ದೇಶ

ಉತ್ತರ ಪ್ರದೇಶದಲ್ಲಿ 2017 ರಿಂದ ನಡೆದ ಪೊಲೀಸ್ ಎನ್ ಕೌಂಟರ್ ನಲ್ಲಿ 139 ಕ್ರಿಮಿನಲ್ ಗಳ ಹತ್ಯೆ: ಅಧಿಕಾರಿಗಳ ಮಾಹಿತಿ

Nagaraja AB

ಲಖನೌ: ಉತ್ತರ ಪ್ರದೇಶ ಪೊಲೀಸರು 2017 ರಿಂದಲೂ ನಡೆಸಿರುವ ಎನ್ ಕೌಂಟರ್ ಗಳಲ್ಲಿ ಒಟ್ಟಾರೇ 139 ಕ್ರಿಮಿನಲ್ ಗಳು ಹತ್ಯೆಯಾಗಿದ್ದು, 3,196 ಮಂದಿ ಗಾಯಗೊಂಡಿದ್ದಾರೆ. ಇಂತಹ ಘಟನೆಗಳಲ್ಲಿ 13 ಪೊಲೀಸರು ಸಾವನ್ನಪ್ಪಿರುವುದಾಗಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಸೂಚನೆ ಮೇರೆಗೆ ನಟೋರಿಯಲ್ ಕ್ರಿಮಿನಲ್ ಗಳು, ಅವರ ಸಹಚರರು ಮತ್ತು ಮಾಫಿಯಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವಾನಿಶ್ ಕುಮಾರ್ ಅವಾಸ್ತಿ ಹೇಳಿದ್ದಾರೆ.

ಮಾರ್ಚ್ 20, 2017 ಯಿಂದ ಈ ವರ್ಷದ ಜೂನ್ 20 ರವರೆಗೆ 139 ಕ್ರಿಮಿನಲ್ ಗಳು ಪೊಲೀಸ್ ಎನ್ ಕೌಂಟರ್ ನಲ್ಲಿ ಹತರಾಗಿದ್ದರೆ 3,196 ಕ್ರಿಮಿನಲ್ ಗಳ ಗಾಯಗೊಂಡಿದ್ದಾರೆ. 13 ಪೊಲೀಸರು ಹುತಾತ್ಮರಾಗಿದ್ದರೆ 1,122 ಪೊಲೀಸರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸರ್ಕಾರವು ಅಪರಾಧದ ಬಗ್ಗೆ ಶೂನ್ಯ ಸಹಿಷ್ಣು ನೀತಿಯನ್ನು ಹೊಂದಿದೆ ಮತ್ತು ಸಂಘಟಿತ ಅಪರಾಧವನ್ನು ಇಲ್ಲಿಯವರೆಗೆ ತೆಗೆದುಹಾಕಲಾಗಿದೆ ಎಂದು ಅವಾಸ್ತಿ ಹೇಳಿದರು. ದರೋಡೆಕೋರರ ಕಾಯ್ದೆಯಡಿ 1,500 ಕೋಟಿ ರೂ.ಗಳ ಅಕ್ರಮ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ವರ್ಷದ ಜನವರಿಂದ ಈವರೆಗೂ 1,300 ಕೋಟಿ ರೂ. ಮೊತ್ತದ ಆಸ್ತಿಯನ್ನು ಸಹ ವಶಕ್ಕೆ ಪಡೆಯಲಾಗಿದೆ ಎಂದು ಅವರು ಹೇಳಿದರು.

ಕಳೆದ ನಾಲ್ಕು ವರ್ಷಗಳಲ್ಲಿ ಗ್ಯಾಂಗ್ ಸ್ಟಾರ್ ಕಾಯ್ದೆಯಡಿ ಸುಮಾರು 13,700 ಪ್ರಕರಣಗಳು ದಾಖಲಾಗಿದ್ದು, 43 ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿರ್ದೇಶನದ ಮೇರೆಗೆ ತಿಂಗಳ ಪ್ರತಿ ಎರಡನೇ ಹಾಗೂ ನಾಲ್ಕನೇ ಶನಿವಾರ ಠಾಣಾ ಸಮಧಾನ ದಿವಸ್ ಆಯೋಜಿಸಿ, ಸಾರ್ವಜನಿಕರ ಕುಂದುಕೊರತೆ ಆಲಿಸಲಾಗುವುದು ಎಂದು ಅವಾಸ್ತಿ ತಿಳಿಸಿದರು.

SCROLL FOR NEXT