯವಿದ್ದಂತಹ ಸಂದರ್ಭದಲ್ಲಿ ಸಾಂಕ್ರಾಮಿಕವು ಹಲವಾರು ನ್ಯೂನತೆಗಳನ್ನು ಬಹಿರಂಗಪಡಿಸಿದೆ.  

ನವದೆಹಲಿ: ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಲು ಈ ದೇಶಕ್ಕೆ ಪ್ರಚೋದನೆ ಅಗತ್ಯವಿದ್ದಂತಹ ಸಂದರ್ಭದಲ್ಲಿ ಸಾಂಕ್ರಾಮಿಕವು ಹಲವಾರು ನ್ಯೂನತೆಗಳನ್ನು ಬಹಿರಂಗಪಡಿಸಿದೆ.  

ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಕೊರತೆ, ವೆಂಟಿಲೇಟರ್, ಇಸಿಎಂಒನಂತಹ ವಿಶೇಷ ಸಲಕರಣೆಗಳು ಮತ್ತು ಸಾಕಷ್ಟು ವೈದ್ಯಕೀಯ ಸಿಬ್ಬಂದಿ ಕೊರತೆಯಂತಹ ಸವಾಲುಗಳು ಕೋವಿಡ್-19 ಎರಡನೇ ಅವಧಿಯಲ್ಲಿ ಮುಂಚೂಣಿಯಲ್ಲಿರುವುದರೊಂದಿಗೆ, ಆರೋಗ್ಯ ಕ್ಷೇತ್ರದ ಮಿತಿಯನ್ನು ಅಲ್ಲಗಳೆಯುವಂತಿಲ್ಲ.

ದೇಶದ ಎಲ್ಲಾ ಜಿಲ್ಲೆಗಳಲ್ಲಿ  ಆಕ್ಸಿಜನ್ ಪ್ಲಾಂಟ್ ಗಳು, ತುರ್ತು ನಿಗಾ ಹಾಸಿಗೆಗಳು, ಅಂತಿಮ ವರ್ಷದ ವೈದ್ಯಕೀಯ ಮತ್ತು ನರ್ಸಿಂಗ್ ವಿದ್ಯಾರ್ಥಿಗಳನ್ನು ಕರ್ತವ್ಯಕ್ಕೆ ಹಾಜರುಪಡಿಸುವುದು ಮತ್ತಿತರ ಪ್ರಯತ್ನಗಳ ಮೂಲಕ ಸ್ವಲ್ಪ ಮಂಕಾಗುವಿಕೆಯಿಂದ ತಪ್ಪಿಸಿಕೊಂಡಂತಾಗಿದೆ. 

ಆದಾಗ್ಯೂ, ಒಟ್ಟಾರೇಯಾಗಿ ಆರೋಗ್ಯದ ಗುಣಮಟ್ಟ ಸುಧಾರಿಸುವುದಕ್ಕೆ ಸಮಯಕ್ಕೆ ಅನುಗುಣವಾದ ಫಲಿತಾಂಶಗಳನ್ನು ಗುರಿಯಾಗಿಸುವ ಅವಶ್ಯಕತೆಯಿದೆ. ಉದಾಹರಣೆಗೆ ಜಪಾನ್ ಮತ್ತು ದಕ್ಷಿಣ ಕೊರಿಯಾದಂತಹ ರಾಷ್ಟ್ರಗಳಲ್ಲಿ ಪ್ರತಿ 10 ಸಾವಿರ ಜನಸಂಖ್ಯೆಗೆ 100 ಬೆಡ್ ಗಳಿಂದ ಐದು ಆಸ್ಪತ್ರೆ ಬೆಡ್ ಗಳಿದ್ದರೆ ಭಾರತದಲ್ಲಿ ಪ್ರತಿ 10 ಸಾವಿರ ಜನಸಂಖ್ಯೆಗೆ 8. 6 ವೈದ್ಯರು ಇರುತ್ತಾರೆ.

ಈ ನಿಟ್ಟಿನಲ್ಲಿ  ಕಿರು ಅವಧಿಯ ತುರ್ತು ಪೂರ್ವ ಸಿದ್ಧತೆಯಾಗಿ ಮಕ್ಕಳ ಆರೈಕೆಗೆ ಒಂದು ವರ್ಷಕ್ಕೆ 23,220 ಕೋಟಿಯನ್ನು ಹಣಕಾಸು ಸಚಿವರು ಘೋಷಿಸಿದ್ದಾರೆ. ಕಡಿಮೆ ಸೇವೆ ಸಲ್ಲಿಸುತ್ತಿರುವ ಪ್ರದೇಶಗಳಿಗೆ 50,000 ಕೋಟಿ ರೂ. ಮೀಸಲಿಟಿದ್ದಾರೆ.  ಆರೋಗ್ಯ ಕ್ಷೇತ್ರದಲ್ಲಿನ ವೆಚ್ಚ ಶೇ.14.9ಕ್ಕೆ ಹೆಚ್ಚಳವಾಗಿದೆ. ಆದರೆ, 2015ರ ಆರ್ಥಿಕ ವರ್ಷದಲ್ಲಿ 1,008 ರೂಪಾಯಿ ಇದ್ದ  ತಲಾ ಖರ್ಚು 2020ರ ಆರ್ಥಿಕ ವರ್ಷದಲ್ಲಿ 1944 ರೂ.ಗೆ ಏರಿಕೆಯಾಗಿದೆ. ಬ್ರಿಕ್ಸ್ ರಾಷ್ಟ್ರಗಳಿಗೆ ಹೋಲಿಸಿದರೆ ಇದು ಅಸಮರ್ಕವಾಗಿದೆ.

ಸಾಂಕ್ರಾಮಿಕ ರೋಗದ ಕಾರಣದಿಂದ ಆರೋಗ್ಯ ಕ್ಷೇತ್ರದಲ್ಲಿನ ಒಟ್ಟಾರೇ ಹಂಚಿಕೆಯು ಶೇ 1.4 ರಷ್ಟಿದೆ. ಕೋವಿಡ್-19 ವಿರುದ್ಧದ ಲಸಿಕೆ ಅಭಿಯಾನ ಮತ್ತು ಅಗತ್ಯವಿದ್ದಾಗ ಹೆಜ್ಜೆ ಹಾಕುವಲ್ಲಿ ಕೇಂದ್ರ ಸರ್ಕಾರವು ಪ್ರಮುಖ ಪಾತ್ರ ವಹಿಸುತ್ತದೆಯಾದರೂ, ಇದು ದೇಶದ ಒಟ್ಟು ಹಣದ 25 ಶೇಕಡಾವನ್ನು ಆರೋಗ್ಯಕ್ಕಾಗಿ ಖರ್ಚು ಮಾಡುತ್ತದೆ.

ಮೂಲ ಬರಹ: ಸುಬ್ರಕಾಂತ್ ಪಾಂಡ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

SCROLL FOR NEXT