ದೇಶ

ಬಕ್ರೀದ್ ಗೆ ಕೋವಿಡ್ ನಿರ್ಬಂಧಗಳ ಸಡಿಲಿಕೆ ಏಕೆ? ಕೇರಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪ್ರಶ್ನೆ

Nagaraja AB

ನವದೆಹಲಿ: ಬಕ್ರೀದ್ ಆಚರಣೆಗಳಿಗೆ ಕೋವಿಡ್ -19 ನಿರ್ಬಂಧಗಳನ್ನು ಸಡಿಲಿಸಿರುವುದು ಏಕೆ ಎಂದು ವಿವರಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇರಳ ಸರ್ಕಾರವನ್ನು ಕೇಳಿದೆ.

ಕೇಂದ್ರ ಆರೋಗ್ಯ ಸಚಿವಾಲಯದಂತೆ, ಹೆಚ್ಚಿನ ಸಂಖ್ಯೆಯ ಕೋವಿಡ್ -19 ಪ್ರಕರಣಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕೇರಳ ಒಂದಾಗಿದೆ. ರಾಜ್ಯ ಸರ್ಕಾರ ಬಕ್ರೀದ್ ಆಚರಣೆಗಾಗಿ  ಜುಲೈ 18 ರಿಂದ ಜುಲೈ 21ವರೆಗೆ ಕೋವಿಡ್ -19 ನಿರ್ಬಂಧಗಳನ್ನು ಸಡಿಲಿಸಿದೆ. ಈ ಕುರಿತಂತೆ ರಾಜಕೀಯ ವಿಶ್ಲೇಷಕ ಮತ್ತು ಉದ್ಯಮಿ ಪಿ ಕೆ ಡಿ ನಂಬಿಯಾರ್ ಕೇರಳ ಸರ್ಕಾರದ ನಿರ್ಧಾರದ ವಿರುದ್ಧ ಸರ್ವೋಚ್ಛ ನ್ಯಾಯಾಲಯದಲ್ಲಿ ಮನವಿ ಅರ್ಜಿಯನ್ನು ಸಲ್ಲಿಸಿದ್ದಾರೆ. 

ನಂಬಿಯಾರ್ ಪರವಾಗಿ ಹಾಜರಾದ ವಕೀಲ ವಿಕಾಸ್ ಸಿಂಗ್, ‘ಗಂಭೀರ ಪರಿಸ್ಥಿತಿಯಲ್ಲಿ ಅಮಾಯಕ ನಾಗರಿಕರ ಆರೋಗ್ಯ ಮತ್ತು ಜೀವವನ್ನು ಬಲಿಕೊಡಲು ಕೇರಳ ಸರ್ಕಾರ ಹೊರಟಿದೆ. ರಾಜಕೀಯ ಹಿತಾಸಕ್ತಿಗಳು ದೇಶದ ನಾಗರಿಕರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಈ ವಿಷಯ ಕುರಿತ ಅರ್ಜಿ ವಿಚಾರಣೆ ನಡೆಸಿದ ಆರ್.ಎಫ್. ನಾರಿಮನ್ ಮತ್ತು ಬಿ.ಆರ್. ಗವಾಯ್ ಅವರನ್ನೊಳಗೊಂಡ ಪೀಠ, 24 ಗಂಟೆಯೊಳಗೆ ವಿವರಣೆ ನೀಡುವಂತೆ ಕೇರಳ ಸರ್ಕಾರಕ್ಕೆ ಸೂಚಿಸಿದ್ದು, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.

SCROLL FOR NEXT